ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ವಿಶ್ವವಿದ್ಯಾಲಯದ ಬೋಧಕ – ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳ ನಡುವೆ ಭ್ರಾತೃತ್ವ, ಸಾಮರ್ಥ್ಯ ಮತ್ತು ಉತ್ಪಾದಕತೆಗಳು ವೃದ್ಧಿಸಲಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ #Kuvempu University ಕುಲಪತಿ ಪ್ರೊ. ಶರತ್ ಅನಂತಮೂರ್ತಿ #Sharath Ananthamurthy ಅಭಿಪ್ರಾಯಪಟ್ಟರು.
ವಿಶ್ವವಿದ್ಯಾಲಯದ ಪಠ್ಯೇತರ ಚಟುವಟಿಕೆ ಘಟಕದ ವತಿಯಿಂದ ಮೂರು ದಿನಗಳ ಕಾಲ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಿಗಾಗಿ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು “ಸಹ್ಯಾದ್ರಿ ಸಡಗರ” ಉತ್ಸವದ ಅಡಿ ಸೇ. 26-28ರವರೆಗೆ ವಿವಿಯಲ್ಲಿ ಆಯೋಜಿಸಲಾಗಿದೆ. ಜಾಥಾದೊಂದಿಗೆ ಹೆಜ್ಜೆಹಾಕುವ ಮೂಲಕ ಕುಲಪತಿಗಳು ಚಾಲನೆ ನೀಡಿ ಮಾತನಾಡಿದರು.
ವಿಶ್ವವಿದ್ಯಾಲಯವು ಉನ್ನತ ಮಟ್ಟದ ಸಂಸ್ಥೆಯಾಗಿದ್ದು ಇಲ್ಲಿ ಪ್ರತಿಯೊಬ್ಬರ ಪಾತ್ರವೂ ಮಹತ್ವದ್ದಾಗಿದೆ. ಸಹ್ಯಾದ್ರಿ ಸಡಗರದ ಮೂಲಕ ಬೋಧಕ- ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ನಡುವೆ ಭ್ರಾತೃತ್ವ ಬೆಸೆಯುವ, ಬೆಳೆಸುವ ವೇದಿಕೆ ಒದಗಿಸಲಾಗಿದೆ. ಒಟ್ಟಿಗೆ ಕೆಲಸ ಮಾಡುವ ಮೂಲಕ ವಿವಿಯನ್ನು ಎತ್ತರಕ್ಕೆ ಕೊಂಡೊಯ್ಯಲಾಗುವುದು ಎಂದರು.
Also read: ಕೂಡಲಿ ಶಾರದಾ ಪೀಠದಲ್ಲಿ ನವರಾತ್ರಿ ಉತ್ಸವ | ಪ್ರತಿ ದಿನ ಅಕ್ಷರಾಭ್ಯಾಸಕ್ಕೆ ಅವಕಾಶ
ಈ ಸಂದರ್ಭದಲ್ಲಿ ವಿವಿಯ ಆಡಳಿತಂಗ ಕುಲಸಚಿವ ಎ ಎಲ್ ಮಂಜುನಾಥ್ ಮತ್ತು ಪರೀಕ್ಷಾಂಗ ಕುಲಸಚಿವ ಪ್ರೊಫೆಸರ್ ಎಸ್ ಎಂ ಗೋಪಿನಾಥ್, ವಿಶ್ವವಿದ್ಯಾಲಯದ ಪಠ್ಯತರ ಚಟುವಟಿಕೆಯ ವಿಭಾಗದ ಸಂಚಾಲಕ ಡಾ. ನಲ್ಲಿಕಟ್ಟೆ ಸಿದ್ದೇಶ್ ಮಾತನಾಡಿದರು. ವಿವಿಯ ಎಲ್ಲ ವಿಭಾಗಗಳ ಅಧ್ಯಾಪಕರು, ಬೋಧಕೇತರ ಸಿಬ್ಬಂದಿ, ಸಂಶೋಧನಾರ್ತಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿವಿಯಲ್ಲಿ ಸಂಭ್ರಮದ ವಾತಾವರಣ
ಕುವೆಂಪು ವಿಶ್ವವಿದ್ಯಾಲಯದ ಪಠ್ಯೇತರ ಚಟುವಟಿಕೆ ಘಟಕದ ವತಿಯಿಂದ ಮೂರು ದಿನಗಳ ಕಾಲ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಿಗಾಗಿ ಆಯೋಜಿಸಲಾಗಿರುವ ಕ್ರೀಡೆ ಮತ್ತು ಸಾಂಸ್ಕೃತಿಕ ಉತ್ಸವವು ಕ್ಯಾಂಪಸ್‌ನಲ್ಲಿ ಹಬ್ಬದ ವಾತಾವರಣವನ್ನು ನಿರ್ಮಿಸಿದೆ.
ಬೆಳಿಗ್ಗೆ 10ಗಂಟೆಗೆ ನಡೆದ ಆಕರ್ಷಕ ಜಾಥಾ ಮತ್ತು ಪಥಸಂಚಲನದಲ್ಲಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳನ್ನೊಳಗೊAಡ 15ಕ್ಕೂ ಹೆಚ್ಚು ತಂಡಗಳು ಆಕರ್ಷಕ ಉಡುಪು, ವಿಷಯಗಳೊಂದಿಗೆ ಭಾಗವಹಿಸಿ ಉತ್ಸವಕ್ಕೆ ಮೆರಗು ತಂದವು.
ಜಾಥಾದ ನಂತರ ಕ್ರಿಕೆಟ್ ಪಂದ್ಯ ಆರಂಭವಾಗಿದ್ದು, ಕುಲಪತಿಗಳ ತಂಡ ಮತ್ತು ಕುಲಸಚಿವರು ತಂಡಗಳು ಮೊದಲ ಪಂದ್ಯ ಆಟವಾಡಿದವು. ವಿವಿಧ ನಿಖಾಯಗಳ ತಂಡಗಳು ನಂತರ ಕ್ರಿಕೆಟ್ ಆಡಿದವು. ನಂತರ ಮೈದಾದನದಲ್ಲಿ ಓಟ, ಶಾಟ್‌ಪುಟ್ ಎಸೆತ, ವಾಲಿಬಾಲ್, ಥ್ರೋಬಾಲ್, ಹಗ್ಗಜಗ್ಗಾಟದಂತಹ ಹೊರಾಂಗಣ ಸ್ಪರ್ಧೆಗಳು ನಡೆದರೆ, ನಾಲ್ಕು ವೇದಿಕೆಗಳಲ್ಲಿ ನಾಟಕ, ಪ್ರಹಸನ, ಜನಪದ ನೃತ್ಯ, ಏಕವ್ಯಕ್ತಿ ಗಾಯನ, ರಂಗೋಲಿ ಹಾಕುವುದು ಸೇರಿದಂತೆ ದಿನವಿಡೀ ಇಪ್ಪತ್ತಕ್ಕೂ ಹೆಚ್ಚು ವಿವಿಧ ಸ್ಪರ್ಧೆಗಳು ನಡೆಯುತ್ತಿದ್ದು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಉತ್ಸಾಹದಿಂದ ಭಾಗವಹಿಸಿದ್ದರು. ಬಿಸಿಲಿನ ತಾಪವನ್ನು ಲೆಕ್ಕಿಸದೆ ಆಟೋಟ ಮತ್ತು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post