ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಆಹಾರ ತಂತ್ರಜ್ಞಾನ ಹಾಗೂ ಕೃಷಿ ಅಧ್ಯಯನ ಒಂದಕ್ಕೊಂದು ಅವಲಂಬಿತ ವಾಗಿದ್ದು, ದೇಶದ ಆರ್ಥಿಕತೆಯನ್ನು ಸದೃಢಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ವಿಶ್ವ ಬ್ಯಾಂಕ್ ನ ಅಂತರಾಷ್ಟ್ರೀಯ ಸಲಹೆಗಾರ ಡಾ. ರವಿಶಂಕರ್ ಗೋಕರೆ ಅಭಿಪ್ರಾಯಪಟ್ಟರು.
ಕುವೆಂಪು ವಿಶ್ವವಿದ್ಯಾಲಯದ Kuvempu University ಜೀವರಸಾಯನ ಶಾಸ್ತ್ರ ವಿಭಾಗದ ವತಿಯಿಂದ ಇತ್ತೀಚೆಗೆ ಬಸವ ಭವನದಲ್ಲಿ ‘ಜೀವರಸಾಯನ ಶಾಸ್ತ್ರ ಸಂಶೋಧನೆಯ ಇತ್ತೀಚಿನ ಪ್ರವೃತ್ತಿಗಳು’ ಕುರಿತು ಆಯೋಜಿಸಲಾಗಿದ್ದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಆಹಾರ ತಂತ್ರಜ್ಞಾನವು ಅನ್ವಯಿಕ ಶಾಸ್ತ್ರವಾಗಿದ್ದು, ದೇಶಕ್ಕೆ ಆಹಾರ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಆಹಾರ ಸಂರಕ್ಷಣೆ, ಪೌಷ್ಟಿಕಾಂಶ ವೃದ್ಧಿ, ಮತ್ತು ನಿರ್ವಹಣೆಗೆ ಸಂಬಂಧಿಸಿದ ಸಂಶೋಧನೆಗಳ ಮೂಲಕ ಸುಸ್ಥಿರ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಕುವೆಂಪು ವಿಶ್ವವಿದ್ಯಾಲಯದಲ್ಲಿ ನೂತನವಾಗಿ ಪ್ರಾರಂಭವಾಗಿರುವ ಆಹಾರ ತಂತ್ರಜ್ಞಾನ ವಿಭಾಗವು ಈ ನಿಟ್ಟಿನಲ್ಲಿ ನುರಿತ ತಂತ್ರಜ್ಞರನ್ನು ತಯಾರು ಮಾಡುವತ್ತ ಕಾರ್ಯೋನ್ಮುಖವಾಗಲಿ ಎಂದು ಆಶಿಸಿದರು.
ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಮಾತನಾಡಿ, ದೇಶದಲ್ಲಿ ವ್ಯವಸಾಯಕ್ಕೆ ಬಳಕೆಯಾಗದ ಅನುಪಯುಕ್ತ ಭೂಮಿಯ ಪ್ರಮಾಣವು ಹೆಚ್ಚಾಗಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳುವ ನಿಟ್ಟಿನಲ್ಲಿ ಆಹಾರ ತಂತ್ರಜ್ಞಾನ ಸಂಶೋಧನೆಗಳ ಮೇಲಿನ ನೀರಿಕ್ಷೆ ಹೆಚ್ಚಾಗಿದೆ ಎಂದು ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ ಪ್ರೊ. ಮಧುಸೂದನ, ಡಾ. ರಮಾನಂದ್ ನಾಡಿಗ, ಮಂಗಳೂರು ವಿವಿಯ ಪ್ರೊ. ಮಂಜುನಾಥ್ ಹಾಗೂ ಪ್ರೊ. ಗೋಪಾಲ್ ಮರಾಠೆ ಮಾತನಾಡಿದರು.
Also read: ಗುಡ್ ನ್ಯೂಸ್! ಪುನಾರಂಭವಾಗಲಿದೆ ಶಿವಮೊಗ್ಗ-ತಿರುಪತಿ-ಚೆನ್ನೈ ಸ್ಪೆಷಲ್ ರೈಲು
ಆಹಾರ ತಂತ್ರಜ್ಞಾನ ವಿಭಾಗಕ್ಕೆ ಚಾಲನೆ: ಕುವೆಂಪು ವಿಶ್ವವಿದ್ಯಾಲಯದಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಪ್ರಾರಂಭಿಸಲಾಗಿರುವ ಸ್ನಾತಕೋತ್ತರ ಆಹಾರ ತಂತ್ರಜ್ಞಾನ ವಿಭಾಗವನ್ನು ಈ ಸಂದರ್ಭದಲ್ಲಿ ಅಧಿಕೃತವಾಗಿ ಉದ್ಘಾಟಿಸಲಾಯಿತು.
ಕುಲಸಚಿವೆ ಜಿ.ಅನುರಾಧ, ಪರೀಕ್ಷಾಂಗ ಕುಲಸಚಿವ ಪ್ರೊ.ಎಸ್. ಕೆ. ನವೀನ್ ಕುಮಾರ್, ಜೀವರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ನೀಲಗುಂದ್, ಪ್ರೊ. ನಿರಂಜನ್, ಪ್ರೊ. ತಿಪ್ಪೇಸ್ವಾಮಿ, ಸಂಶೋಧನಾರ್ಥಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post