ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಅರಣ್ಯಗಳು ಕೇವಲ ವನ್ಯಜೀವಿಗಳಿಗೆ ಮಾತ್ರ ಸೀಮಿತವಲ್ಲ. ವನ್ಯಜೀವಿ ಸಂಪತ್ತು ಭೂಮಂಡಲದ ಸಮತೋಲನವನ್ನು ಕಾಪಾಡಿಕೊಂಡು ಬರುತ್ತಿರುವ ಜೀವಸೆಲೆ. ಆದ್ದರಿಂದ ವನ್ಯಜೀವಿಗಳ ಆವಾಸಸ್ಥಾನನಗಳನ್ನು ಸಂರಕ್ಷಿಸಬೇಕಾದ ಹೊಣೆಗಾರಿಕೆ ನಾಗರಿಕ ಸಮಾಜದ ಮೇಲಿದೆ ಎಂದು ಕುವೆಂಪು ವಿವಿಯ ಕುಲಪತಿ ಪ್ರೊ. ಶರತ್ ಅನಂತಮೂರ್ತಿ #Sharath Ananthamurthy ಅಭಿಪ್ರಾಯಪಟ್ಟರು.
ಭದ್ರ ಹುಲಿ ಸಂರಕ್ಷಿತ ಪ್ರದೇಶದ ಬೆಳ್ಳಿ ಹಬ್ಬದ ಅಂಗವಾಗಿ ಭದ್ರ ಹುಲಿ ಸಂರಕ್ಷಿತ ಪ್ರದೇಶ ಚಿಕ್ಕಮಗಳೂರು ಮತ್ತು ಕುವೆಂಪು ವಿವಿಯ #Kuvempu University ವನ್ಯಜೀವಿ ಮತ್ತು ನಿರ್ವಹಣಾ ವಿಭಾಗಗಳು ಜಂಟಿಯಾಗಿ ವಿವಿಯಲ್ಲಿ ಭದ್ರ ಉತ್ಸವವನ್ನು ಸೆ. 23-24ರಂದು ಏರ್ಪಡಿಸಿವೆ. ಉತ್ಸವವನ್ನು ಪ್ರೊ. ಎಸ್ ಪಿ ಹಿರೇಮಠ್ ಸಭಾಭವನದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಅವರು ಸೋಮವಾರ ಉದ್ಘಾಟಿಸಿದರು.
ಪ್ರಕೃತಿಯಲ್ಲಿ ಪ್ರತಿಯೊಂದು ಜೀವಿಯ ಪಾತ್ರ ಬಹಳ ಮುಖ್ಯ. ಆಹಾರ ಸರಪಳಿಯಲ್ಲಿ ಒಂದು ಕೊಂಡಿ ತಪ್ಪಿದರೂ ಪರಿಸರ ವ್ಯವಸ್ಥೆಯಲ್ಲಿ ಏರುಪೇರಾಗುತ್ತದೆ. ಆದ್ದರಿಂದ ಪರಿಸರಕ್ಕೆ ಯಾವುದೇ ಹಾನಿಯಾಗದಂತೆ ವನ್ಯಜೀವಿಗಳೊಂದಿಗೆ ಸಹಬಾಳ್ವೆ ಬಹಳ ಮುಖ್ಯ. ವನ್ಯ ಜೀವಿ ಸಂರಕ್ಷಣೆ ನಮ್ಮೆಲ್ಲರ ಹೊಣೆ ಕುಲಪತಿ ಹೇಳಿದರು.
ಭದ್ರ ಹುಲಿ ಸಂರಕ್ಷಿತ ಪ್ರದೇಶದ ಲಕ್ಕವಳ್ಳಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಸಾಗರ್ ಮಾತನಾಡಿ, ಭದ್ರ ಅಭಯಾರಣ್ಯದಲ್ಲಿದ್ದ 300 ಕ್ಕೂ ಹೆಚ್ಚು ಮಾನವ ವಸಹತುಗಳಿಗೆ ಅಭಯಾರಣ್ಯದ ಹೊರಗೆ ಪುನರ್ವಸತಿ ಕಲ್ಪಿಸಲಾದ ಕರ್ನಾಟಕದ ಏಕೈಕ ರಕ್ಷಿತಾರಣ್ಯ ಎಂದು ಭದ್ರ ಅಭಯಾರಣ್ಯವು ಹೆಸರುವಾಸಿಯಾಗಿದೆ ಎಂದು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕಾಡು ಹಾಗು ವನ್ಯಜೀವಿಗಳು, ನೈಸರ್ಗಿಕ ಸಂಪತ್ತು ಸಂರಕ್ಷಣೆ ಎಂಬುದು ಕೇವಲ ಒಂದೆರಡು ದಿನದಲ್ಲಿ ನಡೆಯುವಂತದ್ದಲ್ಲ. ಇದು ಎಲ್ಲ ನಾಗರೀಕರ ಸಂಸ್ಕೃತಿಯಲ್ಲಿ ಒಂದು ಭಾಗವಾಗಬೇಕು. ನಗರೀಕರಣ ಹಾಗು ಇನ್ನಿತರ ಅಭಿವೃದ್ಧಿ ಕಾರ್ಯಗಳಿಂದಾಗಿ ಕಾಡಿನ ನಾಶವಾಗುತ್ತಿದೆ. ಇದರ ಬಗ್ಗೆ ಗಮನಹರಿಸಿ ನೈಸರ್ಗಿಕ ಸಂಪತ್ತನ್ನು ಕಾಪಾಡಬೇಕಾದುದು ಎಲ್ಲ ನಾಗರೀಕರ ಹೊಣೆ ಎಂದು ಕುವೆಂಪು ವಿವಿಯ ಕುಲಸಚಿವ ಎ ಎಲ್ ಮಂಜುನಾಥ್ ಮಾತನಾಡಿದರು.
ಪರಿಸರ ನಾಶ ಹಾಗು ಕಾಡಿನ ನಾಶದಿಂದಾಗಿ ಆಹಾರಕ್ಕಾಗಿ ಕಾಡುಪ್ರಾಣಿಗಳು ಮಾನವನ ವಾಸಸ್ಥಳಕ್ಕೆ ಬರುತ್ತಿದ್ದು ಇದರಿಂದಾಗಿ ಮಾನವ ವನ್ಯಜೀವಿ ಸಂಘರ್ಷ ಹೆಚ್ಚಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಮಾನವನು ಪಾರಿಸಾರಿಕವಾಗಿ ತನ್ನ ಮಿತಿಯನ್ನು ಅರಿತುಕೊಳ್ಳಬೇಕು ಎಂದು ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್ ಎಂ ಗೋಪಿನಾಥ್ ತಿಳಿಸಿದರು.
ವನ್ಯಜೀವಿ ನಿರ್ವಹಣಾ ವಿಭಾಗ ಅಧ್ಯಕ್ಷರು ಪ್ರೊ. ವಿಜಯ ಕುಮಾರ ಇವರು ಕಾರ್ಯಕ್ರಮಕ್ಕೆ ಆಗಮಿಸಿದ ಸರ್ವರನ್ನು ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಭದ್ರ ಹುಲಿ ಸಂರಕ್ಷಿತ ಪ್ರದೇಶದ ಮುತ್ತೊಡಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಧಿಕಾರಿ ಶಿವರಾತ್ರೀಶ್ವರ ಸ್ವಾಮಿ, ಭದ್ರ ಹುಲಿ ಸಂರಕ್ಷಿತ ಪ್ರದೇಶದ ಅಧಿಕಾರಿಗಳು, ಕುವೆಂಪು ವಿಶ್ವದ್ಯಾನಿಲಯದ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗು ವನ್ಯಜೀವಿ ನಿರ್ವಹಣಾ ವಿಭಾಗದ ವಿದ್ಯಾರ್ಥಿಗಳು, ಅಥಿತಿ ಉಪನ್ಯಾಸಕರು, ಮಾಧ್ಯಮ ವರ್ಗದವರು ಉಪಸ್ಥಿತರಿದ್ದರು.
ಬೆಳ್ಳಿ ಹಬ್ಬ ಬಗ್ಗೆ
ಕರ್ನಾಟಕದ ಹೃದಯ ಭಾಗವಾದ ಪಶ್ಚಿಮ ಘಟ್ಟಗಳ ನಡುವೆ ಭದ್ರ ಹುಲಿ ಸಂರಕ್ಷಿತ ಅಭಯಾರಣ್ಯ ನೆಲೆಯಾಗಿದೆ. ಜಾಗರ ಕಣಿವೆ ಎಂದೇ ಪ್ರಸಿದ್ಧಿಯಾಗಿರುವ ಇದನ್ನು 1998ತಳ್ಳಿ ಭದ್ರ ಹುಲಿ ಸಂರಕ್ಷಿತ ಪ್ರದೇಶ ಎಂದು ಗುರುತಿಸಲಾಯಿತು. ಇದರ 25 ವರ್ಷಗಳ ಸುಧೀರ್ಘ ಪಯಣವನ್ನು ಸಂರಕ್ಷಣೆ, ಸಮುದಾಯ ಬಿಕ್ಕಟ್ಟು ಹಾಗು ಸಹಬಾಳ್ವೆ ಎಂಬ 4 ಆಯಾಮಗಳೊಂದಿಗೆ ಬೆಳ್ಳಿ ಹಬ್ಬವನ್ನು ಆಚರಿಸಲಾಗುತ್ತಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post