Read - < 1 minute
ಇಡಿಯ ನಾಡು ಸಂಭ್ರಮ ಹಾಗೂ ಸಡಗರದಿಂದ ಗೌರಿ-ಗಣೇಶನ ಹಬ್ಬಕ್ಕೆ ಸಿದ್ದವಾಗುತ್ತಿದೆ. ಇದೇ 12 ಹಾಗೂ 13ರಂದು ನಾಡಿನಾದ್ಯಂತ ಆಚರಣೆ ನಡೆಯಲಿದ್ದು, ನೀವೂ ಸಹ ನಿಮ್ಮ ಮನೆ, ಬೀದಿ ಹಾಗೂ ಬಡಾವಣೆಗಳನ್ನು ಗಣಪತಿಯನ್ನು ಪ್ರತಿಷ್ಠಾಪನೆ ಮಾಡಿರುತ್ತೀರಿ. ಇಂತಹ ಫೋಟೋಗಳನ್ನು ಕಲ್ಪ ನ್ಯೂಸ್ನೊಂದಿಗೆ ಹಂಚಿಕೊಳ್ಳಿ, ನಾವದನ್ನು ಪ್ರಕಟಿಸಿ, ಸಾವಿರಾರು ಮಂದಿಗೆ ತಲುಪಿಸುತ್ತೇವೆ…
ನಿಯಮಗಳು:
- ಸಾರ್ವಜನಿಕವಾಗಿ ಪ್ರತಿಷ್ಠಾಪಿಸಿದ ಗಣಪತಿ ಫೋಟೋ ಕಳುಹಿಸಬಹುದು
- ಸಣ್ಣ ಮಕ್ಕಳು ಕೂರಿಸುವ ಗಣಪತಿಯ ಫೋಟೋ ಸಹ ಸ್ವೀಕೃತ
- ನೀವು ಕಳಿಸುವ ಫೋಟೋ ನೋಡಲು ಸ್ಪಷ್ಟವಾಗಿರಬೇಕು
- ಸಾರ್ವಜನಿಕವಾಗಿ ಪ್ರತಿಷ್ಠಾಪಿತ ಗಣಪತಿಯೊಂದಿಗೆ ಸಂಘದ ಸದಸ್ಯರೂ ಸಹ ಕಾಣುವಂತಿದ್ದರೆ ಉತ್ತಮ
- ಫೋಟೋ ಕಳುಹಿಸುವವರು ತಮ್ಮ ಹೆಸರು, ಸಂಘದ ಹೆಸರು, ಎಷ್ಟನೆಯ ವರ್ಷದ ಪ್ರತಿಷ್ಠಾಪನೆ, ಈ ಬಾರಿಯ ವಿಶೇಷ ಅಲಂಕಾರ, ವಿಳಾಸ ಹಾಗೂ ಮೊಬೈಲ್ ಸಂಖ್ಯೆಯೊಂದಿಗೆ ಕಳುಹಿಸಬೇಕು
- ವೈಯಕ್ತಿಕವಾಗಿ ಮನೆಯಲ್ಲಿ ವಿಶೇಷ ಅಲಂಕಾರ ಮಾಡಿರುವವರೂ ಸಹ ಫೋಟೋ ಕಳುಹಿಸಬಹುದು. ಹೆಸರು, ಊರು, ಮೊಬೈಲ್ ಸಂಖ್ಯೆ ಕಡ್ಡಾಯ
- ಸ್ಪಷ್ಟವಾಗಿಲ್ಲದ, ಮಾಹಿತಿಯಿಲ್ಲದ ಫೋಟೋಗಳನ್ನು ತಿರಸ್ಕರಿಸಲಾಗುವುದು
(ನೀವು ಕಳುಹಿಸುವ ಮೊಬೈಲ್ ಸಂಖ್ಯೆಗಳನ್ನು ಪ್ರಕಟಿಸಲಾಗುವುದಿಲ್ಲ)
Discussion about this post