ಕಲ್ಪ ಮೀಡಿಯಾ ಹೌಸ್ | ಶಿಗ್ಗಾಂವಿ |
ಮುಖ್ಯಮಂತ್ರಿ ಸಿದ್ದರಾಮಯ್ಯ #CM Siddaramaiah ಅವರೇ ಎಲ್ಲದಕ್ಕೂ ಉಡಾಫೆ ಉತ್ತರ ಕೊಡೋದು ಬಿಟ್ಟು ತಕ್ಷಣ ರಾಜೀನಾಮೆ ಕೊಡಿ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ #Pralhad Joshi ಆಗ್ರಹಿಸಿದರು.
ಶಿಗ್ಗಾಂವಿಯಲ್ಲಿ ಎಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಚಿವರು, ಮೂಡಾ ಹಗರಣದಲ್ಲಿ ಇನ್ನೆಷ್ಟು ಸಾಕ್ಷಿಗಳು ಬೇಕು ನಿಮಗೆ ಎಂದು ಪ್ರಶ್ನಿಸಿದರು.

Also read: ವಿಟಿಯು ಸೆಂಟ್ರಲ್ ಕರ್ನಾಟಕ ಡಿವಿಜನ್ ಕ್ರಿಕೆಟ್ ಟೂರ್ನಿ | ಪಿಇಎಸ್ ಐಟಿಎಂ ತಂಡ ಚಾಂಪಿಯನ್
ಮೂಡಾ ನಿವೇಶನ ಹಂಚಿಕೆಯಲ್ಲಿ ತಮ್ಮ ಪಾತ್ರವಿಲ್ಲ, ಪ್ರಭಾವ ಬೀರಿಲ್ಲ ಎನ್ನುತ್ತೀರಿ. ಆದರೆ ಒಂದೊಂದೇ ಸತ್ಯ ಬಯಲಿಗೆ ಬರುತ್ತಿಲ್ಲವೇ? ತಹಶೀಲ್ದಾರ್ ಎನ್.ಮಂಜುನಾಥ್ ನಿಮ್ಮ ಪರವಾಗಿ ಮುದ್ರಾಂಕ ಶುಲ್ಕ ಪಾವತಿಸಿದ್ದಾರಲ್ಲ; ಅದಕ್ಕೇನು ಹೇಳುತ್ತೀರಿ? ಎಂದು ಪ್ರಶ್ನಿಸಿದರು.
ತಮ್ಮ ಚೇಲಾಗಳಿಗೆ 14 ಸೈಟ್ ಹಂಚಿದ್ದು, ಖಡಕ್, ಆಗಿದ್ದ ಜಿಲ್ಲಾಧಿಕಾರಿ ವರ್ಗಾವಣೆ ಮಾಡಿಸಿದಿರಿ ಇದೆಲ್ಲ ನಿಮ್ಮ ಪ್ರಭಾವ ಇಲ್ಲದೇ ಆಯಿತೇ? ಎಂದರು.

ಮೂಡಾ ಹಗರಣದಲ್ಲಿ ಸ್ವತಃ A1 ಆರೋಪಿ ಆಗಿರುವ ತಾವು ಪ್ರಧಾನಿ ಮೋದಿ ಅವರ ವಿರುದ್ಧ ಸವಾಲು ಹಾಕುತ್ತೀರಿ. ಭ್ರಷ್ಟಾಚಾರ ನಿರ್ಮೂಲನೆಗೆ ಪಣ ತೊಟ್ಟ ಪ್ರಧಾನಿ ರಾಜೀನಾಮೆ ಕೇಳಲು ನಿಮಗೇನು ಅರ್ಹತೆಯಿದೆ? ಎಂದು ಜೋಶಿ ಸಿಎಂ ವಿರುದ್ಧ ಗುಡುಗಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post