ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
10 ವಿದ್ಯಾರ್ಥಿಗಳಲ್ಲಿ ಕಲಿಕೆಯ ಮನಸ್ಸಿದ್ದಾಗ ನಿರ್ದಿಷ್ಟವಾದ ಗುರಿ ಮುಟ್ಟಲು ಸಾಧ್ಯ. ಅಂದಾಗ ಮಾತ್ರ ಜೀವನ ಸುಂದರವಾಗಿರುತ್ತದೆ. ಎಂದು ಡಾ. ಜಿ ಎಸ್ ಶಿವಕುಮಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸರಸ್ವತಿ ಭಾವಚಿತ್ರಕ್ಕೆ ಪುಷ್ಪಕೋರಿ ಅಧ್ಯಕ್ಷೀಯ ನುಡಿಗಳನ್ನಾಡಿದರು.
ಸೋಮವಾರ ಪಟ್ಟಣದ ಕುಮದ್ವತಿ ವಸತಿ ಶಾಲೆಯ ಸಭಾಂಗಣದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಶುಕ್ರವಾರ ನಡೆದ ಸರಸ್ವತಿ ಪೂಜೆ ಹಾಗೂ ವಾರ್ಷಿಕ ಪರೀಕ್ಷೆಗೆ ಶುಭ ಹಾರೈಸಿ ಅವರು ಮಾತನಾಡಿದರು.

Also read: ಭಾರತೀಯ ಸಂಸ್ಕೃತಿಯ ದ್ಯೋತಕ ಕಂಬಳಕ್ಕೆ ಸಹಕಾರ ಅವಶ್ಯ: ಕೆ.ಎಸ್. ಈಶ್ವರಪ್ಪ
ಪ್ರಾಸ್ತಾವಿಕ ನುಡಿಗಳನ್ನು ಪ್ರಾಚಾರ್ಯರಾದ ಡಾ. ಎಂ. ವೀರೇಂದ್ರ ಮಾತನಾಡಿ ಎಲ್ಲಾ ವಿದ್ಯಾರ್ಥಿಗಳಲ್ಲಿ ಶಕ್ತಿ ಇದೆ ಎಲ್ಲರೂ ಪ್ರಯತ್ನ ಪಟ್ಟರೆ ಪರೀಕ್ಷೆಯನ್ನು ಅತ್ಯಂತ ಯಶಸ್ವಿಯಾಗಿ ಹಬ್ಬದಂತೆ ಎದುರಿಸಿಲು ಸಾಧ್ಯ ಎಂದು ಸ್ಪೂರ್ತಿ ತುಂಬಿದರು.ಎಲ್ಲರೂ ಮಾಡಿದ ಹಾಗೆ ಮಾಡಿದರೆ ಯಶಸ್ಸು ಕಾಣಲು ಸಾಧ್ಯವಿಲ್ಲ ಸ್ವಲ್ಪ ಭಿನ್ನವಾಗಿ ಕೆಲಸ ಮಾಡಿದರೆ ಯಶಸ್ಸು ಸಾಧಿಸಲು ಸಾಧ್ಯ ಪರೀಕ್ಷೆಯಲ್ಲಿ ಅಂಕಗಳು ಮಾತ್ರ ಸೀಮಿತವಲ್ಲ ನಮ್ಮಲ್ಲಿ ಸಚ್ಚಾರಿತ್ರ್ಯ ಗುಣಗಳು ದಾರಿದೀಪವಾಗುತ್ತದೆ. ವ್ಯಕ್ತಿಯ ವ್ಯಕ್ತಿತ್ವ ಬದಲಾಗಬೇಕು ವಿದ್ಯಾರ್ಥಿಗಳು ಅರಳುವ ಪುಷ್ಪದಂತೆ ಎಂದು ಮಕ್ಕಳಿಗೆ ತಿಳಿಸಿದರು ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸಂಜಯ್ ಮಾತನಾಡಿ ಕಾಲೇಜ್ ದಿನಗಳನ್ನು ಮೆಲುಕು ಹಾಕಿದನು. ನಂತರ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು ನಂತರ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಕಾಲೇಜಿಗೆ ನೆನಪಿನ ಕಾಣಿಕೆ ಸಲ್ಲಿಸಿ ಹರ್ಷ ವ್ಯಕ್ತಪಡಿಸಿದರು.

ವಿಜ್ಞಾನ ವಿಭಾಗದ ಮುಖ್ಯಸ್ಥ ಪರ್ವೇಜ್ ಅಹಮ್ಮದ್ ಮಾತನಾಡಿ ನಮ್ಮಲ್ಲಿ ನಮಗೆ ವಿಶ್ವಾಸ ಇದ್ದಾಗ ಅತ್ಯುತ್ತಮ ಸಾಧನೆ ಮಾಡಲು ಪ್ರೇರಣೆ ಆಗುತ್ತದೆ. ಮಕ್ಕಳು ಆರೋಗ್ಯದ ಕಡೆಗೆ ಕಾಳಜಿ ವಹಿಸಬೇಕು ಜೊತೆಗೆ ನಾವು ಜೀವನದಲ್ಲಿ ಕಷ್ಟ- ಸುಖ, ಸೋಲು- ಗೆಲುವು, ಹಗಲು- ರಾತ್ರಿ ಇದ್ದೇ ಇರುತ್ತದೆ ವಿದ್ಯಾರ್ಥಿಗಳು ಒಳ್ಳೆಯ ಸಚ್ಚಾರಿತ್ರ್ಯ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕೆಂದು ಮಕ್ಕಳಿಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಡಾ. ಜಿ.ಎಸ್ ಶಿವಕುಮಾರ್, ಆಡಳಿತಸಮನ್ವಯಾಧಿಕಾರಿ ಕುಬೇರಪ್ಪ. ಕೆ ಪ್ರಾಚಾರ್ಯರಾದ, ಡಾ. ಎಮ್. ವೀರೇಂದ್ರ, ಡಾ. ರವೀಂದ್ರ, ಪರ್ವೇಜ್ ಅಹಮದ್, ಚಂದ್ರಶೇಖರ್ ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post