ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಪ್ರತಿಯೊಬ್ಬ ಭಾರತ ದೇಶದ ಪ್ರಜೆಯು ದೇಶದ ಐಕ್ಯತೆ ಹಾಗೂ ರಕ್ಷಣೆಗೆ ಸದಾ ಬದ್ಧನಾಗಿರಬೇಕು ಎಂದು ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರು ಹಾಗೂ ಆಡಳಿತ ಮಂಡಳಿ ಪ್ರತಿನಿಧಿಗಳಾದ ಜಿ.ಎಸ್. ಶಿವಕುಮಾರ್ ಅವರು ಕರೆ ನೀಡಿದರು.
ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಅಂಗ ಸಂಸ್ಥೆಗಳ ಸಹಯೋಗದಲ್ಲಿ ಕುಮದ್ವತಿ ಕೇಂದ್ರೀಯ ವಸತಿ ಶಾಲೆಯಲ್ಲಿ ನಡೆದ 79ನೇ ಸ್ವಾತಂತ್ರ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಬ್ರಿಟಿಷರ ವಿರುದ್ಧ ಹೋರಾಡಿ ತಮ್ಮ ಜೀವ ತ್ಯಾಗ ಮಾಡಿ ದೇಶವನ್ನು ಸ್ವಾತಂತ್ರಗೊಳಿಸಿದ ಹುತಾತ್ಮ ಸೇನಾನಿ ಭಾರತೀಯರನ್ನು ಸ್ಮರಿಸಿ ಅವರ ನೆರಳಲ್ಲಿ ಬದುಕುವುದೇ ನಾವು ಸಲ್ಲಿಸುವ ನಮನ. ಪ್ರತಿಯೊಬ್ಬ ಭಾರತ ದೇಶದ ಪ್ರಜೆಯು ದೇಶದ ಐಕ್ಯತೆ ಹಾಗೂ ರಕ್ಷಣೆಗೆ ಸದಾ ಬದ್ಧನಾಗಿರಬೇಕು ಎಂದರು.ನನಗೆ ದೇಶ ಏನು ಕೊಟ್ಟಿದೆ ಎನ್ನುವದಕ್ಕಿಂತ ನಾನು ದೇಶಕ್ಕಾಗಿ ಏನು ಮಾಡಿದ್ದೇನೆ ಎಂಬುದು ಮುಖ್ಯವಾಗುತ್ತದೆ. ಈ ದಿಸೆಯಲ್ಲಿ ಇಂದಿನ ವಿದ್ಯಾರ್ಥಿಗಳು ದೇಶಭಿಮಾನ ಮೂಡಿಸಿಕೊಂಡು ದೇಶದ ಪ್ರಗತಿಗೆ ಶ್ರಮಿಸಬೇಕು. ಹಾಗೂ ಮುಕ್ತ ಸ್ವಾತಂತ್ರವನ್ನು ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಬಳಸಿಕೊಂಡು ದೇಶದ ಹೆಮ್ಮೆಯ ನಾಗರೀಕರಾಗಿ ಬಾಳಬೇಕು. ಅದುವೇ ನಿಜವಾದ ಸ್ವಾತಂತ್ರ ಎಂದರು.
ಬ್ರಿಟಿಷರ ವಿರುದ್ಧ ಹೋರಾಡಿ ತಮ್ಮ ಜೀವ ತ್ಯಾಗ ಮಾಡಿ ದೇಶವನ್ನು ಸ್ವಾತಂತ್ರಗೊಳಿಸಿದ ಹುತಾತ್ಮ ಸೇನಾನಿ ಭಾರತೀಯರನ್ನು ಸ್ಮರಿಸಿ ಅವರ ನೆರಳಲ್ಲಿ ಬದುಕುವುದೇ ನಾವು ಸಲ್ಲಿಸುವ ನಮನ. ಪ್ರತಿಯೊಬ್ಬ ಭಾರತ ದೇಶದ ಪ್ರಜೆಯು ದೇಶದ ಐಕ್ಯತೆ ಹಾಗೂ ರಕ್ಷಣೆಗೆ ಸದಾ ಬದ್ಧನಾಗಿರಬೇಕು.
-ಜಿ.ಎಸ್. ಶಿವಕುಮಾರ್
ಎಸ್’ವಿವಿಎಸ್ ಸಂಸ್ಥೆಯ ಅಧ್ಯಕ್ಷರಾದ ಎಂ. ಬಿ. ಶಿವಕುಮಾರ್ ಅವರು ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಕೆಆರ್’ಸಿಎಸ್ ಶಾಲೆಯ ಪ್ರಾಚಾರ್ಯರಾದ ಎಚ್.ಜಿ. ಸಿದ್ದೇಶ್ವರ್, ಸಂಸ್ಥೆಯ ಸಮನ್ವಯ ಅಧಿಕಾರಿಗಳಾದ ಕುಬೇರಪ್ಪ, ಎಸ್’ವಿವಿಎಸ್ ಸಂಸ್ಥೆಯ ವಿವಿಧ ಅಂಗ ಸಂಸ್ಥೆಗಳ ಪ್ರಾಚಾರ್ಯರಾದ ವಿದ್ಯಾಶಂಕರ್, ಕೆ.ಸಿ. ರವೀಂದ್ರ, ವೀರೇಂದ್ರಗೌಡ, ವಿಶ್ವನಾಥ್, ಉಪಪ್ರಾಚಾರ್ಯರಾದ ಎಚ್.ಡಿ. ಪ್ರಶಾಂತ್, ಕೋ-ಅರ್ಡಿನೇಟರ್ ಪ್ರಭು, ಉಪನ್ಯಾಸಕರು, ಶಿಕ್ಷಕರು, ಪ್ರಶಿಕ್ಷಣಾರ್ಥಿಗಳು, ವಿದ್ಯಾರ್ಥಿಗಳು, ಬೋಧಕೇತರ ವರ್ಗದವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ದೀಪಿಕಾ ಮತ್ತು ಸಂಗಡಿಗರು ದೇಶ ಭಕ್ತಿ ಹಾಡುವ ಮೂಲಕ ಪ್ರಾರಂಭಿಸಿದರು. ಸಹಶಿಕ್ಷಕಿಯರಾದ ಕಾವ್ಯ ವಂದಿಸಿ, ವೇದನಾಯ್ಕ್ ಸ್ವಾಗತಿಸಿದರು. ಸಂಗೀತಾ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post