ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಶ್ರೀಮತಿ ಗಂಗಮ್ಮ ವೀರಭದ್ರಪ್ಪಶಾಸ್ತ್ರಿ ಸ್ಮಾರಕ ಟ್ರಸ್ಟ್ ಶಿಕಾರಿಪುರ ಮತ್ತು ರೆಡ್ ಕ್ರಾಸ್ ಸಂಜೀವಿನಿ ರಕ್ತನಿಧಿ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ #B S Yadiyurappa ಹುಟ್ಟು ಹಬ್ಬದ ಪ್ರಯುಕ್ತ ಫೆ.27ರ ಗುರುವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 3ರವರೆಗೆ ಶಿಕಾರಿಪುರ ನಗರದ ಮಂಗಳಾ ಭವನದಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ.
Also read: ತಲ್ವಾರ್ ಹಿಡಿದು ವ್ಹೀಲಿಂಗ್ | ಪುಂಡರಿಗೆ ಸರಿಯಾಗಿ ಬಿಸಿಮುಟ್ಟಿಸಿದ ಪೊಲೀಸರು
ರಕ್ತದಾನ ಶಿಬಿರವನ್ನು #Blood Donation Camp ಸಂಸದ ಬಿ.ವೈ. ರಾಘವೇಂದ್ರ #MP B Y Raghavendra ಉದ್ಘಾಟಿಸಲಿದ್ದು, ಶಿಕಾರಿಪುರ ನಗರ ಮತ್ತು ಸುತ್ತಮುತ್ತಲಿನ ಗ್ರಾಮಗಳ ಯಡಿಯೂರಪ್ಪನವರ ಅಭಿಮಾನಿಗಳು, ರಕ್ತದಾನಿಗಳು, ಆಸಕ್ತ ಯುವಕ ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಈ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಈ ಸುವರ್ಣಾವಕಾಶವನ್ನು ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post