ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಬಸವಣ್ಣ 12ನೇ ಶತಮಾನದ ಕನ್ನಡದ ತತ್ವಜ್ಞಾನಿ, ಅರಸ ಬಿಜ್ಜಳನ ಮಂತ್ರಿ ,ಸಮಾಜ ಸುಧಾರಕ, ವಚನಕಾರ ಹಾಗೂ ಕವಿ,ವಿಶ್ವಗುರು, ಪ್ರಜಾಪ್ರಭುತ್ವದ ಕ್ರಾಂತಿ ಪುರುಷ, ಭಕ್ತಿ ಭಂಡಾರಿ ಬಸವಣ್ಣ, #Basavanna ಮಾನವತವಾದಿ ಎಂದು ಬಸವಣ್ಣನವರನ್ನು ಕರೆಯುತ್ತಾರೆ ಎಂದು ಕುಮದ್ವತಿ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ಎಂ. ವೀರೇಂದ್ರ ತಿಳಿಸಿದರು.
ಪಟ್ಟಣದ ಕುಮದ್ವತಿ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ಜಗಜ್ಯೋತಿ ಬಸವೇಶ್ವರರ 893ನೇ ಜಯಂತಿಯ ಆಚರಣೆಯಲ್ಲಿ ಬಸವೇಶ್ವರರ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅಧ್ಯಕ್ಷೀಯ ನುಡಿಗಳನ್ನಾಡಿದರು.
ಬಸವಣ್ಣನವರು ವಚನಗಳ ಮೂಲಕ ಸಮಾಜವನ್ನು ತಿದ್ದುವ ಕೆಲಸವನ್ನು ಮಾಡಿದರು. ಅವರ ವಚನಗಳು ಸರ್ವಕಾಲಿಕ ಸತ್ಯವನ್ನ ತಿಳಿಸುತ್ತದೆ ಎಂದು ಹಾಗೂ ಅವರು ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹವನ್ನು ಕೊಟ್ಟು ಸಮಾಜದಲ್ಲಿ ಜಾತಿ ವಿಮೋಚನೆಯನ್ನು ತೊಡಗಿಸಿದಂತಹ ಕೀರ್ತಿ ಅಂದಿನ ಕಾಲದಲ್ಲಿ ಬಸವೇಶ್ವರರಿಗೆ ಸಲ್ಲತಕ್ಕದ್ದು ಅನುಭವ ಮಂಟಪದ ಸ್ಥಾಪಕರಾದ ಬಸವಣ್ಣನವರು ಅಂದಿನ ಕಾಲದಲ್ಲಿ ಜಾತಿಗೆ ಒಬ್ಬರಂತೆ ಪ್ರತಿನಿಧಿಯನ್ನು ಆಯ್ಕೆ ಮಾಡಿ ಸಮಾಜದಲ್ಲಿ ಸಮಾನತೆಯನ್ನು ಸಾರುವಂತ ಸಂಸತ್ತನ್ನು ಸ್ಥಾಪಿಸಿದಂತವರು ಹಾಗೂ ಗಂಡು-ಹೆಣ್ಣು ಎಂದು ಭೇದ ಭಾವ ಮಾಡದೇ ಸಮಾನತೆಯನ್ನು ಸಾರುವ ಮೂಲಕ ಆ ಅನುಭವ ಮಂಟಪದಲ್ಲಿ ಅಕ್ಕಮಹಾದೇವಿಯರಿಗೆ ಮಹಿಳೆಯರ ಪರವಾಗಿ ಸ್ಥಾನವನ್ನು ಕಲ್ಪಿಸಿ ಕೊಟ್ಟಂತಹ ಕೀರ್ತಿ ಈ ಬಸವಣ್ಣರಿಗೆ ಸಲ್ಲತಕ್ಕದ್ದು ಎಂದು ಹೇಳಿದರು.
ಕನ್ನಡ ಉಪನ್ಯಾಸಕರಾದ ಶ್ರೀಯುತ ಯೋಗರಾಜ್ ಕಾರ್ಯಕ್ರಮನ ಕುರಿತು ವಿಶೇಷ ಉಪನ್ಯಾಸ ನೀಡಿ ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀಯುತ ಲವಕುಶ ಅವರು ಸ್ವಾಗತ್ಸಿದರು, ಪ್ರಾರ್ಥನೆಯನ್ನು ಕುಮಾರಿ ಅನ್ವಿತಾ ಹಾಗೂ ವಂದನಾರ್ಪಣೆಯನ್ನ ಶ್ರೀಮತಿ ದೀಪಕ ರವರು ನೆರವೇರಿಸಿದರು.
ವೇದಿಕೆಯಲ್ಲಿ ಪ್ರಾಚಾರ್ಯ ಡಾ.ಎಂ. ವೀರೇಂದ್ರ, ವಾಣಿಜ್ಯ ವಿಭಾಗದ ಮುಖ್ಯಸ್ಥರು ಚಂದ್ರಶೇಖರ್ ಹಾಗೂ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿಯವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post