ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ರೈತರಿಗೆ ರೋಗ ನಿರ್ವಹಣೆಯಲ್ಲಿ ರಾಸಾಯನಿಕಗಳ ಬದಲು ಸಾಂಪ್ರದಾಯಿಕ, ಕಡಿಮೆ ವೆಚ್ಚದ ಮತ್ತು ಪರಿಸರ ಸ್ನೇಹಿ ದ್ರಾವಣಗಳ ಬಳಕೆ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಕೆಳದಿ ಶಿವಪ್ಪ ನಾಯಕ ಕೃಷಿ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂತಿಮ ವರ್ಷದ ಬಿಎಸ್ಸಿ (ಹಾನರ್ಸ್) ಕೃಷಿ ವಿದ್ಯಾರ್ಥಿಗಳು ಕೃಷಿಕರಿಗೆ ತಿಳಿಸಿಕೊಟ್ಟರು.
ವಿದ್ಯಾರ್ಥಿಗಳು ತಮ್ಮ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ಬೋರ್ಡೋ ದ್ರಾವಣ ತಯಾರಿಕೆ ಮತ್ತು ಅದರ ಮಹತ್ವ ಎಂಬ ವಿಷಯದ ಕುರಿತು ಗುಂಪು ಚರ್ಚೆ ಹಾಗೂ ಪ್ರಾತ್ಯಕ್ಷಿಕೆ ವಿಧಾನ ಕಾರ್ಯಕ್ರಮವನ್ನು ಶಿಕಾರಿಪುರ ತಾಲೂಕಿನ ಕಲ್ಮನೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದರು.

ಕಾರ್ಯಕ್ರಮದಲ್ಲಿ ಮೊದಲು ಬ್ರೊಡೋ ದ್ರಾವಣದ ತಯಾರಿಕಾ ವಿಧಾನವನ್ನು ಅಂತಿಮ ವರ್ಷದ ವಿದ್ಯಾರ್ಥಿಯಾದ ಚಂದನ್ ವಿವರಿಸಿದರು.
ಕಾಪರ್ ಸಲ್ಪೇಟ್, ಚೂನಾ ಮತ್ತು ನೀರನ್ನು ನಿಗದಿತ ಪ್ರಮಾಣದಲ್ಲಿ ಬಳಸಿ ಹೇಗೆ ತಯಾರಿಸಬೇಕು, ಯಾವ ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು, ಹಾಗೂ ಇದರ ಸಸ್ಯರಕ್ಷಣೆಯಲ್ಲಿ ಹೇಗೆ ಉಪಯೋಗಿಸಬಹುದು ಎಂಬುದನ್ನು ಹಂತ ಹಂತವಾಗಿ ಪ್ರದರ್ಶಿಸಿದರು.

ಗುಂಪು ಚರ್ಚೆಯ ವೇಳೆ ರೈತರು ತಮ್ಮ ಅನುಭವಗಳನ್ನು ಹಂಚಿಕೊAಡು, ಈ ದ್ರಾವಣವನ್ನು ಸ್ಥಳೀಯವಾಗಿ ತಯಾರಿಸಬಹುದಾದದು ಮತ್ತು ಕಡಿಮೆ ವೆಚ್ಚದಲ್ಲಿ ಉತ್ತಮ ಫಲಿತಾಂಶ ನೀಡುತ್ತದೆ ಎಂದು ಅಭಿಪ್ರಾಯಪಟ್ಟರು. ವಿದ್ಯಾರ್ಥಿಗಳು ರೈತರ ಪ್ರಶ್ನೆಗಳಿಗೆ ತಾಂತ್ರಿಕವಾಗಿ ಸ್ಪಷ್ಟನೆ ನೀಡಿ ಪ್ರಾಯೋಗಿಕ ಪ್ರದರ್ಶನ ಸಹ ನೀಡಿದರು.

ಈ ಕಾರ್ಯಕ್ರಮದ ಮೂಲಕ ಗ್ರಾಮೀಣ ರೈತರಿಗೆ ಸಾಂಪ್ರದಾಯಿಕ ರೋಗ ನಿರ್ವಹಣಾ ತಂತ್ರಜ್ಞಾನಗಳ ಪ್ರಾಮುಖ್ಯತೆ, ಬ್ರೊಡೋ ದ್ರಾವಣದ ಸುರಕ್ಷಿತ ತಯಾರಿ ಮತ್ತು ಅದರ ಉಪಯೋಗದ ಕುರಿತು ಪ್ರಾಯೋಗಿಕ ಅರಿವು ನೀಡಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post