ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಶಿಕಾರಿಪುರ ತಾಲ್ಲೂಕಿನ ಗಾಮಾ ಗ್ರಾಮದಲ್ಲಿ ಗುರುವಾರ ಹೋರಿ ಓಡಿಸುವ ಹಬ್ಬದ ವೇಳೆ ಹೋರಿ ಗುದ್ದಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಗ್ರಾಮದ ನಿವಾಸಿ, ಪೇಂಟಿಂಗ್ ಕೆಲಸ ಮಾಡುವ ಪ್ರಶಾಂತ ಕುಮಾರ್ (36) ಮೃತಪಟ್ಟವರು. ಓಡುತ್ತಿದ್ದ ಹೋರಿ ದಿಢೀರನೆ ಜನರತ್ತ ನುಗ್ಗಿದೆ. ಈ ವೇಳೆ ಅಲ್ಲಿ ಸ್ಪರ್ಧೆ ನೋಡುತ್ತಾ ನಿಂತಿದ್ದ ಪ್ರಶಾಂತ ಕುಮಾರ್‌ಗೆ ಗುದ್ದಿದೆ. ನೆಲಕ್ಕೆ ಬಿದ್ದ ಪ್ರಶಾಂತ್ ಅವರನ್ನು ತುಳಿದುಕೊಂಡು ಮುಂದೆ ಸಾಗಿದೆ.
ಆಗ ತೀವ್ರವಾಗಿ ಗಾಯಗೊಂಡ ಪ್ರಶಾಂತ ಕುಮಾರ ಅವರಿಗೆ ಶಿಕಾರಿಪುರ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಶುಕ್ರವಾರ ತಡರಾತ್ರಿ ಮೃತಪಟ್ಟಿದ್ದಾರೆ. ಪ್ರಶಾಂತ ಕುಮಾರ ಅವರಿಗೆ ಹೋರಿ ಗುದ್ದುವ ವಿಡಿಯೊ ಲಭ್ಯವಾಗಿದೆ.
Also read: ಸಾಹಿತಿಗಳ ಪ್ರತಿಭೆ ಅನಾವರಣಗೊಳಿಸಲು ಹೆಚ್ಚಿನ ಸಹಕಾರ ಅವಶ್ಯ: ಡಾ. ಭುವನೇಶ್ವರ್ ಅಭಿಪ್ರಾಯ
’ಊರಿನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಹೋರಿ ಓಡಿಸುವ ಸ್ಪರ್ಧೆ ಆಯೋಜಿಸಿದ್ದು, ಅದನ್ನು ನೋಡಲು ಪ್ರಶಾಂತನ ತಾಯಿ ಹಾಗೂ ಮಗಳು ಹೋಗಿದ್ದರು.
ಚಗಟೂರಿನ ಯುವಕ ಬಲಿ:
ಸೊರಬ ತಾಲ್ಲೂಕಿನ ಜಡೆ ಗ್ರಾಮದಲ್ಲಿ ಶುಕ್ರವಾರ ಹೋರಿ ತಿವಿದು ಪಕ್ಕದ ಚಗಟೂರಿನ ಯುವಕ ಆದಿ (20) ಮೃತಪಟ್ಟಿದ್ದಾನೆ.
’ಹೋರಿ ಹಬ್ಬ ಮುಗಿಸಿ ಎಲ್ಲರೂ ಮನೆಗೆ ಹೊರಟಾಗ ದಿಢೀರನೆ ಹೋರಿ ಓಡಿ ಹೋಗಿದೆ. ಆಗ ಮನೆಯತ್ತ ಹೊರಟಿದ್ದ ಆದಿ ಹೋರಿಯ ದಾಳಿಗೆ ಸಿಲುಕಿದ್ದಾನೆ.
ಹೋರಿ ಚಗಟೂರಿನದ್ದು. ಆದರೆ, ಮಾಲೀಕರು ಯಾರು ಎಂಬುದು ಗೊತ್ತಿಲ್ಲ’ ಎಂದು ಆನವಟ್ಟಿ ಪೊಲೀಸರು ತಿಳಿಸಿದ್ದಾರೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















