ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ತಾಲೂಕಿನ ಶಿರಾಳಕೊಪ್ಪ ಪಟ್ಟಣದಲ್ಲಿನ ಸೈಯದ್ ಬಿಲಾಲ್ ಎಂಬುವ ವ್ಯಕ್ತಿಗೆ ಸೇರಿದ ರೆಹಮಾನಿಯಾ ಸಾಮೀಲ್ ನಲ್ಲಿ ಒಂಟೆ ಪತ್ತೆಯಾಗಿದೆ.
ಗೌಜ್ಞಾನ್ ಪೌಂಡೆಷನ್ ನ ಸಂಜಯ್ ಕುಲಕರ್ಣಿ ಅವರು ಅನ್‌ಲೈನ್‌ನಲ್ಲಿ ನೀಡಿದ ದೂರಿನ ಮೇರೆಗೆ ಶಿರಾಳಕೊಪ್ಪ ಪಟ್ಟಣ ಪೋಲಿಸರು ದಾಳಿ ನಡೆಸಿ ಒಂಟೆಯನ್ನು ರಕ್ಷಿಸಿದ್ದಾರೆ.
ಬಕ್ರಿದ್ ಹಬ್ಬಕ್ಕೆ ಒಂಟೆಯನ್ನು ವದೆ ಮಾಡುವ ಉದ್ದೇಶದಿಂದ ಒಂಟೆಯನ್ನು ಆಕ್ರಮವಾಗಿ ತಂದು ಇಡಲಾಗಿತ್ತು ಎನ್ನಲಾಗಿದ್ದು, ಬಿಲಾಲ್ ಖಾನ್ ಪ್ರತಿ ವರ್ಷ ಬಕ್ರೀದ್ ಹಬ್ಬದ ಸಮಯದಲ್ಲಿ ಒಂಟೆಯನ್ನು ವದೆ ಮಾಡಿ ಅದರ ಮಾಂಸವನ್ನು ತಮ್ಮ ಬಾಂಧವರಿಗೆ ಹಂಚುತ್ತಾರೆ ಎಂದು ತಿಳಿದುಬಂದಿದೆ.
Also read: ಮಗ ಕೊಲೆ ಮಾಡಿದ್ದಕ್ಕೆ ಬೇಸರಗೊಂಡು ಆತ್ಮಹತ್ಯೆಗೆ ಮುಂದಾದ ತಾಯಿ
ಈ ಸಂಬಂಧ ಶಿರಾಳಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಸಲಾಗಿದೆ. ಈ ಹಿಂದೆಯು ಸಹ ಸೈಯದ್ ಬಿಲಾಲ್ ಈ ರೀತಿ ಆಕ್ರಮವಾಗಿ ಜಿಂಕೆ ಮರಿಯನ್ನು ತನ್ನ ಶಾಮಿಲ್ ನಲ್ಲಿ ಕಟ್ಟಿ ಹಾಕಿದ ಕುರಿತು ಪ್ರಕರಣ ಕೂಡ ದಾಖಲಾಗಿತ್ತು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















