ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಕುಮದ್ವತಿ ಪಿಯು ಕಾಲೇಜಿನ ವಾಣಿಜ್ಯ ವಿಭಾಗದ ಕಾಮರ್ಸ್ ಫೋರಂ ವತಿಯಿಂದ ಸೈಬರ್ ಸೆಕ್ಯೂರಿಟಿ ವಿಷಯದ ಕಾರ್ಯಗಾರದಲ್ಲಿ ಪ್ರಾಚಾರ್ಯರಾದ ವೀರೇಂದ್ರ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಸ್ತುತ ಪ್ರಪಂಚದಲ್ಲಿ ಸೈಬರ್ ಕ್ರೈಮ್ ಎನ್ನುವುದು ಸಾಮಾನ್ಯ ವಿಷಯವಾಗಿದೆ ಇದರಿಂದ ಜನಸಾಮಾನ್ಯರು ಹಾಗೂ ವಿದ್ಯಾರ್ಥಿಗಳು ಸಾಕಷ್ಟು ಸಮಸ್ಯೆಗಳಿಗೆ ಒಳಗಾಗಿದ್ದಾರೆ. ಆದ್ದರಿಂದ ಸೈಬರ್ ಕ್ರೈಂ ತಡೆಗಟ್ಟುವ ಮೊದಲೇ ಹೆಜ್ಜೆ ಎಂದರೆ ಸೈಬರ್ ಸೆಕ್ಯೂರಿಟಿಯ ಬಗ್ಗೆ ಮಾಹಿತಿಯನ್ನು ಹೊಂದಿ ನಮ್ಮ ಬ್ಯಾಂಕ್ ಅಕೌಂಟ್ ಮೊಬೈಲ್ ಹಾಗೂ ಈಮೇಲ್ ಗಳಲ್ಲಿ ಅಳವಡಿಸಿಕೊಳ್ಳುವುದಾಗಿದೆ ಎಂದರು.

ಡಿಜಿಟಲ್ ವಹಿವಾಟುಗಳನ್ನು ನಡೆಸುವ ಮುನ್ನ ವಹಿವಾಟು ನಡೆಸುವ ಮೂಲದ ಬಗ್ಗೆ ಗಮನಹರಿಸಬೇಕು ಎಂದರು.
ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ರಾಹುಲ್ ಅವರು ವಿದ್ಯಾರ್ಥಿಗಳಿಗೆ ಸೈಬರ್ ಸೆಕ್ಯೂರಿಟಿ ವಿಷಯದ ಬಗ್ಗೆ ಪಿಪಿಟಿ ಪ್ರದರ್ಶನ ನೀಡುವ ಮೂಲಕ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು.
ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ದೇವರಾಜ್, ಚಂದ್ರಿಕಾ, ಯೋಗರಾಜ್, ನಳಿನ ಪಾಟೀಲ್, ಪ್ರೇಮ, ಶಿವರಾಜ್, ಪೂಜಾ ಹಾಗೂ ಗುರುಪ್ರಸಾದ್ ಅವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post