ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಪಕ್ಷದ ಸೂಚನೆ ಉಲ್ಲಂಘಿಸಿ ಪಕ್ಷೇತರರಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ #K S Eshwarappa ಅವರ ವಿರುದ್ಧ ಕೈಗೊಂಡಿರುವ ಶಿಸ್ತುಕ್ರಮದ ವಿಚಾರದಲ್ಲಿ ನಮ್ಮ ಪಾತ್ರವಿಲ್ಲ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ #B S Yadiyurappa ಸ್ಪಷ್ಟಪಡಿಸಿದ್ದಾರೆ.
ಪಟ್ಟಣದಲ್ಲಿ ಮಾತನಾಡಿದ ಅವರು, ಪಕ್ಷದ ನಿಯಮಗಳ ಪ್ರಕಾರ ಈಶ್ವರಪ್ಪ ಅವರ ವಿರುದ್ಧ ಬಿಜೆಪಿ ರಾಜ್ಯ ಶಿಸ್ತು ಸಮಿತಿ ಸೂಕ್ತ ಕ್ರಮ ಜರುಗಿಸಿದೆ ಅಷ್ಟೆ. ಆದರೆ, ಈ ಕ್ರಮದ ವಿಚಾರದಲ್ಲಿ ನಮ್ಮದು ಯಾವುದೇ ರೀತಿಯ ಪಾತ್ರವಿಲ್ಲ. ಈಶ್ವರಪ್ಪನವರೇ ಇಷ್ಟ ಪಟ್ಟಂತೆ ಆಗಿದೆ ಅಷ್ಟೇ ಎಂದಿದ್ದಾರೆ.
Also read: ಶಿಸ್ತು ಕ್ರಮ | ಬಿಜೆಪಿಯಿಂದ ಮಾಜಿ ಡಿಸಿಎಂ ಈಶ್ವರಪ್ಪ ಉಚ್ಛಾಟನೆ | ಎಷ್ಟು ವರ್ಷ?
28 ಸ್ಥಾನವನ್ನೂ ಗೆಲ್ಲುತ್ತೇವೆ
ರಾಜ್ಯದಲ್ಲಿ ಎನ್’ಡಿಎ 28 ಸ್ಥಾನಗಳನ್ನೂ ಗೆಲ್ಲುವುದು ನಿಶ್ಚಿತ. ಮೋದಿ #Modi ಹಾಗೂ ಬಿಜೆಪಿ ಪರ ಅಲೆ, ಅಭಿವೃದ್ಧಿ ಕಾರ್ಯಗಳು ನಮಗೆ ಸಹಕಾರವಾಗಿದೆ. ಹೀಗಾಗಿ ರಾಜ್ಯದಲ್ಲಿ ಬಿಜೆಪಿಗೆ ಪೂರಕವಾಗಿ ವಾತಾವರಣ ಇದೆ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post