No Result
View All Result
KRCS Shikaripura Achieves 100% Result in CBSE Class X Board Exams
English Articles

KRCS Shikaripura Achieves 100% Result in CBSE Class X Board Exams

by ಕಲ್ಪ ನ್ಯೂಸ್
April 16, 2026
0

Kalpa Media House  |  Shikaripura | Kumadvathi Residential Central School (KRCS), Shikaripura, has achieved a 100% pass result in the...

Read moreDetails
ಬೆಂಗಳೂರು–ಬಂಗಾರಪೇಟೆ ಮೆಮು ರೈಲುಗಳಿಗೆ ತಾತ್ಕಾಲಿಕ ನಿಲುಗಡೆ

Cancellation of Ashokapuram – KSR Bengaluru MEMU trains

April 16, 2026
First VALORANT Campus Cup Champions Crowned

First VALORANT Campus Cup Champions Crowned

April 15, 2026
Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

April 13, 2026
Berger Paints Responds to India’s Heat Challenge with ‘Garmi Gone, Thandak On’ Home Cooling Solutions Range

Berger Paints Responds to India’s Heat Challenge with ‘Garmi Gone, Thandak On’ Home Cooling Solutions Range

April 13, 2026
  • Advertise With Us
  • Grievances
  • About Us
  • Contact Us
Saturday, April 18, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ ಶಿಕಾರಿಪುರ

ಅವ್ಯವಸ್ಥೆಗಳ ಆಗರ ಶಿಕಾರಿಪುರ ಆಡಳಿತಸೌಧ

ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿ ಸ್ಥಳೀಯರು

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
April 9, 2021
in ಶಿಕಾರಿಪುರ
0
ಅವ್ಯವಸ್ಥೆಗಳ ಆಗರ ಶಿಕಾರಿಪುರ ಆಡಳಿತಸೌಧ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್

ಶಿಕಾರಿಪುರ: ಸರ್ಕಾರಿ ಕೆಲಸ ದೇವರ ಕೆಲಸ ಎಂದು ಹೇಳಲಾಗುತ್ತಿದೆ ಇಂತಹಾ ದೇವರ ಕೆಲಸ ಮಾಡಲು ಸುಸಜ್ಜಿತ ಕಟ್ಟಡವನ್ನು ಹೊಂದಿರುವ ದೇವಾಲಯ ನಿರ್ಮಾಣ ಮಾಡಿ ಉತ್ತಮ ಸೇವೆ ನೀಡಲು ಅರ್ಚಕರ ರೂಪದಲ್ಲಿ ನೌಕರರಿಗೆ ನೇಮಕ ಮಾಡಿ ಇಲಾಖೆಗಳಿಗೆ ಬರುವಂತಹ ಸಾರ್ವಜನಿಕರ ಅಗತ್ಯವಿರುವ ಕೇಲಸ ಕಾರ್ಯಗಳನ್ನು ಮಾಡಲು ಅವಕಾಶ ಕಲ್ಪಿಸಲಾಗುತ್ತದೆ. ದೇವಾಲಯಗಳಂತೆ ನಿರ್ಮಾಣ ಮಾಡಲಾಗಿರುವ ಸುಸಜ್ಜಿತ ಕಟ್ಟಡಗಳಲ್ಲಿ ಸ್ವಚ್ಚತೆಯನ್ನು ಕಾಪಾಡಿಕೊಳ್ಳಲು ಬುದ್ದಿಜೀವಿಗಳಾಗಿರುವ ಅನೇಕ ಅಧಿಕಾರಿಗಳು ಆಡಳಿತ ಸಿಬ್ಬಂದಿಗಳು ವಿಫಲರಾಗಿದ್ದಾರೆ.

ಹೌದು ಪಟ್ಟಣದ ತಾಲ್ಲೂಕು ಕಛೇರಿ ಸಮೀಪದ ಆಡಳಿತ ಸೌಧದಲ್ಲಿ ಇಂತಹ ಒಂದು ಎಡಬಿಡಂಗಿ ಕೆಲಸ ಮಾಡಲಾಗುತ್ತಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರವರು ಪ್ರಥಮ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ ತಾಲ್ಲೂಕಿನ ರೈತರಿಗೆ ಕೃಷಿ ಕಾರ್ಮಿಕರಿಗೆ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಲವು ಕೋಟಿ ರೂಪಾಯಿಗಳ ಅನುದಾನದಡಿ ವಿವಿಧ ಇಲಾಖೆಗಳ ಆಡಳಿತ ಮಂಡಳಿಯನ್ನು ಒಂದೇ ಸೂರಿನಡಿ ತರಲೆಂದು ಭವ್ಯವಾದ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಿ 2012ರ ಮೇ 5ರಂದು ಇದರ ಉದ್ಘಾಟನೆ ನೆರವೇರಿಸಿದ್ದರು.

ಈ ಕಟ್ಟಡವು ಆರಂಭದಲ್ಲಿ ನೋಡುಗರಿಗೆ ಆಕರ್ಷಕವಾಗಿ ಕಾಣುತ್ತಿತ್ತಾದರೂ, ಕೆಲ ವರ್ಷಗಳ ನಂತರ ಇದರ ಕಳೆ ಕುಂದಲಾರಂಭಿಸಿತು. ಇಲ್ಲಿ ಧೂಮಪಾನ ಮದ್ಯಪಾನ ಹಾಗೂ ವಿವಿಧ ರೀತಿಯ ಅಸಭ್ಯವಾದ ಚಟುವಟಿಕೆಗಳಿಗೆ ಅನುಕೂಲವಾಗುವ ಎಲ್ಲಾ ಲಕ್ಷಣಗಳು ಆರಂಭವಾದವು. ಇಲ್ಲಿ ಉನ್ನತ ಮಟ್ಟದ ಅಧಿಕಾರಿಗಳು, ಬುದ್ಧಿ ಜೀವಿಗಳು, ಡಿ ಗ್ರೂಪ್ ಸಿಬ್ಬಂದಿಗಳು ಜರ್ದಾ, ಗುಟ್ಕಾ, ತಾಂಬೂಲ ಪ್ರಿಯರೇ ಹೆಚ್ಚಾಗಿದ್ದು, ಅವರಿಗೆ ತಿಂದಿರುವ ತಾಂಬೂಲಗಳನ್ನು ಹೊರ ಉಗಿಯಲು ಅನೇಕ ಮೆಟ್ಟಿಲುಗಳನ್ನು ಇಳಿದು ಬರಬೇಕಿತ್ತು, ಇದು ಕಷ್ಟಕರವಾದ ಕಾರಣ ಅಲ್ಲಿಯೇ ಹತ್ತಿರದಲ್ಲಿದ್ದ ಗೋಡೆಗಳಿಗೆ, ಶೌಚಾಲಯದ ಬೇಸಿನ್‌ಗಳಲ್ಲಿ ಅಥವಾ ಕಿಟಕಿ ಮೂಲಕ ಉಗುಳುವ ಪದ್ಧತಿ ರೂಢಿಸಿಕೊಂಡರು, ಹಾಗೆಯೇ ಕಛೇರಿ ವೇಳೆಯಲ್ಲಿಯೋ ಅಥವಾ ರಜಾ ದಿನಗಳಲ್ಲಿಯೋ ಇಲ್ಲಿ ಮದ್ಯೆ ಪಾನ ಮಾಡಿ ಬಾಟಲಿ ಅಥವಾ ರ್‍ಯಾಪರ್‌ಗಳನ್ನು ಕಟ್ಟಡದ ಕಿಟಕಿ ಮೂಲಕ ಹೊರಹಾಕಲಾಗುತ್ತಿದೆ.

ಅದೇರೀತಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಂದರ್ಭದಲ್ಲಿ ಬೆಳಿಗ್ಗಿನ ತಿಂಡಿ ತಿನಿಸುಗಳನ್ನು ತಿಂದು ಬಳಕೆ ಮಾಡಿದ ಪ್ಲಾಸ್ಟಿಕ್ ತಟ್ಟೆ, ಟೀ ಕಾಫಿ ಮೊದಲಾದವುಗಳನ್ನು ಕುಡಿದ ಲೋಟಗಳನ್ನು ಸಹ ಕಿಟಕಿ ಮೂಲಕ ಹೊರಹಾಕಲಾಗುತ್ತಿದೆ. ಈ ಕಟ್ಟಡವು ಅಸ್ವಚ್ಚತೆಯಿಂದ, ದುರ್ವಾಸನೆಯಿಂದ ಹಲವು ಸಾಂಕ್ರಾಮಿಕ ರೋಗಗಳನ್ನು ಹರಡುವ ಹಾಗೂ ಅನೇಕ ವೈರಸ್ ಅಥವಾ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗುವ ಎಲ್ಲಾ ಲಕ್ಷಣಗಳು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಇಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಾಣ ಮಾಡಲಾಗಿರುವ ಶೌಚಾಲಯಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದ್ದ ಪೈಪ್‌ಗಳು ಆಕಸ್ಮಿಕ ಬೆಂಕಿ ತಗುಲಿ ಸುಟ್ಟು ಹೋಗಿದೆ. ನೀರು ಹರಿಸುವ ಪ್ರಯತ್ನ ಮಾಡಿದರೆ ಎಲ್ಲಾ ನೀರು ಮೇಲಿನಿಂದ ಕೆಳಕ್ಕೆ ಬಿದ್ದು ಹರಿದು ಹೋಗುತ್ತಿದೆ. ಇದರಿಂದ ಇಲ್ಲಿನ ಶೌಚಾಲಯಗಳು ದುರ್ವಾಸನೆಯಿಂದ ಮೂಗು ಮುಚ್ಚಿಕೊಂಡು ಅಥವಾ ಉಸಿರು ಕಟ್ಟಿಕೊಂಡು ಶೌಚಾಲಯ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ಶೌಚಾಲಯಗಳ ಆಸುಪಾಸಿನಲ್ಲಿ ವಿವಿಧ ಇಲಾಖೆಗಳ ಆಡಳಿತ ಮಂಡಳಿಯವರೂ ಸಹ ಮೂಗು ಮುಚ್ಚಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದನ್ನು ತಪ್ಪಿಸಲು ವಿವಿಧ ಇಲಾಖೆಗಳ ಅಧಿಕಾರಿಗಳು ಈ ಶೌಚಾಲಯಗಳ ಬಾಗಿಲಿಗೆ ಬೀಗ ಹಾಕಿದ್ದರಿಂದ ಶೌಚಾಲಯಗಳ ಆಸುಪಾಸಿನ ವಿವಿಧ ಇಲಾಖೆಗಳಲ್ಲಿ ದುರ್ವಾಸನೆ ಕಡಿಮೆಯಾಗಿದೆ.

ಈ ಕಟ್ಟಡವನ್ನು ನಿರ್ಮಾಣ ಮಾಡಲಾಗಿರುವ ಸಂದರ್ಭದಲ್ಲಿಯೇ ಇದರ ಪಕ್ಕದಲ್ಲೇ ಕೂಗಳತೆಯಷ್ಟು ದೂರ ಇರುವ ತಾಲ್ಲೂಕು ಪಂಚಾಯಿತಿ (ಗ್ರಾಮೀಣ ಸೌಧ) ಕಟ್ಟಡ ಕೂಡ ಇದೇ ಸಮಯದಲ್ಲಿ ಉದ್ಘಾಟನೆಯಾಗಿತ್ತು. ತಾಲ್ಲೂಕು ಪಂಚಾಯಿತಿಯ ಕಟ್ಟಡವು ಉತ್ತಮ ಸ್ಥಿತಿಯಲ್ಲಿದ್ದು, ಆದರೆ ಆಡಳಿತ ಸೌಧಾ ಸಂಪೂರ್ಣ ಹದಗೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಮೇಂಟೆನೆನ್ಸ್ ಜವಾಬ್ದಾರಿಯನ್ನು ಲೋಕೋಪಯೋಗಿ ಇಲಾಖೆಗೆ ವಹಿಸಲಾಗಿತ್ತು. ನಂತರ ಅಸ್ವಚ್ಚತೆಯ ಬಗ್ಗೆ ಅನೇಕ ಪತ್ರಿಕೆಗಳಲ್ಲಿ ಹಲವಾರು ಬಾರಿ ಸುದ್ದಿ ಪ್ರಕಟವಾದ ನಂತರ ಇಲ್ಲಿ ಪುರಸಭೆಯಿಂದ ಸ್ವಚ್ಚಗೊಳಿಸಲಾಗಿತ್ತು. ಈಗ ಮತ್ತೆ ಅದೇ ಪರಿಸ್ಥಿತಿ ಬಂದೊದಗುತ್ತಿದೆ. ಬಲ್ಲ ಮೂಲಗಳ ಪ್ರಕಾರ ತಾಲ್ಲೂಕು ಕಛೇರಿಯ ತಹಶೀಲ್ದಾರ್ ಅವರಿಗೆ ಜವಾಬ್ದಾರಿ ವಹಿಸಲಾಗಿದೆ ಎನ್ನಲಾಗುತ್ತಿದೆ.

ಏನೇ ಆದರೂ ಎರಡನೇ ಹಂತದ ಕೊರೋನ ಹಿನ್ನೆಲೆಯ ಈಗಿನ ಪರಿಸ್ಥಿತಿಯಲ್ಲಿ ಇಲ್ಲಿನ ಆಡಳಿತ ಅಧಿಕಾರಿಗಳಾಗಲೀ, ಮೇಲಧಿಕಾರಿಗಳಾಗಲೀ ಈ ಆಡಳಿತ ಸೌಧ ಶುಚಿಗೊಳಿಸಿ ಬಣ್ಣದ ಲೇಪನ ಮಾಡಿಸಿದರೆ ಮುಖ್ಯಮಂತ್ರಿ ಹಾಗೂ ಸಂಸದರ ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸಿದಂತಾಗುತ್ತದೆ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ವಿಶೇಷ ವರದಿ: ರಾಜಾರಾವ್ ಜಾಧವ್, ಶಿಕಾರಿಪುರ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

Tags: CM BS YadiyurappaKannada News WebsiteLatest News KannadaLocal NewsMalnad NewsMP BY RaghavendraShikaripuraShimogaShivamoggaShivamogga Newsಮಲೆನಾಡು_ಸುದ್ಧಿಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಶಿಕಾರಿಪುರಶಿಕಾರಿಪುರ ಆಡಳಿತಸೌಧಶಿವಮೊಗ್ಗ_ನ್ಯೂಸ್
Share209Tweet123Send
Previous Post

ನೀವು ಕಟ್ಟಿ ಬೆಳೆಸಿದ ಸಂಸ್ಥೆಯ ವಿರುದ್ಧ ಮುಷ್ಕರ ಕೈಬಿಡಿ: ಅಂಜುಂ ಪರ್ವೇಜ್ ಮನವಿ

Next Post

ಗಾಯಾಳು ಯೋಗಕ್ಷೇಮ ವಿಚಾರಿಸಿ ಸರಳತೆ ಮೆರೆದ ಸಚಿವ ಈಶ್ವರಪ್ಪ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಗಾಯಾಳು ಯೋಗಕ್ಷೇಮ ವಿಚಾರಿಸಿ ಸರಳತೆ ಮೆರೆದ ಸಚಿವ ಈಶ್ವರಪ್ಪ

ಗಾಯಾಳು ಯೋಗಕ್ಷೇಮ ವಿಚಾರಿಸಿ ಸರಳತೆ ಮೆರೆದ ಸಚಿವ ಈಶ್ವರಪ್ಪ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಭದ್ರಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದ KSRTC ನೌಕರನ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ

ಭದ್ರಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದ KSRTC ನೌಕರನ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ

April 18, 2026
ಗಮನಿಸಿ! ಈ ಎರಡು ದಿನ ಮೈಸೂರು-ಶಿವಮೊಗ್ಗ ರೈಲು ಸಂಚಾರದಲ್ಲಿ ಬದಲಾವಣೆ

ಹುಬ್ಬಳ್ಳಿ-ಅಲಿಪುರ್ ದ್ವಾರ್ ನಡುವೆ ವಿಶೇಷ ರೈಲು ಸೇವೆ ಮತ್ತೆ ವಿಸ್ತರಣೆ | ಇಲ್ಲಿದೆ ಡೀಟೇಲ್ಸ್

April 18, 2026
ರಾಜ್ಯ ಸರ್ಕಾರಿ ನೌಕರರಿಗೂ ಕೇಂದ್ರ ವೇತನ ಆಯೋಗದ ವರದಿ ಜಾರಿ? ಸಿಎಸ್ ಷಡಾಕ್ಷರಿ ಹೇಳಿದ್ದೆನು?

ರಾಜ್ಯ ಸರ್ಕಾರಿ ನೌಕರರಿಗೂ ಕೇಂದ್ರ ವೇತನ ಆಯೋಗದ ವರದಿ ಜಾರಿ? ಸಿಎಸ್ ಷಡಾಕ್ಷರಿ ಹೇಳಿದ್ದೆನು?

April 18, 2026
ಕುಡಿಯುವ ನೀರಿನ ಬಾವಿಗೆ ವಿಷ | ಪ್ರಕರಣ ದಾಖಲು

ಕುಡಿಯುವ ನೀರಿನ ಬಾವಿಗೆ ವಿಷ | ಪ್ರಕರಣ ದಾಖಲು

April 18, 2026
ಶಿಕಾರಿಪುರ | ಸಕಾರಾತ್ಮಕ ಸಿದ್ಧತೆಯಿಂದ ಉನ್ನತ ಸ್ಥಾನ ಅಲಂಕರಿಸಲು ಸಾಧ್ಯ | ತಹಶೀಲ್ದಾರ್ ವಾಣಿ

ಶಿಕಾರಿಪುರ | ಸಕಾರಾತ್ಮಕ ಸಿದ್ಧತೆಯಿಂದ ಉನ್ನತ ಸ್ಥಾನ ಅಲಂಕರಿಸಲು ಸಾಧ್ಯ | ತಹಶೀಲ್ದಾರ್ ವಾಣಿ

April 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL