ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಡಿಜಿಟಲ್ ತಂತ್ರಜ್ಞಾನ ಉತ್ತಮ ರೀತಿಯಲ್ಲಿ ಬೆಳವಣಿಗೆ ಹೊಂದಿದ್ದು, ಅದನ್ನು ಒಳ್ಳೆಯ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳಿ ಹಾಗೂ ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಳ್ಳುವವರ ಜೊತೆ ಎಚ್ಚರಿಕೆಯಿಂದ ವ್ಯವಹರಿಸಿ ಎಂದು ಸಂಸದ ರಾಘವೇಂದ್ರ ಸಲಹೆ ನೀಡಿದರು.
ಜಿಲ್ಲಾಡಳಿತ ಶಿವಮೊಗ್ಗ ಮತ್ತು ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್, ಕೆನರಾ ಬ್ಯಾಂಕ್ ಇವರ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಬ್ಯಾಂಕ್ ಡಿಜಟಲ್ ಪಾವತಿ ಮಾಹಿತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಯಾವುದೇ ಬ್ಯಾಂಕ್‌ಗಳಿಂದ ಒಟಿಪಿ ಕೇಳುವುದಿಲ್ಲ. ಖಾತೆಗಳನ್ನು ಹ್ಯಾಕ್ ಮಾಡುವ ಸಲುವಾಗಿ ಕಿಡಿಗೇಡಿಗಳು ಅನಾವಶ್ಯಕ ಸಂದೇಶಗಳನ್ನು ಕಳಿಸುತ್ತಾರೆ. ಸಾರ್ವಜನಕರು ಎಚ್ಚರಿಕೆಯಿಂದ ಇರಬೇಕು. ಸೈಬರ್ ಕ್ರೈಮ್ ಬಗ್ಗೆ ತಮ್ಮ ಸ್ವಂತ ಅನುಭವ ಹಂಚಿಕೊಂಡ ಸಂಸದರು, ಇಂಟರ್‌ನ್ಯಾಷನಲ್ ಸೈಬರ್ ಕ್ರೈಮ್ ಲಿಂಕ್ ಹೊಂದಿರುವ ವ್ಯಕ್ತಿಯೋರ್ವ ಮುಂಬೈನಲ್ಲಿ ಕುಳಿತು ತಮ್ಮ ಶಿವಮೊಗ್ಗದ ಬ್ಯಾಂಕ್ ಖಾತೆಯಿಂದ 16 ಲಕ್ಷ ರೂ. ಡ್ರಾ ಮಾಡಿದ ಬಗ್ಗೆ ವಿವರಿಸಿದರು.
Also read: ಗುರುಗಳನ್ನು ನೆನೆಯುವ ಕಾರ್ಯ ಶ್ಲಾಘನೀಯ: ನಿವೃತ್ತ ಶಿಕ್ಷಕಿ ವಿನೋದಾ ಅರ್ಚಕ್
ತಮ್ಮ ಗಮನಕ್ಕೆ ಬಾರದೇ ಇಷ್ಟು ಹಣ ವರ್ಗಾವಣೆ ಆಗಿರುವುದನ್ನು ತಕ್ಷಣ ಗಮನಿಸಿ ಪೊಲೀಸರಿಗೆ ದೂರು ನೀಡಿದ ಬಳಿಕ ಶಿವಮೊಗ್ಗ ಪೊಲೀಸರು ಆತನ ಜಾಡುಹಿಡಿದು ಮುಂಬೈಗೆ ತೆರಳಿ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾದರು. ತಂತ್ರಜ್ಞಾನ ಬಹಳ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಅದರ ಜೊತೆಗೆ ಅದನ್ನು ದುರ್ಬಳಕೆ ಮಾಡಿಕೊಳ್ಳುವವರ ಸಂಖ್ಯೆಯೂ ದೊಡ್ಡಮಟ್ಟದಲ್ಲಿದೆ. ಸೈಬರ್ ಕ್ರೈಮ್ ಮಾಡುವುದನ್ನೇ ವೃತ್ತಿ ಮಾಡಿಕೊಂಡಿರುವ ಇಂತಹ ವ್ಯಕ್ತಿಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಕೇಂದ್ರ ಹಾಗೂ ವಿವಿಧ ಬ್ಯಾಂಕ್ ಗಳ ಚೆಕ್ ಗಳನ್ನು ಪಲಾನುಭವಿಗಳಿಗೆ ವಿತರಿಸಿದರು. ಕೆನರಾ ಬ್ಯಾಂಕ್ ಎಜಿಎಂ ಪ್ರದೀಪ್ ಕುಮಾರ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಉಪ ಮಹಾ ಪ್ರಬಂಧಕರಾದ ಎ ರಾಜಮಣಿ ಅವರು, ನಬಾರ್ಡ್ ಅಧಿಕಾರಿ ರವಿ, ಹಯವಧನ ಉಪಾಧ್ಯಯ, ಗಣೇಶ್,ಲೀಡ್ ಬ್ಯಾಂಕ್ ಮ್ಯಾನೇಜರ್ ಯತೀಶ್, ಶಿಕಾರಿಪುರ ಪುರಸಭೆ ಅಧ್ಯಕ್ಷರಾದ ರೇಖಾಭಾಯಿ, ಮುಖ್ಯಧಿಕಾರಿ ಭರತ್, APMC ನಿರ್ದೇಶಕರಾದ ಸುಧೀರ್,ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















