ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ವಿಕಲಚೇತನ ಹಾಗೂ ಹಿರಿಯ ನಾಗರೀಕರ ಕಲ್ಯಾಣ ಇಲಾಖೆಯ ಅಡಿಯಲ್ಲಿ ಸಂಸದ ಬಿ.ವೈ.ರಾಘವೇಂದ್ರರವರ ಶಿಫಾರಸಿನ ಮೇರೆಗೆ ವಿಕಲಚೇತನರಿಗೆ 10 ತ್ರಿಚಕ್ರ ವಾಹನಗಳನ್ನು ಪಲಾನುಭವಿಗಳಿಗೆ ಶಿಕಾರಿಪುರ ತಾಲೂಕು ಪಂಚಾಯತ್ ಅವರಣದಲ್ಲಿ ಇಂದು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮಲೆನಾಡು ಅಭಿವೃದ್ದಿ ಮಂಡಳಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ ವಿಕಲಚೇತನರಿಗೆ ವಾಹನಗಳನ್ನು ವಿತರಿಸಿದರು.



ಗುದ್ದಲಿ ಪೂಜೆ:
ಶಿಕಾರಿಪುರ ಪಟ್ಟಣದ ಚನ್ನಕೇಶವ ಜಯನಗರ ಕುಂಬಾರಗುಂಡಿ ಕೊಳಚೆ ಪ್ರದೇಶದಲ್ಲಿ 1 ಕೋಟಿ ರೂ. ವೆಚ್ಚದ ನಿರ್ಮಾಣ ಕಾಮಗಾರಿಗೆ ಸಂಸದ ಬಿ.ವೈ. ರಾಘವೇಂದ್ರ ಗುದ್ದಲಿ ಪೂಜೆ ನೆರವೇರಿಸಿದರು.


ಕಾಮಗಾರಿಯ ಮಾಹಿತಿ:
ಚನ್ನಕೇಶವನಗರ : 200ಮೀ ರಸ್ತೆ, ಜಯನಗರ : 543 ಮೀ ರಸ್ತೆ, 350 ಮೀ ಚರಂಡಿ, ಕುಂಬಾರ ಗುಂಡಿ : 150 ರಸ್ತೆ, 160 ಮೀ ಚರಂಡಿ, 2 ಅಡ್ಡ ಮೋರಿ, ಕಾಮಗಾರಿಯ ಒಟ್ಟು ವೆಚ್ಚ – 1 ಕೋಟಿ ರೂ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















