ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ರಾಜ್ಯಾದ್ಯಂತ ಹಿಜಾಬ್ ವಿವಾದ ಭುಗಿಲೆದ್ದಿದ್ದು ಪಟ್ಟದ ಜೂನಿಯರ್ ಕಾಲೇಜು ಎದುರು ಪ್ರತಿಭಟನೆ ಜೋರಾಗಿದ್ದು ಉದ್ರಿಕ್ತ ಗುಂಪು ಶಿವಮೊಗ್ಗ ದಿಂದ ಬರುತ್ತಿದ್ದ ಖಾಸಗಿ ಬಸ್ ಗ್ಲಾಸ್ ಅನ್ನು ಪುಡಿಗೊಳಿಸಿದ್ದಾರೆ.
ಬೆಳಗ್ಗೆ ಹಿಜಾಬ್ ಧರಿಸಿ ಬಂದ ಯುವತಿಯರಿಗೆ ಕಾಲೇಜು ಪ್ರಾಂಶುಪಾಲರು ಸರ್ಕಾರ ಆದೇಶ ಕಾನೂನು ಪಾಲಿಸುವಂತೆ ತಿಳಿಸಿದರು. ಶಿಕಾರಿಪುರ ಪಟ್ಟಣದ ಜೂನಿಯರ್ ಕಾಲೇಜ್ ಮುಂಬಾಗ ಹಿಜಾಬ್ ಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ನೂರಾರು ಸಂಖ್ಯೆಯ ಸಮುದಾಯದ ಮುಖಂಡರು ಯುವಕರು ಮುಂಜಾನೆಯಿಂದಲೇ ಪ್ರತಿಭಟನೆ ನಿರತರಾಗಿದ್ದರು. ಈ ಸಮಸ್ಯೆ ಬಗೆಹರಿಯುವವರೆಗೆ ಕಾಲೇಜು ನಡೆಸುವಂತಿಲ್ಲ ಎಂದು ಮುಸ್ಲಿಂ-ಪರ ಮುಖಂಡರು ಪ್ರಾಂಶುಪಾಲರಿಗೆ ವಾದವನ್ನು ಮಾಡಿದರು. ತಮ್ಮ ಯುವತಿಯರನ್ನು ಕಾಲೇಜಿನಿಂದ ಹೊರಗಡೆ ಕಳಿಸುವಂತೆ ಮನವಿ ಮಾಡಿ ಕರೆದುಕೊಂಡು ಹೋದರು ಎನ್ನಲಾಗಿದೆ.
ಪೊಲೀಸರು ಪ್ರತಿಭಟನೆಯನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಿದ್ದು, ಉದ್ರಿಕ್ತಗೊಂಡ ಮುಸ್ಲಿಮ್ ಯುವಕರ ಗುಂಪು ಬಸ್ ಗ್ಲಾಸನ್ನು ಪುಡಿಗೊಳಿಸಿದ್ದಾರೆ ಇದರಿಂದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಕೆಲ ಕಾಲ ವಾತಾವರಣ ಸಂಪೂರ್ಣ ಕಲುಷಿತಗೊಂಡಿದ್ದು ಕಾಲೇಜು ಮುಂಭಾಗ ನಿಲ್ಲಿಸಲಾಗಿದ ಎಲ್ಲಾ ಬೈಕ್ ಗಳನ್ನು ಪೋಲಿಸ್ ವಶಕ್ಕೆ ಪಡೆದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post