ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಮರಗಳನ್ನು ಬೆಳೆಸುವುದು ಭವಿಷ್ಯದ ಇಂಧನಕ್ಕೆ ಹೂಡಿಯಾಗಿದೆ ಎಂದು ಇರುವಕ್ಕಿ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಪ್ರಧಾನ ಸಂಶೋಧಕರಾದ ಡಾ. ಹೊನ್ನಪ್ಪ ಅಭಿಪ್ರಾಯಪಟ್ಟರು.
ವಿವಿ ವತಿಯಿಂದ ನೆಲವಾಗಿಲು ಗ್ರಾಮದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗಾಗಿ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಡಿಯಲ್ಲಿ ಆಯೋಜಿಸಲಾಗಿದ್ದ ಜೈವಿಕ ಇಂಧನ-ಭವಿಷ್ಯದ ಇಂದ ಎಂಬ ವಿಚಾರದಲ್ಲಿ ಅವರು ಮಾತನಾಡಿದರು.

ಜೈವಿಕ ಇಂಧನ #Bio Fuel ಉತ್ಪಾದನೆಯ ಪ್ರಕ್ರಿಯೆ, ಅದರ ಪರಿಸರಸ್ನೇಹಿ ಲಾಭಗಳು ಮತ್ತು ದೇಶದ ಇಂಧನ ಆಮದು ಅವಲಂಬನೆ ಕಡಿಮೆ ಮಾಡುವದರಲ್ಲಿ ಇದರ ಪಾತ್ರವನ್ನು ವಿವರಿಸಿದರು.
Also read: ಋತುಬಂಧದ ಸಮಯದಲ್ಲಿ ಈ ವಿಚಾರದ ಬಗ್ಗೆ ಗಮನ ಹರಿಸಿ | ಡಾ.ಶಶಿಕಲಾ ಹೇಳಿದ್ದೇನು?
ಜೈವಿಕ ಡೀಸೆಲ್ ಪ್ರತಿ ಲೀಟರ್ 85 ರೂ. ದರದಲ್ಲಿ ಲಭ್ಯವಿದ್ದು, ಇದನ್ನು ನೈಸರ್ಗಿಕ ಡೀಸೆಲ್’ಗೆ 10% ಅಥವಾ 25% ಪ್ರಮಾಣದಲ್ಲಿ ಮಿಶ್ರಣ ಮಾಡಲು ಶಿಫಾರಸ್ಸು ಮಾಡಲಾಗಿದೆ ಎಂದರು.
ರೈತರನ್ನು ಪ್ರೋತ್ಸಾಹಿಸಲು, ಡಾ. ಹೊನ್ನಪ್ಪ ಅವರು ಒಣ ಕಾಳುಗಳನ್ನು ಪ್ರತಿ ಕೆಜಿಗೆ 30 ದರದಲ್ಲಿ ಖರೀದಿಸುವ ಭರವಸೆ ನೀಡಿದರು. ಅಲ್ಲದೇ ರೈತರಿಗೆ ಹೊಂಗೆ ಮರದ ಸಸಿಗಳನ್ನು ವಿತರಿಸಿದರು.

ಕೃಷಿ ವಿವಿಯ ಕೃಷಿ ವಿಸ್ತರಣಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಅರುಣ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದರು.
ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಸಹಯೋಗದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post