ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪ್ರತಿಯೊಬ್ಬರೂ ತಮ್ಮ ಮನೆಯ ಹಿಂಭಾಗದಲ್ಲಿ ಸ್ವಲ್ಪ ಜಾಗವಿದ್ದಲ್ಲಿ ಅಲ್ಲಿಯೇ ಕೈತೋಟ ಮಾಡಿಕೊಳ್ಳುವುದರಿಂದ ಹಲವಾರು ರೀತಿಯ ಪ್ರಯೋಜನಗಳಿವೆ ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳು ಮಾಹಿತಿ ನೀಡಿದರು.
ಶಿಕಾರಿಪುರ #Shikaripura ತಾಲೂಕಿನ ಸುರಗಿಹಳ್ಳಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಕೃಷಿ ಕಾರ್ಯಾನುಭವ ಕಾರ್ಯಕ್ರಮದಡಿಯಲ್ಲಿ ಕೈತೋಟದ #KitchenGarden ಮಹತ್ವದ ಬಗ್ಗೆ ಗುಂಪು ಚರ್ಚೆಯಲ್ಲಿ ವಿದ್ಯಾರ್ಥಿಗಳು ಮಾಹಿತಿ ನೀಡಿದರು.
Also Read>> ಶಿವಮೊಗ್ಗ | ವೈಯಕ್ತಿಕ ಕಾರಣಕ್ಕೆ ಅಣ್ಣನಿಂದಲೇ ತಮ್ಮನ ಹತ್ಯೆ
ಸಾಮಾನ್ಯವಾಗಿ ಹಳ್ಳಿಮನೆಗಳ ಹಿತ್ತಲಿನಲ್ಲಿ ಸ್ವಲ್ಪ ಜಾಗವನ್ನು ಬಿಟ್ಟಿಕೊಂಡಿರುತ್ತಾರೆ. ಈ ಜಾಗದಲ್ಲಿ ಮನೆಗೆ ಬೇಕಾಗಿರುವ ತರಕಾರಿಗಳಾದ ಟೊಮ್ಯಾಟೊ, ಮೆಣಸಿನಕಾಯಿ, ಬದನೆಕಾಯಿ, ಕರಿಬೇವು, ಸೊಪ್ಪುಗಳಾದ ಕೊತ್ತಂಬರಿ, ಪಾಲಕ್, ಪುದಿನಾ, ಮೆಂತ್ಯ, ದಂಟು ಸೊಪ್ಪು, ಹೂವಿನ ಗಿಡಗಳಾದ ಚೆಂಡು, ಸೇವಂತಿಗೆ, ಕನಕಾಂಬರ, ಮಲ್ಲಿಗೆ, ಗುಲಾಬಿ ಹಾಗೂ ಹಣ್ಣುಗಳಾದ ಪೇರಲೆ, ಪಪಾಯ ಗಿಡಗಳನ್ನು ಹಾಕಿಕೊಳ್ಳಬಹುದು ಎಂದರು.
ಈ ರೀತಿಯಲ್ಲಿ ಕೈತೋಟ ಮಾಡಿಕೊಳ್ಳುವುದರಿಂದ ತರಕಾರಿಯ ಖರ್ಚು ಕಡಿಮೆ ಮಾಡಿಕೊಳ್ಳಬಹುದಲ್ಲದೆ, ರಾಸಾಯನಿಕ ಮುಕ್ತ ತರಕಾರಿಗಳನ್ನು ಸೇವಿಸಬಹುದು. ಹಾಗಾಗಿ ಪ್ರತಿಯೊಂದು ಮನೆಯಲ್ಲಿ ಕೈತೋಟ ಮಾಡಿಕೊಳ್ಳುವುದು ಅವಶ್ಯಕವಾಗಿದೆ ಎಂದು ತಿಳಿಸಿದರು.
ಕುಂಡಲಿ ಮಿಶ್ರಣ ತಯಾರಿಕೆ-ಪದ್ಧತಿ ಪ್ರಾತ್ಯಕ್ಷಿಕೆ
ಪ್ರತಿಯೊಬ್ಬರು ತಮ್ಮ ಮನೆಯು ಚೆಂದವಾಗಿ ಕಾಣಬೇಕೆಂದು ಮನೆಯ ಮುಂದೆ ಗಿಡಗಳನ್ನು ಕುಂಡಲಿಗಳಲ್ಲಿ ಹಾಕಿಕೊಂಡಿರುತ್ತಾರೆ. ಕುಂಡಲಿಗೆ ಬರೀ ಮಣ್ಣನ್ನು ಹಾಕಿದರೆ ಗಿಡಗಳು ಚೆನ್ನಾಗಿ ಬೆಳೆಯುವುದಿಲ್ಲ. ಅದಕ್ಕೆ ಕೆಲವು ಪದ್ದತಿ ಅನುಸರಿಸಬೇಕು ಎಂದರು.
Also Read>> ಒಂದು ದಿನದ ಅಂತರದಲ್ಲಿ ಇಬ್ಬರು ಪತ್ರಕರ್ತರನ್ನು ಕಳೆದುಕೊಂಡ ಶಿವಮೊಗ್ಗ ಪತ್ರಿಕೋದ್ಯಮ
ಮಣ್ಣು, ಮರಳು, ಗೊಬ್ಬರ ಹಾಗೂ ತೆಂಗಿನ ನಾರಿನ (ಕೋ ಕೋ ಪೀಟ್) ಸಮಮಿಶ್ರಣ ತಯಾರಿಸಿಕೊಂಡು ಕುಂಡಲಿಗೆ ಹಾಕಬೇಕು, ನಂತರ ಗಿಡವನ್ನು ನೆಡಬೇಕು. ಹೀಗೆ ಮಾಡಿದರೆ ಗಿಡದ ಬೇರಿಗೆ ಬೇಕಾದ ನೀರು ಗಾಳಿ ಹಾಗೂ ಪೋಷಕಾಂಶಗಳು ದೊರೆಯುತ್ತದೆ. ಹಾಗೆಯೇ ಗಿಡವು ಚೆನ್ನಾಗಿ ಬೆಳೆಯುತ್ತದೆ ಎಂಬ ಪದ್ಧತಿ ಪ್ರಾತ್ಯಕ್ಷಿಕೆ ಮೂಲಕ ವಿದ್ಯಾರ್ಥಿಗಳು ತಿಳಿಸಿಕೊಟ್ಟರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post