ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಕಾಂಗ್ರೆಸ್ ಪಕ್ಷದ ಮುಸ್ಲಿಂ ತುಷ್ಟೀಕರಣದ ರಾಜಕಾರಣ ಸ್ವಾರ್ಥಕ್ಕೆ ಇನ್ನೂ ಎಷ್ಟು ಹಿಂದೂ ಕಾರ್ಯಕರ್ತರು ಬಲಿಯಾಗಬೇಕು ಎಂದು ರಾಜ್ಯ ಸರ್ಕಾರದ ವಿರುದ್ಧ ಸಂಸದ ಬಿ.ವೈ. ರಾಘವೇಂದ್ರ MP Raghavendra ಕಿಡಿ ಕಾರಿದರು.
ಮುಸ್ಲಿಂ ಯುವಕರು ಸುಶೀಲ್ ಎಂಬಾತನ ಮೇಲೆ ಶಿಕಾರಿಪುದಲ್ಲಿ ಚಾಕು ಇರಿದ ಪ್ರಕರಣದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿ ಅವರು ಮಾತನಾಡಿದರು.
ಸುಶೀಲ್ ಎಂಬಾತ ಜನವಸತಿ ಪ್ರದೇಶದಲ್ಲಿ ವೀಲಿಂಗ್ ಮಾಡಬೇಡಿ ಎಂದು ಮುಸ್ಲಿಂ ಯುವಕರಿಗೆ ಬುದ್ದಿ ಹೇಳಿದ್ದಾನೆ. ಇಷ್ಟಕ್ಕೇ ಕೋಪಗೊಂಡು ರಾತ್ರಿವರೆಗೂ ಕಾದು, ಸಂಚು ರೂಪಿಸಿ ಸುಶೀಲ್’ಗೆ ಯುವಕರು ಚಾಕು ಇರಿದಿದ್ದಾರೆ. ಓರ್ವ ವ್ಯಕ್ತಿಗೆ ಚಾಕು ಇರಿದು ಮನೆಯಲ್ಲಿ ನೆಮ್ಮದಿಯಿಂದ ಮಲಗುತ್ತಾರೆ ಎಂದರೆ ಅವರು ನಾಗರಿಕರಾ ಎಂದು ಪ್ರಶ್ನಿಸಿದರು.
ಚಾಕು ಹಾಕಿರುವ ರೀತಿ ನೋಡಿದರೆ ಅವರಿಗೆ ಈ ಮುನ್ನವೇ ಇಂತಹ ಕೃತ್ಯಗಳಿಗೆ ತರಬೇತಿ ಆಗಿರುವಂತೆ ಕಾಣುತ್ತದೆ ಎಂದು ಅನುಮಾನ ವ್ಯಕ್ತಪಡಿಸಿದರು.
ಕೆಲವು ದಿನಗಳ ಹಿಂದೆ ಮುಸ್ಲಿಂ ಸಮುದಾಯದವರು ಮೀಟಿಂಗ್ ಮಾಡಿಕೊಂಡ ವೇಳೆ ಅವರೇ ಹೊಡೆದಾಡಿಕೊಂಡು, ಚಾಕು ಇರಿದುಕೊಂಡಿದ್ದಾರೆ. ಹೊಳೆಹೊನ್ನೂರಿನಲ್ಲಿ ಮರ ಕಡಿದ ವಿಚಾರದಲ್ಲಿ ಹಲ್ಲೆ ಮಾಡಿದ್ದಾರೆ. ಶಿರಾಳಕೊಪ್ಪದ ಮುಸ್ಲಿಂ ವ್ಯಕ್ತಿಯೊಬ್ಬರ ಸಾಮಿಲ್’ನಲ್ಲಿ ಒಂಟೆ, ನವಿಲು ಸಾಕಾಲಾಗಿದೆ. ಆತ ಜಿಂಕೆ ಹೊಡೆದು ಕೊಂದ ಪಿಸ್ತೂಲು ಪೊಲೀಸ್ ಸ್ಟೇಷನ್ನಿನಲ್ಲಿ ಆತನನ್ನು ಅಲ್ಲವೇ ಅಲ್ಲ ಎಂಬ ರೀತಿಯಲ್ಲಿ ಬದಲಾವಣೆಯಾಗುತ್ತದೆ. ಏನು ನಡೆಯುತ್ತಿದೆ ಎಂದು ಖಾರವಾಗಿ ಪ್ರಶ್ನಿಸಿದರು.
ಕಾಂಗ್ರೆಸ್’ನ ಓಟ್ ಬ್ಯಾಂಕ್ ರಾಜಕಾರಣದ ಪರಿಣಾಮ ಇಂತಹ ಕ್ರಿಮಿನಲ್’ಗಳು ಹಾಗೂ ಕ್ರಿಮಿನಲ್ ಕೃತ್ಯಗಳು ರಾಜ್ಯದಲ್ಲಿ ಹೆಚ್ಚಾಗಿವೆ. ನಿಮ್ಮ ಸ್ವಾರ್ಥಕ್ಕೆ ಇನ್ನೂ ಎಷ್ಟು ಹಿಂದೂ ಕಾರ್ಯಕರ್ತರು ಬಲಿಯಾಗಬೇಕು ಎಂದು ಕಿಡಿ ಕಾರಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಮುಸ್ಲಿಂ ಸಮುದಾಯದ ಕೆಲವರು ತಾವು ಏನು ಮಾಡಿದರೂ ನಡೆಯುತ್ತದೆ, ಯಾರೂ ಕೇಳುವಂತಿಲ್ಲ ಎಂಬAತೆ ವರ್ತಿಸುತ್ತಿದ್ದಾರೆ. ಏನೇ ಮಾಡಿದರೂ ನಾವು ನೋಡಿಕೊಂಡು ಸುಮ್ಮನೆ ಕೂರುತ್ತೇವೆ ಎಂಬ ತಪ್ಪು ತಿಳುವಳಿಕೆ ಬೇಡ ಎಂದು ಎಚ್ಚರಿಕೆ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post