ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಕೃಷಿಯಲ್ಲಿ #Agriculture ಸಮೃದ್ಧಿಗಾಗಿ ಕೃಷಿಕರು ತಮ್ಮ ಜಮೀನಿನ ಮಣ್ಣನ್ನು ಪ್ರತಿ ಎರಡು ಮೂರು ವರ್ಷಗಳಿಗೆ ಒಮ್ಮೆ ಪರೀಕ್ಷೆ ಮಾಡಿಸಬೇಕು ಎಂದು ಮಣ್ಣು ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ನಿರಂಜನ್ ತಿಳಿಸಿದರು.
ಶಿಕಾರಿಪುರ ತಾಲೂಕಿನ ಹಳೆಮುಗಳಗೆರೆ ಗ್ರಾಮದಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣೆ ಕುರಿತಾಗಿ ನಡೆದ ಗುಂಪು ಚರ್ಚೆಯಲ್ಲಿ ಅವರು ಮಾತನಾಡಿದರು.
ಕೃಷಿಯಲ್ಲಿ ಸಮೃದ್ಧಿಗೆ ಕೃಷಿಕರು ನಿರಂತರ ಗಮನಹರಿಸಬೇಕು. ಪ್ರತಿ ಎರಡ್ಮೂರು ವರ್ಷಕ್ಕೊಮ್ಮೆ ತಮ್ಮ ಕೃಷಿ ಜಮೀನಿನ ಮಣ್ಣಿನ ಪರೀಕ್ಷೆ #Soil Test ಮಾಡಿಸಬೇಕು ಎಂದರು.
Also read: ಚಳ್ಳಕೆರೆ | ಸರ್ವಿಸ್ ರಸ್ತೆಯಲ್ಲಿ ಬಸ್ ಬಾರದೇ ವಿದ್ಯಾರ್ಥಿಗಳ ಪರದಾಟ | ಸಿಎಂ ಕಚೇರಿಯಿಂದ ಸ್ಪಂದನೆ
ಅದರ ವರದಿ ಆಧರಿಸಿ ಸಮಗ್ರ ಪೋಷಕಾಂಶ ನಿರ್ವಹಣೆ ಮಾಡಬೇಕು, ಹಸಿರೆಲೆ ಗೊಬ್ಬರ, ಜೈವಿಕ ಗೊಬ್ಬರ, ಪೀಡೆನಾಶಕ ಬಳಕೆ ಮಾಡಬೇಕು, ಮಿಶ್ರಬೆಳೆಯ ಸುಸ್ಥಿರ ಕೃಷಿ ಪದ್ಧತಿ ಅನುಸರಿಸಬೇಕು. ಸಮಗ್ರ ಪೋಷಕಾಂಶಗಳ ನಿರ್ವಹಣೆಯ ಮೂಲಕ, ರೈತರು ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳಬಹುದು ಎಂದರು.
ಇದರ ಜೊತೆಯಲ್ಲಿ ಪರಿಸರ ಮಾಲಿನ್ಯವನ್ನು ಕಡಿಮೆ ಮಾಡಬಹುದು, ಆರ್ಥಿಕ ಇಳುವರಿಯನ್ನು ಕಾಪಾಡಿಕೊಳ್ಳಬಹುದು, ಆರೋಗ್ಯಕರ ಆಹಾರವನ್ನು ಉತ್ಪಾದಿಸಬಹುದು. ಮಣ್ಣಿನ ಗುಣಮಟ್ಟ ಹೆಚ್ಚಿಸಬೇಕು ಎಂದರು.
ಊರಿನ ರೈತರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರ ಪ್ರಶ್ನೆಗಳನ್ನು ಕೇಳಿ ತಜ್ಞರಲ್ಲಿ ಉತ್ತರ ಪಡೆದುಕೊಂಡರು.
ಇರುವಕ್ಕಿಯ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post