ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡುತ್ತಿರುವ ಬಿಜೆಪಿ ಅಭ್ಯರ್ಥಿ ಬಿ.ವೈ. ವಿಜಯೇಂದ್ರ B Y Vijayendra 56 ಕೋಟಿ ಚರಾಸ್ತಿ ಮತ್ತು 70 ಕೋಟಿ ಸ್ಥಿರಾಸ್ತಿ ಹೊಂದಿದ್ದು, ಕಳೆದ ವರ್ಷ 1.25 ಕೋಟಿ ಆದಾಯ ಸಂಪಾದಿಸಿದ್ದಾರೆ.
ನಾಮಪತ್ರ ಸಲ್ಲಿಕೆ ವೇಳೆ ತಮ್ಮ ಆಸ್ತಿಯನ್ನು ಘೋಷಣೆ ಮಾಡಿಕೊಂಡಿರುವ ಅವರು, 2.6 ಕೋಟಿ ನಗದು, ವಿವಿಧ ಬ್ಯಾಂಕ್ ಹಾಗೂ ಖಾಸಗಿ ಹೂಡಿಕೆ ಸೇರಿ 2.6 ಕೋಟಿ ಇದೆ.35 ಕೋಟಿ ಸಾಲ ಇದೆ. ಇದರಲ್ಲಿ ಅಣ್ಣ ಸಂಸದ ಬಿ.ವೈ. ರಾಘವೇಂದ್ರ B Y Raghavendra ಅವರಿಗೆ ಕೊಡಬೇಕಾದ ಸಾಲ 85.48 ಲಕ್ಷ, 1.75 ಲಕ್ಷ ಮೌಲ್ಯದ ವಾಹನ ಹೊಂದಿದ್ದಾರೆ. 26 ಕೋಟಿ ಮೌಲ್ಯದ ಭೂಮಿ, ಕೃಷಿಯೇತರ ಭೂಮಿ ಇದೆ.
88.65 ಲಕ್ಷ ಮೌಲ್ಯದ ಆಭರಣಗಳನ್ನು ಹೊಂದಿರುವ ಇವರು 1.340 ಕೆಜಿ ಬಂಗಾರ, 9.5 ಕ್ಯಾರೆಟ್ ಡೈಮಂಡ್, 16.25 ಕೆಜಿ ಬೆಳ್ಳಿ ಇದೆ ಎಂದು ವಿವರಿಸಿದ್ದಾರೆ.
Also read: ತೆನೆ ತೆಕ್ಕೆಗೆ ಮಾಜಿ ಶಾಸಕ: ಕೆ.ಬಿ. ಪ್ರಸನ್ನ ಕುಮಾರ್ ಜೆಡಿಎಸ್’ನಿಂದ ಸ್ಪರ್ಧೆ?
ಇವರ ವಿರುದ್ಧ ಸರ್ಕಾರ ಸೇವೆಯಲ್ಲಿರುವವರಿಗೆ ಲಂಚಕ್ಕಾಗಿ ಬೇಡಿಕೆ ಮತ್ತು ಹಣ ಅಕ್ರಮ ವರ್ಗಾವಣೆ ತಡೆ ಕಾಯಿದೆ ಅನ್ವಯ ಎರಡು ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ.
ಇವರ ಪತ್ನಿ ಪ್ರೇಮ ಅವರು 12.72 ಕೋಟಿ ಚರಾಸ್ತಿ, 13.72 ಕೋಟಿ ಸ್ಥಿರಾಸ್ತಿ ಹೊಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post