ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಸಮಯ ಹಾಗೂ ಶ್ರಮ ಪಕ್ಷ ಸಂಘಟನೆಯಲ್ಲಿ ಹೆಚ್ಚಿನ ಸಹಕಾರಿಯಾಗಬೇಕು, ಸಮಾಜದಲ್ಲಿ ದೊಡ್ಡ ಜವಾಬ್ದಾರಿ ಮಹಿಳಾ ಕಾರ್ಯಕರ್ತರಿಗೆ ಇದೆ, ಈ ಕಾರ್ಯಕಾರಣಿಯಲ್ಲಿ ಸಂಕಲ್ಪವನ್ನು ಮಾಡೋಣ ಬರುವ ದಿನದಲ್ಲಿ ನಮ್ಮ ಮಹಿಳಾ ಮೋರ್ಚಾ ವತಿಯಿಂದ ಸದೃಡ ಸಮಾವೇಶವನ್ನು ಮಾಡಿ, ಪಕ್ಷ ಬಲಪಡಿಸೋಣ ಎಂದು ಸಂಸದ ರಾಘವೇಂದ್ರ MP Raghavendra ಕರೆ ನೀಡಿದರು.
ಶಿಕಾರಿಪುರದ ಬಿಜೆಪಿ ಕಛೇರಿಯಲ್ಲಿ ಮಹಿಳಾ ಮೋರ್ಚಾದ ಕಾರ್ಯಕಾರಿಣಿ ಸಭೆಯನ್ನು ಸಂಸದರಾದ ಬಿ ವೈ ರಾಘವೇಂದ್ರ ಅವರು ಉದ್ಘಾಟಿಸಿ, ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಆರ್ಟಿಕಲ್ 370 ರದ್ದು, ರಾಮ ಮಂದಿರ ವಿಷಯ,ದೇಶದ ರಕ್ಷಣೆ, ವಿದೇಶಾಂಗ ನೀತಿ, ರೈತ ನಾಯಕ ಬಿ. ಎಸ್ ಯಡಿಯೂರಪ್ಪ ನವರು ಮುಖ್ಯಮಂತ್ರಿ ಯಾಗಿದ್ದಾಗ ಮಹಿಳೆಯರಿಗಾಗಿ ಭಾಗ್ಯಲಕ್ಷ್ಮಿ ಯೋಜನೆ, ಸೈಕಲ್ ನೀಡುವ ಕಾರ್ಯಕ್ರಮ, ಸಂಧ್ಯಾ ಸುರಕ್ಷಾ, ವೃದ್ದಾಪ್ಯ ವೇತನ, ವಿಧವಾ ವೇತನ, ಕೆಂದ್ರ ಸರ್ಕಾರದಿಂದ ಮಾತೃವಂದನಾ, ಸುಕನ್ಯ ಸಮೃದ್ಧಿ ಯೋಜನೆ, ಬೇಟಿ ಬಚಾವ್ ಯೋಜನೆ, ಪೋಷಣ್ ಅಭಿಯಾನ, ಉಜ್ವಲಾ ಯೋಜನೆ ಹೀಗೆ ನಮ್ಮ ಬಿಜೆಪಿ ಸರ್ಕಾರ ಮಹಿಳೆಯರಿಗೆ ನೀಡಿದ ಜನಪರ ಯೋಜನೆಗಳನ್ನು ನೀಡಿದೆ ಎಂದು ತಿಳಿಸಿದರು.
ಮಾರ್ನಿಂಗ್ ಕನ್ಸಲ್ ಪೊಲಿಟಿಕಲ್ ಇಂಟೆಲಿಜೆನ್’ ನಡೆಸಿದ ಸಮೀಕ್ಷೆಯಲ್ಲಿ ನಮ್ಮ ಪ್ರಧಾನಿ ನರೇಂದ್ರ ಮೋದಿಜಿಯವರಿಗೆ ಶೇ. 77 ರೇಟಿಂಗ್ ದೊರೆತಿದ್ದು, ಅವರು ಜಗತ್ತಿನ ಅತ್ಯುತ್ತಮ ನಾಯಕ ಎಂದು ಸಮೀಕ್ಷೆಯಲ್ಲಿ ತಿಳಿದುಬಂದಿದೆ ಇದು ಹೆಮ್ಮೆಪಡುವ ವಿಷಯ ಎಂದು ಇದೇ ಸಂದರ್ಭದಲ್ಲಿ ಹೇಳಿದರು.
ಕಾರ್ಯಕ್ರಮದಲ್ಲಿ ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕೆ. ಎಸ್ ಗುರುಮೂರ್ತಿ, ತಾಲೂಕು ಬಿಜೆಪಿ ಅಧ್ಯಕ್ಷ ವೀರೇಂದ್ರ ಪಾಟೀಲ್, ಮಹಿಳಾ ಘಟದ ಅಧ್ಯಕ್ಷರಾದ ರೂಪ, ಲತಾ, ಪ್ರಧಾನ ಕಾರ್ಯದರ್ಶಿ ತೇಜಸ್ವಿನಿ, ನೇತ್ರಾ, ಲತಾ, ಶಿಕಾರಿಪುರ / ಶಿರಾಳಕೊಪ್ಪ ಪುರಸಭಾ ಅಧ್ಯಕ್ಷರಾದ ರೇಖಾ ಬಾಯಿ, ಮಂಜುಳಾ ರಾಜು, ವಸಂತ ಗೌಡ್ರು, ಶುಭ, ನಿರ್ಮಲಮ್ಮ, ಆಶಾ ಪದಾಧಿಕಾರಿಗಳು, ಪುರಸಭಾ ಸದಸ್ಯರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post