ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಹೆಣ್ಣು ಎಲ್ಲ ಸಮಸ್ಯೆಗಳನ್ನು ಎದುರಿಸಿಕೊಂಡು ಮನಸ್ಸಾಕ್ಷಿಯ ಪರವಾಗಿ ಗಂಡ, ಮಕ್ಕಳು, ಅಣ್ಣ, ತಮ್ಮ, ಅಕ್ಕ, ತಾಯಿ, ತಂದೆ ಇತ್ಯಾದಿ ಪಾತ್ರಗಳನ್ನು ನಿರ್ವಹಿಸಿ ಎಲ್ಲರನ್ನು ನಗುವಿನಿಂದ ನೋಡಿಕೊಳ್ಳುವ ಹಾಗೂ ಉತ್ತಮ ವಾತಾವರಣವನ್ನು ರೂಪಿಸುತ್ತಾಳೆ. ಆದ್ದರಿಂದ ಅವಳ ಈ ನಿಸ್ವಾರ್ಥ ಸೇವೆಗಾಗಿ ವರ್ಷದಲ್ಲಿ ಒಂದು ಬಾರಿ ನೆನೆದುಕೊಂಡು ಅವಳಿಗೆ ಶುಭ ಹಾರೈಸುವ ಎಂದು ಕನ್ನಡ ಉಪನ್ಯಾಸಕರೂ, ಎನ್’ಎಸ್’ಎಸ್ ಸಂಚಾಲಕರೂ ಹಾಗೂ ಹಾಸ್ಯ ಕಲಾವಿದರೂ ಆದ ಕವಿತಾ ಸುಧೀಂದ್ರ ಅಭಿಪ್ರಾಯಪಟ್ಟರು.
ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ, ಕುಮದ್ವತಿ ಪ್ರಥಮ ದರ್ಜೆ ಕಾಲೇಜು ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ #InternationalWomensDay ಅವರು ಮಾತನಾಡಿದರು.
ಮಹಿಳೆ ತಾಳ್ಮೆ, ಸಹನೆ, ಸಂಸ್ಕೃತಿ ಭದ್ರತೆ, ಸ್ಪೂರ್ತಿಯ ಸೆಲೆಯಾಗಿದ್ದಾಳೆ. ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆ ತನ್ನನ್ನು ಗುರುತಿಸಿಕೊಂಡು ಮನೆ, ಶಾಲೆಗಳಲ್ಲಿ ಅತ್ಯಂತ ಉತ್ತಮವಾಗಿ ತೊಡಗಿಸಿಕೊಂಡು ಬೆಳೆಸುತ್ತಾಳೆ. ಹಿಂದಿನ ಕಾಲದಲ್ಲಿ ಮಹಿಳೆಯನ್ನು ಗೌರವದಿಂದ ನೋಡುವ ಮನಸ್ಥಿತಿಯಿಂದ ಬದಲಾಗಿ ಕೇವಲ ಹೆಣ್ಣು ಎಂದು ಗುರುತಿಸುವ ಅನಿವಾರ್ಯತೆಗೂ ಬಂದಿದ್ದಾರೆ ಎಂದರು.
ಹೆಣ್ಣು ಕುಟುಂಬದ ಎಲ್ಲಾ ಭಾರವನ್ನು ತಾನೇ ಹೊತ್ತುಕೊಂಡು ಅವಿರತವಾಗಿ ಹಗಲಿರುಳು ದುಡಿಯುವ ಒಂದು ಚೈತನ್ಯ ಮೂರ್ತೀಯಾಗಿದ್ದಾಳೆ. ಯಾವುದಾದರೂ ಮನೆಯಲ್ಲಿ ಗಂಡು ಕುಟುಂಬದ ಜವಾಬ್ದಾರಿಯನ್ನು ಮರೆತು ಜೀವಿಸಬಹುದು. ಆದರೆ, ಹೆಣ್ಣು ಎಲ್ಲ ಸಮಸ್ಯೆಗಳನ್ನು ಎದುರಿಸಿಕೊಂಡು ಮನಸ್ಸಾಕ್ಷಿಯ ಪರವಾಗಿ ಗಂಡ, ಮಕ್ಕಳು, ಅಣ್ಣ, ತಮ್ಮ, ಅಕ್ಕ, ತಾಯಿ, ತಂದೆ ಇತ್ಯಾದಿ ಪಾತ್ರಗಳನ್ನು ನಿರ್ವಹಿಸಿ ಎಲ್ಲರನ್ನು ನಗುವಿನಿಂದ ನೋಡಿಕೊಳ್ಳುವ ಹಾಗೂ ಉತ್ತಮ ವಾತಾವರಣವನ್ನು ರೂಪಿಸುತ್ತಾಳೆ. ಆದ್ದರಿಂದ ಅವಳ ಈ ನಿಸ್ವಾರ್ಥ ಸೇವೆಗಾಗಿ ವರ್ಷದಲ್ಲಿ ಒಂದು ಬಾರಿ ನೆನೆದುಕೊಂಡು ಅವಳಿಗೆ ಶುಭ ಹಾರೈಸುವ ದಿನವಾಗಿ ಮಾರ್ಪಟ್ಟಿರುವುದು ಸಂತೋಷದ ಸಂಗತಿ ಎಂದರು.
ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರು ಹಾಗೂ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಪ್ರತಿನಿಧಿಗಳು ಅದ ಡಾ.ಜಿ.ಎಸ್. ಶಿವಕುಮಾರ್ ಅವರು ಮಾತನಾಡಿ, ಒಂದು ಉತ್ತಮ ಸಮಾಜ, ಕುಟುಂಬ, ದೇಶ ಅಭಿವೃದ್ಧಿಯಾಗಬೇಕಾದರೆ ಅಲ್ಲಿ ಹೆಣ್ಣಿನ ಪಾತ್ರ ಬಹಳ ಮುಖ್ಯ. ಉದಾ: ಸುಧಾ ನಾರಾಯಣ ಮೂರ್ತಿ, ಪ್ರಥಮ ಬಿಇ (ಇಂಜಿನಿಯರ್) ನಿಖೆ, ಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿ ಬಾಯಿ ಪುಲೆ, ನಿರ್ಮಲಾ ಸೀತಾರಾಮನ್, ಕಲ್ಪನಾ ಚಾವ್ಲಾ, ಇಂಜಿನಿಯರ್, ಶಿಕ್ಷಣ, ಬಾಹ್ಯಾಕಾಶ, ಔದ್ಯೋಗಿಕ ಕ್ಷೇತ್ರ, ಇವರುಗಳ ಸಾಧನೆಯನ್ನು ಗಮನಗಂಡರೆ ಮಹಿಳೆ, ಪುರುಷ ಪ್ರದಾನ ವ್ಯವಸ್ಥೆಯಲ್ಲಿಯೂ ಉತ್ತಮ ಸಾಧನೆ ಮಾಡುತ್ತಾಳೆಂದು ಹೆಸರಿಸಲು ಇವೇ ಉದಾಹರಣೆಗಳು ಸಾಕು ಆದ್ದರಿಂದ ಮಹಿಳೆಯನ್ನು ಉತ್ತಮವಾಗಿ ನೋಡಿಕೊಂಡು ಗೌರವಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಆಢಳಿತ ಸಮನ್ವಯಾಧಿಕಾರಿಗಳಾದ ಕೆ. ಕುಬೇರಪ್ಪ, ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರು ಡಾ.ಕೆ.ಸಿ. ರವೀಂದ್ರ, ಕುಮದ್ವತಿ ಪ್ರಥಮ ದರ್ಜೆ ಕಾಲೇಜು, ಮಹಿಳಾ ಸಬಲೀಕರಣ ಸಮಿತಿಯ ಸಂಚಾಲಕರಾದ ಸಹಾಯಕ ಪ್ರಾಧ್ಯಾಪಕರಾದ ಡಾ. ಡಿ.ಸಿ. ವಾಣಿ ನಾಯಕಿ, ಹಂಸ ಮತ್ತು ದಾನೇಶ್ವರಿ, ಸಹಾಯಕ ಗ್ರಂಥಪಾಲಕರಾದ ಕವಿತಾ ಹರವಿಶೆಟ್ಟರ್ ಉಪಸ್ಥಿತರಿದ್ದರು. ಶಿಕ್ಷಣ ಮಹಾವಿದ್ಯಾಲಯ ಮತ್ತು ಪ್ರಥಮ ದರ್ಜೆ ಕಾಲೇಜಿನ ಎಲ್ಲಾ ಮಹಿಳಾ ಪ್ರಶಿಕ್ಷಾಣಾರ್ಥಿಗಳು ಉಪಸ್ಥಿತರಿದ್ದರು.
ಪ್ರಶಿಕ್ಷಣಾರ್ಥಿಗಳಾದ ರಮ್ಯಾ ಹಾಗೂ ಸಂಗಡಿಗರು ಪ್ರಾರ್ಥಿಸಿ, ದ್ವಿತೀಯ ಎಂಕಾಂ ವಿದ್ಯಾರ್ಥಿನಿ ಎಸ್.ಪಿ. ನವ್ಯ ಹಾಗೂ ಪ್ರಥಮ ಎಂಕಾಂ ವಿದ್ಯಾರ್ಥಿನಿ ಸಿಂಧು ಸ್ವಾಗತಿಸಿದರು. ಪ್ರಶಿಕ್ಷಣಾರ್ಥಿ ಜಿ.ಆರ್. ವಂದನಾ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















