ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಭಾರತದ ಯುವ ಸಮೂಹಕ್ಕೆ ಮಹಾತ್ಮರ ಆದರ್ಶ ಬದುಕು ಇಂದಿಗೂ ಪ್ರಸ್ತುತ ಎಂದು ಕುಮದ್ವತಿ ಕಾಲೇಜಿನ ಪ್ರಾಚಾರ್ಯ ಡಾ.ಎಂ. ವೀರೇಂದ್ರ ಮಾತನಾಡಿದರು.
ಪಟ್ಟಣದ ಕುಮದ್ವತಿ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯ ಪ್ರಯುಕ್ತ ಕಾಲೇಜಿನ ಆವರಣದಲ್ಲಿ ಶ್ರಮದಾನ ಮಾಡುವುದರ ಮೂಲಕ ಮಹಾತ್ಮರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಪ್ರಾಚಾರ್ಯ ಡಾ.ಎಂ. ವೀರೇಂದ್ರ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

Also read: ಗಾಂಧಿ ಜಯಂತಿ ಅಂಗವಾಗಿ ನ್ಯಾಯಾಲಯದ ಆವರಣದಲ್ಲಿ ಸ್ವಚ್ಚತಾ ಹೀ ಸೇವಾ ಕಾರ್ಯಕ್ರಮ
ಈ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಶಿವರಾಜ್ ಇಡೀ ವಿಶ್ವವೇ ಕಂಡ ಅತ್ಯಂತ ಶ್ರೇಷ್ಠ ವ್ಯಕ್ತಿ ಮಹಾತ್ಮ ಗಾಂಧಿ ಇವರು ಪ್ರಾಮಾಣಿಕತೆ ಮತ್ತು ಸತ್ಯದ ದಾರಿಯಲ್ಲಿ ನಡೆದಂತವರು ಎಂದು ಕೂಡ ಅಧಿಕಾರದ ಆಸೆಗೆ ಜೊತಬಿದ್ದವರಲ್ಲ ಅವರ ಆ ಒಂದು ಕರೆಗೆ ಇಡೀ ದೇಶ ಹೆಜ್ಜೆ ಹಾಕಿದೆ.ಅಹಿಂಸಾ ಹೋರಾಟದ ತತ್ವವನ್ನು ಭಾರತದ ನೆಲದಿಂದ ವಿಶ್ವಕ್ಕೆ ನೀಡಿದರು ಹಾಗೂ ಎರಡನೇ ಪ್ರಧಾನಮಂತ್ರಿಯಾಗಿ ಲಾಲ್ ಬಹದ್ದೂರ್ ಶಾಸ್ತ್ರಿ ಜಿ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ಹಸಿರು ಕ್ರಾಂತಿ ಜೈ ಜವಾನ್ ಜೈ ಕಿಸಾನ್ ಇತ್ಯಾದಿ ಮಹತ್ಕಾರ್ಯಗಳಿಂದ ರಾಷ್ಟ್ರದಲ್ಲಿ ಪ್ರಖ್ಯಾತಿ ಪಡೆದವರು ಇವರಿಬ್ಬರೂ ಅಕ್ಟೋಬರ್ ಅಲ್ಲಿ ಜನಿಸಿದ ಭಾರತದ ಮಹಾನ್ ಚೇತನ ಎಂದು ಹೇಳಿದರು,

ವೇದಿಕೆಯಲ್ಲಿ ಪ್ರಾಚಾರ್ಯ ಡಾ.ಎಂ. ವೀರೇಂದ್ರ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಚಂದ್ರಶೇಖರ್ ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 












Discussion about this post