ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಸಾಧಕರನ್ನು ಸನ್ಮಾನಿಸಿ ಪುರಸ್ಕರಿಸುವುದು ತುಂಬಾ ಅರ್ಥಗರ್ಭಿತವಾದ ಕಾರ್ಯಕ್ರಮವಾಗಿದೆ ಎಂದು ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಕೆ.ಎನ್. ಮಧುಸೂದನ್ ತಿಳಿಸಿದರು.
ಮೈತ್ರಿ ಪ್ರಾಥಮಿಕ ಶಾಲೆ ಮತ್ತು ಕುಮದ್ವತಿ ಪ್ರೌಢಶಾಲೆಯಲ್ಲಿ ಶೈಕ್ಷಣಿಕ ವರ್ಷದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಇಂದಿನ ಮಕ್ಕಳು ಕೇವಲ ಒಂದು ಬರಹದ ಕಡೆಗೆ ಹೆಚ್ಚು ಗಮನ ಕೊಡುವುದರ ಜೊತೆಗೆ ಕ್ರೀಡೆಗಳಿಗೂ ಗಮನ ಕೊಡಬೇಕು. ಕ್ರೀಡೆಗಳಲ್ಲಿ ತೊಡಗಿರುವ ಮಕ್ಕಳು ಶೈಕ್ಷಣಿಕವಾಗಿ ಪ್ರಗತಿ ಶೀಲರಾಗಿರುತ್ತಾರೆ. ಕ್ರೀಡೆಗಳು ನಮ್ಮನ್ನು ಆರೋಗ್ಯವಂತರನ್ನಾಗಿ ಮಾಡುವುದರ ಜೊತೆಗೆ ನಮ್ಮನ್ನು ಕ್ರೀಯಾಶೀಲರನ್ನಾಗಿ ಮಾಡುತ್ತವೆ ಎಂದರು.

Also Read: ರಾಜ್ಯಸಭೆಯಲ್ಲೇ ಕಾಂಗ್ರೆಸ್ ಸದಸ್ಯ ಸಿಂಘ್ವಿ ಆಸನದ ಕೆಳಗೆ ಕಂತೆ ಕಂತೆ ನೋಟು ಪತ್ತೆ!
ಕುಮದ್ವತಿ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎಂ. ವೀರೇಂದ್ರ ಮಾತನಾಡಿ, ಮೈತ್ರಿ ಮತ್ತು ಕುಮದ್ವತಿ ಶಾಲೆಯ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವುದರ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಾಲೆಯನ್ನು ಗುರುತಿಸುವ ಹಾಗೆ ಮಾಡಿದ್ದಾರೆ. ಇದಕ್ಕೆ ಈ ಶಾಲೆಯ ಎಲ್ಲಾ ಸಿಬ್ಬಂದಿಯ ಒಗ್ಗಟ್ಟಿನ ಕಾರ್ಯಚಟುವಟಿಕೆಗಳೆ ಕಾರಣ. ಇಂದಿನ ಪೋಷಕರು ತಮ್ಮ ಮಕ್ಕಳ ಮೇಲೆ ನಿರೀಕ್ಷೆಯನ್ನು ಇಟ್ಟು ಕೊಂಡಿರುತ್ತಾರೆ. ಅದನ್ನು ಅರಿತು ಮಕ್ಕಳು ತಮ್ಮ ಪೋಷಕರ ನಿರೀಕ್ಷೆಗಳನ್ನು ಈಡೆರಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಪ್ರಾಚಾರ್ಯರಾದ ಪಿ. ವಿಶ್ವನಾಥ ಮಾತನಾಡಿ, ಪ್ರತಿಭೆಗೆ ಎಂಬುದು ಯಾರಲ್ಲಿ ಇರುತ್ತದೆಯೊ ಅವರು ಬೆಳೆಯುತ್ತಾರೆ ಮತ್ತು ಸಾಮಾಜಿಕವಾಗಿ ಗುರುತಿಸಿಕೊಳ್ಳುತ್ತಾರೆ. ಮಕ್ಕಳು ತಮ್ಮ ಪೋಷಕರಿಗೆ ಗೌರವ ಕೊಡುವುದರ ಮೂಲಕ ಅವರನ್ನು ಗೌರವಿಸಬೇಕು. ದೇವರು ಕೊಟ್ಟ ರೀತಿಯಲ್ಲಿ ಬದುಕಬೇಕು ಹೆಚ್ಚು ನಿರೀಕ್ಷೆಗಳನ್ನು ಬಯಸಿದೆ ತಮ್ಮ ಸಾಮರ್ಥ್ಯದ ಕಡೆ ಗಮನವಿರಬೇಕು. ತಮ್ಮ ಗುರಿಯೂ ನಿಶ್ಚಿತವಾಗಿದ್ದಾಗ ಯಾವುದೇ ಗೊಂದಲವಿಲ್ಲದೆ ಗುರಿ ಮುಟ್ಟಲು ಸಾಧ್ಯ ಎಂದು ವಿವೇಕಾನಂದರ ಜೀವನದ ಘಟನೆಗಳ ಮೂಲಕ ವಿದ್ಯಾರ್ಥಿಗಳಿಗೆ ಹಿತನುಡಿಗಳನ್ನು ತಿಳಿಸಿದರು.

ವಿದ್ಯಾರ್ಥಿಗಳಿಗೆ 2024-25 ಸಾಲಿನಲ್ಲಿ ಕ್ರೀಡೆ ಮತ್ತು ಸಾಂಸ್ಕೃತಿಕ ವಿಭಾಗದಲ್ಲಿ ವಿಜೇತರಾದವರಿಗೆ ಮತ್ತು ಕಳೆದ ವರ್ಷ ತರಗತಿ ವಾರು ಹೆಚ್ಚು ಅಂಕಗಳನ್ನು ಗಳಿಸಿದವರಿಗೆ ಬಹುಮಾನ ವಿತರಿಸಲಾಯಿತು.
ವಿ. ಲಕ್ಷ್ಮೀ ಮತ್ತು ಸಂಗಡಿಗರು ಪ್ರಾರ್ಥಿಸಿ, ಸಿ.ಎ. ಲಿಖಿತ ಸ್ವಾಗತಿಸಿದರು. ವರ್ಷಾ ವಂದಿಸಿ, ಪ್ರಣತಿ ಮತ್ತು ಕು. ಹೇಮಶ್ರೀ ಕಾರ್ಯಕ್ರಮ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post