ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿಕಾರಿಪುರ: ಕಾಳೇನಹಳ್ಳಿ ಮಠದ ಮುಂದಿನ ಉತ್ತರಾಧಿಕಾರಿಯಾಗಿ ಘೋಷಣೆಯಾಗಿರುವ ಗೋಣಿಬೀಡು ಶೀಲ ಸಂಪಾದನ ಮಠದ ಶ್ರೀಗಳಿಗೆ ಈಗಾಗಲೇ ಬರೆಸಲಾಗಿರುವ ವಿಲ್ ಅನ್ನು ಸಂಸದ ಬಿ.ವೈ. ರಾಘವೇಂದ್ರ ಅವರು ಹಸ್ತಾಂತರಿಸಿದರು.
ಲಿಂಗೈಕ್ಯರಾದ ಕಾಳೇನಹಳ್ಳಿ ಶ್ರೀ ರೇವಣಸಿದ್ಧ ಮಹಾಸ್ವಾಮಿಗಳವರ ಅಂತಿಮ ಯಾತ್ರೆ ಹಾಗೂ ಶ್ರದ್ಧಾಂಜಲಿ ಸಭೆಯ ನಂತರ ವಿಲ್ ಅನ್ನು ಅವರು ಶ್ರೀಮಠದ ಉತ್ತರಾಧಿಕಾರಿಗಳಿಗೆ ಹಸ್ತಾಂತರ ಮಾಡಿದರು.
ಇದಕ್ಕೂ ಮುನ್ನ, ನಡೆದ ಸಭೆಯಲ್ಲಿ ಆನಂದಪುರ ಬೆಕ್ಕಿನಕಲ್ಮಠ ಜಗದ್ಗುರುಗಳವರು, ಶ್ರೀ ಹೊಸಪೇಟೆಯ ಜಗದ್ಗುರುಗಳವರು, ಶ್ರೀ ಗದುಗಿನ ತೋಂಟದಾರ್ಯ ಜಗದ್ಗುರುಗಳವರು, ಶ್ರೀ ಹುಬ್ಬಳ್ಳಿ ಮೂರು ಸಾವಿರ ಮಠದ ಜಗದ್ಗುರುಗಳವರು ನಾಡಿನ ಅನೇಕ ಹರಗುರು ಚರಮೂರ್ತಿಗಳು ಉಪಸ್ಥಿತಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post