ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
2025-26ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ #SecondPUCResult ಪ್ರಕಟಗೊಂಡಿದ್ದು, ತಾಲೂಕಿನ ಪ್ರತಿಷ್ಠಿತ ಕುಮದ್ವತಿ ಕಾಲೇಜಿಗೆ #KumadvatiCollege ಶೇ.100 ರಷ್ಟು ಫಲಿತಾಂಶ ಲಭಿಸಿದೆ.
ಗುರುವಾರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ವಿಜ್ಞಾನ ವಿಭಾಗದಲ್ಲಿ ಒಟ್ಟು 221 ವಿದ್ಯಾರ್ಥಿಗಳಲ್ಲಿ 84 ಡಿಸ್ಟಿಂಕ್ಷನ್, ಪ್ರಥಮ ಶ್ರೇಣಿಯಲ್ಲಿ 122 ಹಾಗೂ ಕು. ಎಚ್. ಶೃತಿ ವಿಜ್ಞಾನ ವಿಭಾಗದಲ್ಲಿ 588(98) ಅಂಕಗಳನ್ನು ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.
Also Read: ಪಿಯುಸಿ ರಿಸಲ್ಟ್ | ದಕ್ಷಿಣ ಕನ್ನಡಕ್ಕೆ ಹೆಮ್ಮೆ ತಂದ ಆಳ್ವಾಸ್ ಕಾಲೇಜಿನ ದಿಶಾ
ವಾಣಿಜ್ಯ ವಿಭಾಗದ 132 ವಿದ್ಯಾರ್ಥಿಗಳಲ್ಲಿ ಡಿಸ್ಟಿಂಕ್ಷನ್ 56, ಪ್ರಥಮ ಶ್ರೇಣಿಯಲ್ಲಿ 76 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಕು.ಎಂ. ವರ್ಷ 593 (98.8) ಅಂಕಗಳನ್ನು ಪಡೆದು ವಾಣಿಜ್ಯ ವಿಭಾಗದಲ್ಲಿ ತಾಲೂಕಿಗೆ ಹಾಗೂ ಕಾಲೇಜಿಗೆ ಪ್ರಥಮ ಸ್ಥಾನವನ್ನು ಗಳಿಸಿ ಕಾಲೇಜಿನ ಕೀರ್ತಿ ಹೆಚ್ಚಿಸಿದ ವಿದ್ಯಾರ್ಥಿಗಳಿಗೆ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಪ್ರಾಚಾರ್ಯರು, ಮತ್ತು ಸಿಬ್ಬಂದಿ ವರ್ಗದವರು ಅಭಿನಂದನೆ ತಿಳಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.
ಸಾಧಕ ವಿದ್ಯಾರ್ಥಿಗಳಿವರು:
ವಿಜ್ಞಾನ ವಿಭಾಗ
ಎಚ್.ಎಸ್. ಶೃತಿ 588 (98%)
ಮೇಘನಾ 578(96.33%)
ಎಂ.ಸಿ. ಪ್ರದೀಪ್ 578 (96.33%,)
ಅಮಿತ್ 577(96.16%)
ವಾಣಿಜ್ಯ ವಿಭಾಗ
ಎಂ.ಸಿ. ವರ್ಷ 593 (98.83%)
ಟಿ.ಎನ್. ಭಾರ್ಗವಿ 590 (98.3%,)
ದಿವ್ಯಶ್ರೀ 584 (97.3%)
ಶಾಂತಾರಾಮ್ 580 (96.6%)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















