ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಭಾರತೀಯರಿಗೆ ತಮ್ಮ ದೇಶದ ಸ್ವಾತಂತ್ರ್ಯವನ್ನು ನೆನಪಿಸುವ ಮತ್ತು ಬ್ರಿಟಿಷ್ ಆಳ್ವಿಕೆಯಿಂದ ದೇಶವನ್ನು ಮುಕ್ತಗೊಳಿಸಲು ಹೋರಾಡಿದವರ ತ್ಯಾಗವನ್ನು ಸ್ಮರಿಸುವ ದಿನವೆ ಸ್ವಾತಂತ್ರ್ಯ ದಿನಾಚರಣೆ ಎಂದು ಪ್ರಾಚಾರ್ಯರಾದ ವಿಶ್ವನಾಥ ಪಿ ತಿಳಿಸಿದರು.
ನಗರದ ಭವಾನಿ ರಾವ್ ಕೇರಿಯ ಮೈತ್ರಿ ಪ್ರಾಥಮಿಕ ಮತ್ತು ಕುಮದ್ವತಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ 79ನೆಯ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ನೇರವೆರಿಸಿ ಮಾತನಾಡಿದರು.

ಪ್ರಭಾರಿ ಮುಖ್ಯ ಶಿಕ್ಷಕಪ್ರಶಾಂತ ಕುಬಸದ ಮಾತನಾಡಿ, ದೇಶಭಕ್ತಿ, ರಾಷ್ಟ್ರ ಪ್ರೇಮ ನಮ್ಮ ಜೀವನದ ಮೊದಲ ಆದ್ಯತೆಗಳಾಗಬೇಕು. ಸ್ವಾತಂತ್ರ್ಯ ಸಂಗ್ರಾಮದ ಒಂದೊಂದು ಕತೆಗಳನ್ನು ಕೇಳಿದಾಗಲೂ, ಒಂದೊಂದು ಕ್ಷಣವನ್ನು ನೆನಪಿಸಿಕೊಳ್ಳುವಾಗಲೂ ದೇಶ ಪ್ರೇಮದ ಕಿಚ್ಚು ನಮ್ಮಲ್ಲಿ ಅಧಿಕವಾಗುತ್ತಲೇ ಸಾಗುತ್ತದೆ. ಇದೇ ಕಾರಣಕ್ಕೆ ಆಗಸ್ಟ್ 15 ಎಂದರೆ ಎಲ್ಲರ ಬದುಕಿನಲ್ಲೂ ತನ್ನದೇ ಆದ ಮಹತ್ವದ ಸ್ಥಾನ ಪಡೆದಿದೆ. ನಮ್ಮ ದೇಶಕ್ಕಾಗಿ ಜೀವ ತೆತ್ತ ಅದೆಷ್ಟೋ ಕೆಚ್ಚೆದೆಯ ವೀರರ ತ್ಯಾಗ ಬಲಿದಾನವನ್ನು ವ್ಯರ್ಥವಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ನಮ್ಮ ದೇಶವನ್ನು ಕಟ್ಟಲು ಶ್ರಮಿಸಿದ ಪ್ರತಿಯೊಬ್ಬರು ಹಾಕಿಕೊಟ್ಟ ದೇಶಪ್ರೇಮ, ಪ್ರಾಮಾಣಿಕತೆಯ ಹಾದಿಯಲ್ಲಿ ಸಾಗುವ ಜತೆಗೆ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯುವುದು ಕೂಡಾ ಬಲು ಅಗತ್ಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರು, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಪಥಸಂಚಲನ ನಡೆಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post