ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಮನೋರೋಗ ಎಂಬುದು ನಾವೇ ನಿರ್ಮಿಸಿಕೊಳ್ಳುವ ಒಂದು ಮಾನಸಿಕ ಸ್ಥಿತಿಯಾಗಿದ್ದು, ದೈಹಿಕ, ಮಾನಸಿಕ ಮತ್ತು ಸಾಮಾಜಿಕವಾಗಿ ಒಬ್ಬ ವ್ಯಕ್ತಿ ಸದೃಢವಾಗಿರುವುದು ಎಂದರ್ಥ ಎಂದು ಮನೋರೋಗ ತಜ್ಞ ಡಾ. ಸಂಜಯ್ ಅಭಿಪ್ರಾಯಪಟ್ಟರು.
ಐಕ್ಯೂಎಸಿ ಸಂಯೋಜಿತ, ತಾಲೂಕು ಆರೋಗ್ಯ ಇಲಾಖೆ, ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗ, ಎನ್ ಎಸ್ ಎಸ್ ರೆಡ್ ರಿಬ್ಬನ್ ಕ್ಲಬ್ ಮತ್ತು ಯುವ ರೆಡ್ ಕ್ರಾಸ್ ತಾಲೂಕು ಘಟಕದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸ್ವಸ್ಥ ನಾರಿ ಸಶಕ್ತ ಪರಿವಾರ ಅಭಿಯಾನ ಎಂಬ ಸರ್ಕಾರ ಯೋಜನೆಯು ಸೆ.17 ರಿಂದ ಅ. 02ರವರೆಗೆ ನಡೆಯುತ್ತಿದ್ದು, ಇದರ ಅಂಗವಾಗಿ ಕ್ಷಣ ಮಹಾವಿದ್ಯಾಲಯದ ಅಡಿಯಲ್ಲಿ ವೈದ್ಯಕೀಯ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮನೋರೋಗ ಎಂಬುದು ನಾವೇ ನಿರ್ಮಿಸಿಕೊಳ್ಳುವ ಒಂದು ಮಾನಸಿಕ ಸ್ಥಿತಿ. ದೈಹಿಕ, ಮಾನಸಿಕ ಮತ್ತು ಸಾಮಾಜಿಕವಾಗಿ ಒಬ್ಬ ವ್ಯಕ್ತಿ ಸದೃಢವಾಗಿರುವುದು ಎಂದರ್ಥ. ಬೇರೆ ಎಲ್ಲ ರೋಗಗಳಿಗಿಂದ ಅತ್ಯಂತ ಪರಿಣಾಮಕಾರಿಯಾದ ರೋಗ, ಸಮಸ್ಯೆಗಳು ಬಂದಿವೆ ಎಂದು ಹೆದರದೇ ನಿಭಾಯಿಸುವ ಮಾನಸಿಕ ವಸ್ತು ಸ್ಥಿತಿ ಎಂದರು.

ಇಂತಹ ಮಾನಸಿಕ ಸ್ಥಿತಿಯನ್ನು ನಾವು ಕಂಡುಕೊಳ್ಳಬೇಕಾದ ಅಗತ್ಯತೆ ಇದೆ. ನಾವು ದಿನನಿತ್ಯ ಉತ್ತಮ ವ್ಯಾಯಾಮ, ಪ್ರತಿ ದಿನ 30ನಿಮಿಷಗಳ ವಾಕ್, ಧನಾತ್ಮಕ ಮನೋಭಾವ, ಉತ್ತಮ ಆಹಾರ ಸೇವನೆ, ಬಿ12, ಹಾಗೆನೇ ಇಂದು ಸರ್ಕಾರಗಳು ಮಕ್ಕಳಲ್ಲಿ ಇಂತಹ ಕೊರತೆಗಳು ಆಗಬಾರದು ಎಂದು ಶಾಲೆಗಳಲ್ಲಿ ನೀಡುತ್ತಾ ಬರುವುದು ಶಿಕ್ಷಕರಾದವರು ಪಾಲಿಸಬೇಕೆಂದು ಆಗ ಉತ್ತಮ ಸ್ವಾಸ್ಥ್ಯ ಸಮಾಜ ನಿರ್ಮಾಣವನ್ನು ಕಂಡುಕೊಳ್ಳೋಣ ಎಂದು ಹೇಳಿದರು.
ತಾಳ್ಮೆ, ಸಮಾಧಾನ, ನಗುವಿನಿಂದಿ ಎಲ್ಲರೊಂದಿಗೆ ಬೆರೆತು ಸಾಗಬೇಕು, ಡಯಾಬಿಟಿಸ್, ಬಿಪಿಯಂತಹ ರೋಗಗಳಿಂದ ಮುಕ್ತರಾಗೋಣ, ದೇಶದ ಭದ್ರತೆಯಲ್ಲಿ ಶಿಕ್ಷಕರ ಜವಾಬ್ದಾರಿ ಇದೆ ಅದರಂತೆ ನೈತಿಕತೆಯಿಂದಲೇ ಮಾರ್ಗದರ್ಶನ ನೀಡುವಂತಾಗಬೇಕು. ಆದ್ದರಿಂದ, ನಾವು ನೀವೇಲ್ಲರೂ ನಮ್ಮ ಜವಾಬ್ದಾರಿಯಾಗಿ ನಡೆಯೋಣ ಉತ್ತಮ ಸಮಾಜವನ್ನು ಸೃಷ್ಟಿಯಾಗಲು ನಾವು ಕೈ ಜೋಡಿಸೋಣ ಎಂದು ಅಭಿಪ್ರಾಯಪಟ್ಟರು.
ಶಿಕಾರಿಪುರ ಸಾರ್ವಜನಿಕ ಆಸ್ಪತ್ರೆ ಮೆಡಿಕಲ್ ಆಫೀಸರ್ ಡಾ.ವಿನುತಾ, ಎನ್’ಸಿಡಿ ಆಫೀಸರ್ ಹರೀಶ್, ಕೌನ್ಸಿಲರ್ ಯುವರಾಜ್, ಐಸಿಟಿಸಿ ಕೌನ್ಸಲರ್ ಚಂದ್ರಶೇಖರ್, ಶ್ರೀಮತಿ ಕೀರ್ತಿ, ಕುಮಾರ್ ಟಿಬಿಬಿಎಚ್’ವಿ ಶ್ರೀತಾಜ್ ಪೀರ್, ಸೀನಿಯರ್ ಹೆಲ್ತ್ ಆಫೀಸರ್, ಪ್ರದೀಪ್, ಜೂನಿಯರ್ ಹೆಲ್ತ್ ಆಫೀಸರ್, ಟಿಎಚ್’ಸಿಇ ಶೀಲಾ, ಗೀತಾ, ಚೈತ್ರಾ, ಉಪಸ್ಥಿತರಿದ್ದು ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಮೂಡಿಬಂದಿತು.
ರಾಷ್ಟ್ರೀಯ ಸ್ವಯಂ ಸೇವಾ ಯೋಜನೆಯ ಸಂಯೋಜನಾಧಿಕಾರಿಗಳಾದ ಎನ್.ಜಿ. ರವಿಕುಮಾರ್, ಶಿಕ್ಷಣ ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ವರ್ಗದವರು ಹಾಗೂ ದ್ವಿತೀಯ ಮತ್ತು ಚತುರ್ಥ ಸೆಮಿಸ್ಟರ್ ಪ್ರಶಿಕ್ಷಣಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಯಶಸ್ವಿಯಾಗಿ ಮೂಡಿಬಂದಿತು.
ಪ್ರಶಿಕ್ಷಣಾರ್ಥಿಗಳಾದ ಶೃತಿ ಮತ್ತು ಸಂಗಡಿಗರು ಪ್ರಾರ್ಥಿಸಿ, ಪಿ. ಸಂಗೀತ ಸ್ವಾಗತಿಸಿದರು. ಎಂ. ಭಾಗ್ಯಶ್ರೀ ವಂದನಾರ್ಪಣೆ ಮಾಡಿ, ಸವಿತಾ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news























Discussion about this post