ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಶಿಕಾರಿಪುರ ಅನೇಕ ಶಿವ ಶರಣರು ಹುಟ್ಟಿದ ಪುಣ್ಯ ಭೂಮಿ. ಕೆಳದಿ ಅರಸರ ಸೊಸೆ ರಾಣಿ ಚನ್ನಮ್ಮ ಊರು ಕೋಟಿಪುರ, ಅಧಿಕೃತವಾಗಿ ಕನ್ನಡ ಮೊದಲ ಶಾಸನವಾಗಿ ದಾಖಲಾಗಬೇಕಾದ ಶಾಸನ ತಾಳಗುಂದದ ‘ಸಿಂಹ ಕಟಾoಜನ’ ಲಭಿಸಿದೆ, ಜೊತೆಗೆ ಸಾಹಿತ್ಯಕವಾಗಿ ರಾಜಕೀಯವಾಗಿ ಅನೇಕ ಐತಿಹಾಸಿಕ ಸಾಧನೆಯನ್ನು ಮಾಡಿದ ಕ್ಷೇತ್ರ ನಮ್ಮ ಶಿಕಾರಿಪುರ ಎಂದು ಸಂಸದ ರಾಘವೇಂದ್ರ MP Raghavendra ತಿಳಿಸಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ, ಜಿಲ್ಲಾ ಇತಿಹಾಸ ವೇದಿಕೆ ಶಿವಮೊಗ್ಗ, ತಾಲೂಕು ಶಾಖೆ ಶಿಕಾರಿಪುರ ವತಿಯಿಂದ ನಡೆದ ಇತಿಹಾಸ ಕಾರ್ಯಾಗಾರ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಭಾರತ ಹಾವಾಡಿಗರ ದೇಶ. ಮಾಟ ಮಂತ್ರ ಮಾಡುವ ದೇಶ ಎಂದು ತಪ್ಪು ಚಿತ್ರಣ ನಿರ್ಮಾಣ ಮಾಡಲಾಗಿತ್ತು, ಆದರೆ ನಿಜವಾದ ಇತಿಹಾಸ ತಿಳಿದರೆ ಅವರ ಇತಿಹಾಸ ಬುಡಮೇಲೂ ಆಗುವ ಭಯದಿಂದ ಕೆಲವು ಇತಿಹಾಸಕಾರರು ವೈಯುಕ್ತಿಕ ನಿಲುವುಗಳಿಂದ ಇತಿಹಾಸವನ್ನು ತಿರುಚುವ ಕೆಲಸ ಮಾಡಿದ್ದಾರೆ. ಆದರೆ ಈಗ ಅಂತಹ ತಿರುಚಿದ ಇತಿಹಾಸವನ್ನು ಸರಿಬಪಡಿಸುವ
ಕೆಲಸ ಈಗ ಆಗುತ್ತಿದೆ ಎನ್ನುವುದು ಸಮಾಧಾನದ ಸಂಗತಿ. ಕೆಲವು ಇತಿಹಾಸಕಾರರು ಅಧಿಕಾರದ ಆಸೆಗೆ, ಪ್ರಶಸ್ತಿಯ ಆಸೆಗೆ
ನೈಜ ಇತಿಹಾಸವನ್ನು ಮರೆಮಾಚಿದ್ದಾರೆ ಎಂದರು.
Also read: ಕುದಿಯುತ್ತಿದ್ದ ಸಾಂಬಾರ್ ಪಾತ್ರೆಯಲ್ಲಿ ಬಿದ್ದು ಬಾಲಕ ಸಾವು
ಕಾರ್ಯಕ್ರಮದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕೃಷ್ಣಪ್ಪ, ಕಾರ್ಯನಿರ್ವಾಹಣಾಧಿಕಾರಿ ಪರಮೇಶ್, ಜಿಲ್ಲಾ ಇತಿಹಾಸ ವೇದಿಕೆ ಅಧ್ಯಕ್ಷ ಹೆಚ್.ವಿ. ಶುಭಕರ, ಹೆಚ್.ಎ. ತಿಮ್ಮರಾಜು, ಎಂ. ವಿ. ಹಾಲಪ್ಪ ,ಶಿಕಾರಿಪುರದ ತಾಲ್ಲೂಕು ಇತಿಹಾಸ ವೇದಿಕೆಯ ಅಧ್ಯಕ್ಷ ಶಿವಮೂರ್ತಿ ಹಾಗೂ ಉಪನ್ಯಾಸಕರು, ಇತಿಹಾಸ ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post