ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ರಕ್ತವು ಮಾನವಲ್ಲಿರುವ ಅತ್ಯಂತ ವಿಶೇಷ ದ್ರವ ಇದು ಸರಿಯಾಗಿ ತನ್ನ ಚಲನಕ್ರಿಯೆಯ ಕಾರ್ಯವನ್ನು ಮಾಡದಿದ್ದರೇ ಮಾನವನು ತನ್ನ ಕ್ರಿಯಾಶೀಲ ಕಾರ್ಯಗಳನ್ನು ನಡೆಸಲು ಸಾಧ್ಯವಾಗುವುದಿಲ್ಲ. ನಿಯಮಿತ ರಕ್ತದಾನದಿಂದ ದೇಹದ ತೂಕ ನಿರ್ವಹಣೆಗೆ ಸಹಕಾರಿ ಎಂದು ಶಿವಮೊಗ್ಗದ ರೆಡ್‌ಕ್ರಾಸ್ ಸಂಜೀವಿನಿ ರಕ್ತಕೇಂದ್ರ ಹಿರಿಯ ಅನುಷ್ಠಾನ ಅಧಿಕಾರಿ ಧರಣೇಂದ್ರ ತಿಳಿಸಿದರು.
ಮಾಜಿ ಮುಖ್ಯಮಂತ್ರಿಗಳು ಹಾಗೂ ನಾಡು ಕಂಡ ಧೀಮಂತ ನಾಯಕರಾದ ಯಡಿಯೂರಪ್ಪರವರ #B S Yadiyurappa 82ನೇ ಹುಟ್ಟುಹಬ್ಬ ನಿಮಿತ್ತ ನಗರದ ಮಂಗಳ ಭವನದಲ್ಲಿ ಶ್ರೀಮತಿ ಗಂಗಮ್ಮ ವೀರಭದ್ರಪ್ಪ ಸ್ಮಾರಕ ಟ್ರಸ್ಟ್, ಶಿಕಾರಿಪುರ, ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ(ರಿ), ಶಿಕಾರಿಪುರ ಮತ್ತು ರೆಡ್‌ಕ್ರಾಸ್ ಸಂಜೀವಿನಿ ರಕ್ತನಿಧಿ, ಶಿವಮೊಗ್ಗ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಬೃಹತ್ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಕ್ತವನ್ನು ನೀಡುವುದರಿಂದ ತೂಕವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಪ್ರತಿ ರಕ್ತದಾನವು ಸರಿಸುಮಾರು 650 ಕ್ಯಾಲೊರಿಗಳನ್ನು ಸುಡುತ್ತದೆ. ಆರೋಗ್ಯಕರ ಜೀವನಶೈಲಿಗೆ ಕೊಡುಗೆ ನೀಡುತ್ತದೆ. ರಕ್ತದ ಹರಿವನ್ನು ಸುಧಾರಿಸುತ್ತದೆ. ನಿಯಮಿತ ರಕ್ತದಾನವು ರಕ್ತದ ದಪ್ಪವನ್ನು ಕಡಿಮೆ ಮಾಡುತ್ತದೆ, ರಕ್ತಪರಿಚಲನೆಯನ್ನು ಹೆಚ್ಚಿಸುತ್ತದೆ ಮತ್ತು ಮುಂದಿನ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ತಿಳಿಸಿದರು.
ರಕ್ತದಾನವು ಒಂದು ಆರೋಗ್ಯಕರ ಪ್ರಕ್ರಿಯೆಯಾಗಿದ್ದು, ಅದು ದಾನಿ ಮತ್ತು ಸ್ವೀಕರಿಸುವವರಿಗೆ ಬಹು ಪ್ರಯೋಜನಗಳನ್ನು ನೀಡುವುದಲ್ಲದೇ, ತಪಾಸಣೆಗಳನ್ನು ಸುಗಮಗೊಳಿಸುತ್ತದೆ. ರಕ್ತದಾನ ಮಾಡುವ ಮೊದಲು ಅವರು ಆಗಾಗ್ಗೆ ಆರೋಗ್ಯ ತಪಾಸಣೆಗೆ ಒಳಗಾಗಬೇಕಾಗುತ್ತದೆ, ಇದು ಅವರ ರಕ್ತದೊತ್ತಡ, ಹಿಮೋಗ್ಲೋಬಿನ್ ಮಟ್ಟಗಳು ಮತ್ತು ಸಾಮಾನ್ಯ ಆರೋಗ್ಯದ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ. ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ ಎಂದರು.
ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ. ಆಗಾಗ್ಗೆ ರಕ್ತದಾನ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗುತ್ತದೆ, ಹೃದಯ ಕಾಯಿಲೆಗಳು ಮತ್ತು ಪಾರ್ಶ್ವವಾಯುಗಳ ಅಪಾಯ ಕಡಿಮೆಯಾಗುತ್ತದೆ. ಮಾನಸಿಕ ಯೋಗಕ್ಷೇಮವನ್ನು ಹೆಚ್ಚಿಸುತ್ತದೆ. ದಾನಿಗಳು ಸಾಮಾನ್ಯವಾಗಿ ಸಾಧನೆ ಮತ್ತು ಸಂತೋಷದ ಭಾವನೆಯನ್ನು ಹೊಂದಿರುತ್ತಾರೆ, ಏಕೆಂದರೆ ಅವರು ಜೀವಗಳನ್ನು ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಜೀವಗಳನ್ನು ಉಳಿಸುತ್ತದೆ, ದಾನ ಮಾಡುವ ಪ್ರತಿ ಹನಿ ರಕ್ತವು ಶಸ್ತçಚಿಕಿತ್ಸೆಗಳು, ಅಪಘಾತಗಳು ಅಥವಾ ತೀವ್ರತರವಾದ ಪರಿಸ್ಥಿತಿಗಳಲ್ಲಿ ಅಗತ್ಯವಾದ ಸಹಾಯವನ್ನು ನೀಡುವ ಮೂಲಕ ಮೂರು ಜೀವಗಳನ್ನು ಉಳಿಸಬಹುದು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶಿವಕುಮಾರ್, ಪ್ರಾಚಾರ್ಯರು ಹಾಗೂ ಸಂಸ್ಥೆಯ ಆಡಳಿತ ಪ್ರತಿನಿಧಿಗಳಾದ ಡಾ. ಶಿವಕುಮಾರ್ ಜಿ ಎಸ್. , ಕುಬೇರಪ್ಪ ಕೆ, ಆಡಳಿತ ಸಮನ್ವಯ ಅಧಿಕಾರಿ, ಮಂಜುನಾಥ್ ಕಾರ್ಯದರ್ಶಿಗಳು, ರೆಡ್‌ಕ್ರಾಸ್ ಸಂಜೀವಿನಿ ರಕ್ತಕೇಂದ್ರ, ಶಿವಮೊಗ್ಗ. ಡಾ. ವೀರೇಂದ್ರ ಗೌಡ, ವಿದ್ಯಾಶಂಕರ್ ಕೆ ಎಸ್, ಸಿದ್ಧೇಶ್ವರ್, ಡಾ. ರವೀಂದ್ರ, ಪ್ರಶಾಂತ್ ಕುಬಸದ್ ಹೀಗ ವಿವಿಧ ವಿಭಾಗದ ಪ್ರಾಚಾರ್ಯರು, ಸಿಬ್ಬಂಧಿ ವರ್ಗದವರು ಉಪಸ್ಥಿತರಿದ್ದು ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.
ಇಂದಿನ ರಕ್ತದಾನ ಶಿಬಿರದಲ್ಲಿ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ, ಶಿಕಾರಿಪುರ, ಕುಮದ್ವತಿ ಪ್ರಥಮ ದರ್ಜೆ ಕಾಲೇಜು, ಶಿಕಾರಿಪು ಹಾಗೂ ವಿವಿಧ ಅಂಗ ಸಂಸ್ಥೆಗಳ ಪ್ರಾಚಾರ್ಯರು, ಸಹಾಯಕ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶಿಬಿರದಲ್ಲಿ 65 ಯೂನಿಟ್ ಕ್ಕಿಂತ ಹೆಚ್ಚು ರಕ್ತವನ್ನು ಪಡೆಯಲಾಯಿತು.
ಕಾರ್ಯಕ್ರಮದಲ್ಲಿ ಸ್ವಾಗತವನ್ನು ಡಾ.ರವಿ ಹೆಚ್., ಸಹಾಯಕ ಪ್ರಾಧ್ಯಾಪಕರು, ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ, ಶಿಕಾರಿಪುರ, ವಂದನಾರ್ಪಣೆಯನ್ನು ವಿಶ್ವನಾಥ್ ಪ್ರಾಚಾರ್ಯರು, ಮೈತ್ರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆ, ಶಿಕಾರಿಪುರ ಹಾಗೂ ಡಾ. ದೇವರಾಜ ವೈ., ಸಹಾಯಕ ಪ್ರಾಧ್ಯಾಪಕರು, ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ, ಶಿಕಾರಿಪುರ, ಇವರು ಕಾರ್ಯಕ್ರಮವನ್ನು ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post