ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಸಂವಿಧಾನದ ಮೂಲಕ ಕೋಟ್ಯಂತರ ಜನರಿಗೆ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಸದೃಢರಾಗಲು ಅವಕಾಶ ನೀಡಿದೆ ಕೀರ್ತಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಎಂದು ಕುಮದ್ವತಿ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ಎಂ. ವೀರೇಂದ್ರ ತಿಳಿಸಿದರು.
ಪಟ್ಟಣದ ಕುಮದ್ವತಿ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ಡಾ .ಬಾಬಾ ಸಾಹೇಬ್ ಅಂಬೇಡ್ಕರರ 135 ನೇ ಜಯಂತಿಯ ಆಚರಣೆಯಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅಧ್ಯಕ್ಷೀಯ ನುಡಿಗಳನ್ನಾಡಿದರು.
ಭಾರತದ ಸಂವಿಧಾನ ವಿಶಿಷ್ಟತೆಯಿಂದ ಕೂಡಿ ಬೃಹತ್ತಾದ ಸಂವಿಧಾನ ಲಿಖಿತ ರೂಪದಲ್ಲಿ ಜಾರಿಗೆ ಬಂದಿದೆ ಅದನ್ನು ಗೌರವಿಸುವುದು, ಅದರ ಆದರ್ಶ ತತ್ವಗಳನ್ನು ಪಾಲಿಸುವುದು ನಮ್ಮೆಲ್ಲರ ಜವಾಬ್ದಾರಿ ಏಕೆಂದರೆ ಒಂದು ಜಾತಿ ಧರ್ಮ ಪಂಗಡಕ್ಕೆ ಮೀಸಲಾಗದೆ ಸರ್ವರಿಗೂ ಸಮಾನವಾದ ಮುಕ್ತ ಅವಕಾಶವನ್ನು ನಮ್ಮ ಸಂವಿಧಾನ ನೀಡಿದೆ ಎಂದು ಎಂದು ಅವರು ಹೇಳಿದರು.
ಕನ್ನಡ ಉಪನ್ಯಾಸಕರ ಶ್ರೀಯುತ ಯೋಗರಾಜ್ ಕಾರ್ಯಕ್ರಮನ ಕುರಿತು ವಿಶೇಷ ಉಪನ್ಯಾಸ ನೀಡಿದರು. ನಂತರ ಶ್ರೀಯುತ ಶಿವರಾಜ್ ಸ್ವಾಗತಿಸಿ ಪ್ರತಿಜ್ಞಾ ವಿಧಿಯನ್ನು ಬೋಧಿಸಿ ನಿರೂಪಿಸಿದರು. ಶ್ರೀಯುತ ದೇವರಾಜ್ ವಂದಿಸಿದರು.
ವೇದಿಕೆಯಲ್ಲಿ ಪ್ರಾಚಾರ್ಯ ಡಾ.ಎಂ. ವೀರೇಂದ್ರ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಶ್ರೀಯುತ ಪರ್ವಿಜ್ ಅಹಮದ್, ಚಂದ್ರಶೇಖರ್ ಹಾಗೂ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿಯವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post