ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಭಾರತದಲ್ಲಿ ಆಚರಿಸುವ ಅನೇಕ ಹಬ್ಬಗಳಲ್ಲಿ ಸಂಕ್ರಾಂತಿಗೆ ತನ್ನದೇ ಆದ ವಿಶೇಷತೆ ಮತ್ತು ಆಧ್ಯಾತ್ಮಿಕ ಹಿನ್ನೆಲೆ ಹೊಂದಿದ್ದು, ಇದು ಸುಗ್ಗಿ ಸಂಭ್ರಮದ ಹಬ್ಬ, ಅರ್ಥಾತ್ ಕೃಷಿಯ ಸಂಭ್ರಮಾಚಣೆಯ ಹಬ್ಬವಾಗಿದೆ ಎಂದು ಬೇಗೂರ ಸಮೂಹ ಸಂಪನ್ಮೂಲ ವ್ಯಕ್ತಿ ಹೆಚ್.ಪಿ ಪರಮೇಶ್ವರಪ್ಪ ತಿಳಿಸಿದರು.
ಭವಾನಿ ರಾವ್ ಕೇರಿಯ ಮೈತ್ರಿ ಪ್ರಾಥಮಿಕ ಮತ್ತು ಕುಮದ್ವತಿ ಪ್ರೌಢಶಾಲೆ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದ ಜಯಂತಿ ಮತ್ತು ಸಂಕ್ರಾಂತಿ ಸುಗ್ಗಿ ಹಬ್ಬದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಸಂಕ್ರಾಂತಿ ಪ್ರಕೃತಿಯ ಮನ್ವಂತರ ಪ್ರತಿನಿಧಿಸುವ ಹಬ್ಬ ಕೂಡ. ಸೂರ್ಯ ಕರ್ಕಾಟಕ ರಾಶಿಯಿಂದ ಉತ್ತರಾಯಣದ ಮಕರ ರಾಶಿಯತ್ತ ತನ್ನ ದಿಕ್ಕು ಬದಲಿಸುವ ಪರಿವರ್ತನಾ ಕಾಲ. ಸಂಕ್ರಾಂತಿಯ ನಂತರ ಹಗಲಿನ ಕಾಲಾವಧಿ ಹೆಚ್ಚುತ್ತದೆ. ಶೂನ್ಯ ಮಾಸದಲ್ಲಿ, ಕೊರೆವ ಚಳಿಯಲ್ಲಿ ಜಡವಾಗಿದ್ದ ಮರಗಿಡಗಳಲ್ಲಿ ಎಲೆ ಉದುರಿ, ಹೊಸ ಚಿಗುರು ಬರಲಾರಂಭಿಸುತ್ತದೆ. ಶಿಶಿರ ಖುತುವಿನ ಆರಂಭ ಕೂಡ ಆಗಿದೆ ಎಂದು ವಿವರಿಸಿದರು.
ಮೈತ್ರಿ ಶಾಲೆಯು ವಿದ್ಯಾರ್ಥಿಗಳಲ್ಲಿ ಉತ್ತಮ ಸಂಸ್ಕಾರ ನೀಡುತ್ತಿದೆ. ಇಲ್ಲಿ ನಮ್ಮ ದೇಶದ ಮತ್ತು ನಾಡಿನ ಸೊಬಗು, ಆಚಾರ ವಿಚಾರಗಳನ್ನು ತುಂಬಾ ಅಚ್ಚುಕಟ್ಟಾಗಿ ಉಳಿಸಿಕೊಂಡು ಬರುತ್ತಿದೆ. ನಾನು ಕೊಡ ಈ ಶಾಲೆಯ ಶಿಕ್ಷಕನಾಗಿ ಸೇವೆ ಸಲ್ಲಿಸಿದ ನೆನಪುಗಳು ಹಾಗೆ ಶಾಶ್ವತವಾಗಿ ಉಳಿದಿವೆ ಎಂದು ತಮ್ಮ ನೆನಪುಗಳನ್ನು ಸ್ಮರಿಸಿಕೊಂಡರು.
ಸಿದ್ದಲಿಂಗೆಶ್ವರ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಜಬೀವುಲ್ಲಾ ರವರು ವಿವೇಕಾನಂದರ ಅಧ್ಯಯನಶೀಲತೆ ಕ್ರಮಬದ್ಧ ಮತ್ತು ಅರ್ಥಗರ್ಭಿತವಾ ಗಿತ್ತು.ಜೀವ ಮತ್ತು ಜೀವನದ ಮಹತ್ವವನ್ನು ವಿವೇಕಾನಂದರು ತಿಳಿಸಿದ್ದಾರೆ ಅದನ್ನು ಅರಿತು ನಾವುಗಳು ಜೀವನ ಸಾಗಿಸಬೇಕಾಗಿದೆ.ಸುಗ್ಗಿ ಹಬ್ಬವನ್ನು ಕಣದ ಹಬ್ಬ ಎಂದು ಆಚರಿಸಲಾಗುತ್ತದೆ ಎಂದರು.
ರೈತರು ತಾವು ಬೆಳೆದ ಬೆಳೆಗಳನ್ನು ಮೂರು ರಾಶಿ ಮಾಡಿ ಕಣದಲ್ಲಿ ಪೂಜೆ ಮಾಡುತ್ತಿದ್ದರು. ಅದರಲ್ಲಿ ಒಂದು ರಾಶಿಯನ್ನು ತಮ್ಮ ಮನೆಗೆ, ಇನ್ನೂಂದನ್ನು ದಾನವಾಗಿ ಕೊಟ್ಟರೆ, ಇನ್ನೂಂದನ್ನು ಮನೆಯ ಸೇವಕರಿಗೆ ದಾನ ಮಾಡುತ್ತಿದ್ದರು. ಆದರೆ ಈಗ ತಾಂತ್ರಿಕವಾಗಿ ಮುಂದುವರಿದ ನಾವು ಗದ್ದೆಯಿಂದ ಮಾರುಕಟ್ಟೆಗೆ ಬೆಳೆಗಳನ್ನು ಸಾಗಿಸುತ್ತಿದ್ದೇವೆ. ಇದರಿಂದ ಈಗಿನ ಜನತೆಗೆ ಸುಗ್ಗಿ ಹಬ್ಬ ಕಣದ ಹಬ್ಬದ ಪರಿಚಯವಿಲ್ಲದ ಆಗಿದೆ. ಇಂದು ಈ ಶಾಲೆಯಲ್ಲಿ ತುಂಬಾ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ, ಇದರ ಮೂಲಕ ಹಬ್ಬಗಳ ಆಚರಣೆಯ ಹಿನ್ನೆಲೆ ಮತ್ತು ಮಹತ್ವವನ್ನು ತಿಳಿಸಿ ಮುಂದುವರಿಸಿಕೊಂಡು ಹೋಗಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಪ್ರಾಚಾರ್ಯರಾದ ವಿಶ್ವನಾಥರವರು ನಾವು ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಹುಟ್ಟು ಹಾಕಬೇಕಾಗಿದೆ. ನಮ್ಮ ಶಾಲೆಯು ವಿದ್ಯಾ ಭಾರತಿ ಅಧೀನದಲ್ಲಿ ನಡೆಯುತ್ತಿದೆ.ಭಾರತೀಯ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗುವುದರ ಜೊತೆಗೆ ಈಗೀಗ ಯುವ ಜನತೆಗೆ ಸಂಸ್ಕಾರಯುತ ಶಿಕ್ಷಣ ನೀಡುವುದು ಸಹ ಅತೀ ಅವಶ್ಯಕವಾಗಿದೆ. ನಾವು ಭಾರತವನ್ನು ವಿಶ್ವ ಗುರು ಎಂದು ಕರೆಯುತ್ತಿದ್ದ ಏನೆ ಇದಕ್ಕೆ ಕಾರಣರಾದವರು ಸ್ವಾಮಿ ವಿವೇಕಾನಂದರು.ನಾವು ಅವರ ಆದರ್ಶ ತತ್ವಗಳನ್ನು ಸ್ವೀಕರಿಸಿಕೊಂಡು ಅವರ ಹಾಗೆ ಜೀವನ ಸಾಗಿಸಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಸುಗ್ಗಿ ಹಬ್ಬದ ನೃತ್ಯಗಳು , ವಿವೇಕಾನಂದರ ನುಡಿಮುತ್ತು ತಿಳಿಸುವ ಕಾರ್ಯಕ್ರಮಗಳು ನಡೆದವು.
ಕಾರ್ಯಕ್ರಮದಲ್ಲಿ ಸಂಸ್ಥೆಯ ವಿವಿಧ ಅಂಗ ಸಂಸ್ಥೆಗಳ ಪ್ರಾಚಾರ್ಯರಾದ ಶ್ರೀ ವಿರೇಂದ್ರ.ಎಂ, ಶ್ರೀ ಸಿದ್ದೇಶ್ವರ ರವರು ಮೈತ್ರಿ ಮಾತೃ ಮಂಡಳಿಯ ಸದಸ್ಯರಾದ ಶ್ರೀಮತಿ ಅಪರ್ಣಾ ಗುರುಮೂರ್ತಿ ಮತ್ತು ಪ್ರಭಾರಿ ಮುಖ್ಯ ಶಿಕ್ಷಕರಾದ ಶ್ರೀ ಪ್ರಶಾಂತ ಕುಬಸದ ,ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು,ಮಾತೃ ಮಂಡಳಿಯ ಮಾತೆಯರು ಉಪಸ್ಥಿತರಿದ್ದರು.
ಕು.ಕುಶಾಲ್ ಮತ್ತು ಸಂಗಡಿಗರು ಪ್ರಾರ್ಥಿಸಿ,ಕು.ಸಹನಾ ಎಲ್.ಬಿ ಸ್ವಾಗತಿಸಿ,ಕು ಮೋಹಿತ್ ವಂದಿಸಿ,ಕು ಆರಾದ್ಯ.ಆರ್ ಕಾರ್ಯಕ್ರಮವನ್ನು ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post