No Result
View All Result
Bengaluru Sparsh Hospital Hennur Completes One Year
English Articles

When Patients Travel for Hope: How Bengaluru Is Becoming a Destination for Complex Transplant Care

by kalpa News
September 4, 2026
0

Kalpa Media House  |  Bengaluru  | Patients from different parts of India and abroad are increasingly travelling to Bengaluru in...

Read moreDetails
Railway Board hubballi-rameswaram-train-extended-9-trip

Railway Board Hubballi–Rameswaram Special Express Services Extended

September 3, 2026
Indian Railways Nepalganj Bahraich Line Upgrade 730 Crore

Indian Railways Boosts Nepal Border Connectivity With ₹730 Crore Bahraich Rail Project

September 1, 2026
RPF Mysuru Railway Theft Lost Mobile Recovered copy

RPF Mysuru Cracks Railway Property Theft, Recovers Passenger’s Lost Mobile Phone

August 31, 2026
Shikaripura National Sports Day In Kumadvathi Central School copy

KRCS Shikaripura Celebrates National Sports Day with Fervour

August 30, 2026
  • Advertise With Us
  • Grievances
  • About Us
  • Contact Us
Monday, September 7, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Small Bytes

ಶಿಕಾರಿಪುರ | ಮಹಿಳಾ ಸಬಲೀಕರಣಕ್ಕಾಗಿ ಸಪ್ತಶಕ್ತಿ ಸಂಗಮ | ಸಾವಿತ್ರಿ ಹೆಗಡೆ ಅಭಿಮತ

kalpa News by kalpa News
November 24, 2025
in Small Bytes, ಶಿಕಾರಿಪುರ
0
ಶಿಕಾರಿಪುರ | ಮಹಿಳಾ ಸಬಲೀಕರಣಕ್ಕಾಗಿ ಸಪ್ತಶಕ್ತಿ ಸಂಗಮ | ಸಾವಿತ್ರಿ ಹೆಗಡೆ ಅಭಿಮತ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಶಿಕಾರಿಪುರ  |

ಸಪ್ತ ಶಕ್ತಿ ಸಂಗಮ ಎಂಬುದು ಮಹಿಳೆಯರ ಸಬಲೀಕರಣವನ್ನು ಪ್ರೋತ್ಸಾಹಿಸುವ ಒಂದು ಕಾರ್ಯಕ್ರಮವಾಗಿದೆ. ಇದು ಸ್ತ್ರೀ ಶಕ್ತಿ, #WomenPower ನಾಯಕತ್ವ, ಸಾಂಸ್ಕೃತಿಕ ಜಾಗೃತಿ, ಮತ್ತು ಸಾಮಾಜಿಕ ಜವಾಬ್ದಾರಿಗಳಂತಹ ಏಳು ವಿಭಿನ್ನ ಶಕ್ತಿಗಳನ್ನು ಒಟ್ಟುಗೂಡಿಸಿ ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ಮೂಡಿಸಲು ಪ್ರಯತ್ನಿಸುತ್ತದೆ ಎಂದು ಶಾಲಾ ಸಂಚಾಲಕ ಸಮಿತಿ ಸದಸ್ಯರಾದ ಸಾವಿತ್ರಿ ಜಿ. ಹೆಗಡೆ ತಿಳಿಸಿದರು.

ನಗರದ ಭವಾನಿ ರಾವ್ ಕೇರಿಯ ಮೈತ್ರಿ ಪ್ರಾಥಮಿಕ ಶಾಲೆ ಮತ್ತು ಕುಮದ್ವತಿ ಪ್ರೌಢಶಾಲೆಯಲ್ಲಿ #KumadatiHighSchool ವಿದ್ಯಾಭಾರತಿ ಕರ್ನಾಟಕ ಶಿವಮೊಗ್ಗ ಜಿಲ್ಲಾ ವತಿಯಿಂದ ಹಮ್ಮಿಕೊಂಡಿದ್ದ ಸಪ್ತ ಶಕ್ತಿ ಸಂಗಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ನಾವು ಪ್ರಯತ್ನ ಮಾಡಿದರೆ ಎಲ್ಲವೂ ಸಾಧ್ಯ. ಸ್ವ ಅಧ್ಯಾಯವನ್ನು ಬೆಳೆಸಿಕೊಂಡು,ತಮ್ಮ ಜ್ಞಾನವನ್ನು ವೃದ್ಧಿಸಿ, ಸಪ್ತಶಕ್ತಿಯ ಗುಣಗಳನ್ನು ಅರಿತುಕೊಂಡು ಮಕ್ಕಳನ್ನು ಬೆಳೆಸಿರಿ. ಸಂಘ ಶತಾಬ್ದಿಯ ಹಿನ್ನೆಲೆಯಲ್ಲಿ ಆಯೋಜಿಸಿದ ಸಪ್ತಶಕ್ತಿ ಸಂಗಮ ಇಲ್ಲಿ ಸಫಲವಾಗಿದೆ. ಹಾಗೆ ನಮ್ಮ ಮಾತೆಯರಲ್ಲಿ ಸಪ್ತಶಕ್ತಿಗಳು ಜಾಗೃತವಾಗಿ ಇದು ಸಮಾಜದ ಇತರ ಮಾತೆಯರಿಗೆ ಕೂಡ ಪ್ರೇರಣಾದಾಯಕವಾಗಿದೆ ಎಂದು ತಿಳಿಸಿದರು.ನಿವೃತ್ತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿ ನಿರ್ಮಲಾ ಪೈ ಮಾತನಾಡಿ, ಕುಟುಂಬ ಮತ್ತು ಪರಿಸರವು ಪರಸ್ಪರ ಆಳವಾಗಿ ಸಂಬಂಧಿಸಿವೆ. ಏಕೆಂದರೆ ಕುಟುಂಬವು ವ್ಯಕ್ತಿಯ ಮೊದಲ ಪರಿಸರವಾಗಿದ್ದು, ಅದು ಅವರ ಮಾನಸಿಕ, ದೈಹಿಕ ಮತ್ತು ಸಾಮಾಜಿಕ ಬೆಳವಣಿಗೆಯ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ ಎಂದರು.

ಕುಟುಂಬದ #Family ಬೆಂಬಲ, ಸಂಬಂಧಗಳು ಮತ್ತು ಒಟ್ಟಾರೆ ವಾತಾವರಣವು ವ್ಯಕ್ತಿಯ ಯೋಗಕ್ಷೇಮವನ್ನು ಹೆಚ್ಚಿಸುತ್ತದೆ ಅಥವಾ ಕಡಿಮೆ ಮಾಡುತ್ತದೆ. ಪ್ರತಿಯಾಗಿ, ವ್ಯಕ್ತಿಯ ಪರಿಸರವು ಕುಟುಂಬ ರಚನೆಯ ಮೇಲೆ ಪ್ರಭಾವ ಬೀರಬಹುದು ಎಂದು ಕಥೆಗಳನ್ನು ಹೇಳುವುದರ ಮೂಲಕ ಈಗಿನ ಕುಟುಂಬ ವ್ಯವಸ್ಥೆ ಬಗ್ಗೆ ತಿಳಿಸಿದರು.

ಮೈತ್ರಿ ಮಾತೃ ಮಂಡಳಿಯ ಸದಸ್ಯರಾದ ಅಪರ್ಣಾ ಗುರುಮೂರ್ತಿ ಮಾತನಾಡಿ, ಹೆಣ್ಣು ಸಂಸಾರದ ಕಣ್ಣಾಗಿ ಭಾರತದ ಅಭಿವೃದ್ಧಿಯನ್ನು ಹೇಗೆ ನಿರ್ವಹಿಸಬಹುದು. ಇಂದು ಜಾಗತಿಕ ಮಟ್ಟದಲ್ಲಿ ಮಹಿಳೆ ಒಂದು ರತ್ನವಾಗಿ ಹೊಳೆಯುತ್ತಿದ್ದಾಳೆ. ಎಷ್ಟರ ಮಟ್ಟಿಗೆ ಎಂದರೆ ಬರೀ ಪುರುಷರೇ ಅಧ್ಯಕ್ಷ ಗಾದಿ ಏರುತ್ತಿದ್ದ ದೇಶಗಳಲ್ಲಿ ನಾವೂ ಏನು ಕಮ್ಮಿ ಇಲ್ಲ ಎಂದರು.  
ಶಾಲಾ ಸಹ ಶಿಕ್ಷಕಿ ವಿಜಯಲಕ್ಷ್ಮಿ ಪ್ರಾಸ್ತಾವಿಕ ಮಾತನಾಡಿದರು. ಶಾಲಾ ಶಿಕ್ಷಕಿಯರು ಸಾಮೂಹಿಕ ಗೀತೆಗಳನ್ನು ಹಾಡಿದರು.

ವಿದ್ಯಾರ್ಥಿಗಳು ವಿವಿಧ ಧೀರ ನಾರಿಯರಾದ ರಾಣಿ ಅಬ್ಬಕ್ಕದೇವಿ, ಒನಕೆ ಓಬವ್ವ, ಅಕ್ಕಮಹಾದೇವಿ, ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಸಾವಿತ್ರಿ ಬಾ ಫುಲೆ ಅವರ ವೇಷಭೂಷಣಗಳ ಜತೆಗೆ ಸಂದೇಶಗಳನ್ನು ನುಡಿದರು. ವಿಶೇಷ ಸಾಧನೆ ಮಾಡಿದ ಮಾತೆಯರಾದ ಕಾಂಚನಾ ಕುಮಾರ ಮತ್ತು ಸರೋಜ ಲೋಕೇಶಪ್ಪ ಅವರನ್ನು ಸನ್ಮಾನಿಸಲಾಯಿತು.

ವಿದ್ಯಾಭಾರತಿ ಕರ್ನಾಟಕ ಶಿವಮೊಗ್ಗ ಜಿಲ್ಲೆಯ ಸಹ ಕಾರ್ಯದರ್ಶಿ ಗೋಪಾಲಕೃಷ್ಣ, ಶಾಲಾ ಸಂಚಾಲನ ಸಮಿತಿ ಸದಸ್ಯರಾದ ಲೀಲಾವತಿ, ಶಾಲಾ ಪ್ರಾಚಾರ್ಯರಾದ ಪಿ. ವಿಶ್ವನಾಥ, ಪ್ರಭಾರಿ ಮುಖ್ಯ ಶಿಕ್ಷಕರಾದ ಪ್ರಶಾಂತ ಕುಬಸದ, ಶಾಲಾ ಶಿಕ್ಷಕರು, ಮಹಿಳಾ ಪೋಷಕರು ಉಪಸ್ಥಿತರಿದ್ದರು.

ಚಂದ್ರಕಲಾ ಪ್ರಾರ್ಥಿಸಿ, ವಿಕ್ಟೋರಿಯಾ ಸ್ವಾಗತಿಸಿದರು. ಕೆ.ಸಿ. ಲಕ್ಷ್ಮಿ ವಂದಿಸಿ, ಲಲಿತಾ ಕಾರ್ಯಕ್ರಮ ನಿರೂಪಿಸಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

https://kalpa.news/wp-content/uploads/2025/09/Vedic-Maths-New.mp4
https://kalpa.news/wp-content/uploads/2024/04/VID-20240426-WA0008.mp4

Tags: Female powerKannada News WebsiteKumadvati High SchoolLatest News KannadaShikaripuraShimogaShivamoggaWomen's empowermentಮಹಿಳೆಯರ ಸಬಲೀಕರಣಶಿಕಾರಿಪುರಸಪ್ತ ಶಕ್ತಿ ಸಂಗಮಸ್ತ್ರೀ ಶಕ್ತಿ
Share199Tweet124Send
Aniruddha Vasishta S R

Aniruddha Vasishta S R

Editor-in-Chief

Previous Post

ಧರ್ಮಸ್ಥಳ ಬುರುಡೆ ಪ್ರಕರಣ | ಶಿವಮೊಗ್ಗ ಜೈಲಿನಲ್ಲಿರುವ ಮಾಸ್ಕ್ ಮ್ಯಾನ್ ಚಿನ್ನಯ್ಯಗೆ ಜಾಮೀನು

Next Post

ಮಾನಸಿಕ ಸ್ಥಿರತೆ, ಸದೃಢ ಆರೋಗ್ಯ ಸಾಧನೆಗೆ ಕ್ರೀಡೆ ಪ್ರೇರಣೆ | ಡಾ. ರವೀಂದ್ರ ಅಭಿಮತ

kalpa News

kalpa News

Next Post
ಮಾನಸಿಕ ಸ್ಥಿರತೆ, ಸದೃಢ ಆರೋಗ್ಯ ಸಾಧನೆಗೆ ಕ್ರೀಡೆ ಪ್ರೇರಣೆ | ಡಾ. ರವೀಂದ್ರ ಅಭಿಮತ

ಮಾನಸಿಕ ಸ್ಥಿರತೆ, ಸದೃಢ ಆರೋಗ್ಯ ಸಾಧನೆಗೆ ಕ್ರೀಡೆ ಪ್ರೇರಣೆ | ಡಾ. ರವೀಂದ್ರ ಅಭಿಮತ

Leave a Reply Cancel reply

Your email address will not be published. Required fields are marked *

No Result
View All Result
Bengaluru Sparsh Hospital Hennur Completes One Year
English Articles

When Patients Travel for Hope: How Bengaluru Is Becoming a Destination for Complex Transplant Care

by kalpa News
September 4, 2026
0

Kalpa Media House  |  Bengaluru  | Patients from different parts of India and abroad are increasingly travelling to Bengaluru in...

Read moreDetails
Railway Board hubballi-rameswaram-train-extended-9-trip

Railway Board Hubballi–Rameswaram Special Express Services Extended

September 3, 2026
Indian Railways Nepalganj Bahraich Line Upgrade 730 Crore

Indian Railways Boosts Nepal Border Connectivity With ₹730 Crore Bahraich Rail Project

September 1, 2026
RPF Mysuru Railway Theft Lost Mobile Recovered copy

RPF Mysuru Cracks Railway Property Theft, Recovers Passenger’s Lost Mobile Phone

August 31, 2026
Shikaripura National Sports Day In Kumadvathi Central School copy

KRCS Shikaripura Celebrates National Sports Day with Fervour

August 30, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL