ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಸಿಬಿಎಸ್ಇ ಹತ್ತನೇ ತರಗತಿಯ ಪರೀಕ್ಷೆಯಲ್ಲಿ #CBSE 10th Result ಸ್ಥಳೀಯ ಕುಮದ್ವತಿ ವಸತಿ ಕೇಂದ್ರೀಯ ಶಾಲೆಗೆ ಶೇ. 98.4ರಷ್ಟು ಫಲಿತಾಂಶ ಲಭಿಸಿದೆ.
ಒಟ್ಟು 64 ವಿದ್ಯಾರ್ಥಿಗಳಲ್ಲಿ 20 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, 20 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 15 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುದ್ದಾರೆ.
ಪ್ರಥಮ್ ಜಿ.ಎಲ್ ಜಗತಾಪ್ ಪ್ರಥಮ ಸ್ಥಾನ ಪಡೆದಿದ್ದು ಒಟ್ಟು 500ಕ್ಕೆ 485 ಅಂಕಗಳೊಂದಿಗೆ 97% ಪಡೆದು ಶಿಕಾರಿಪುರ ತಾಲ್ಲೂಕಿಗೆ ದ್ವಿತೀಯ ಸ್ಥಾನ ಪಡೆದು ಪೋಷಕರಿಗೆ ಮತ್ತು ಶಾಲೆಗೆ ಕೀರ್ತಿ ತಂದಿದ್ದಾರೆ.
ಇನ್ನು ಮೊಹಮ್ಮದ್ ತಸೀದ್ 463/500, ಅಪೇಕ್ಷಾ ಆರ್ 453/500, ಪಾವನಿ ಪಿ ಪಾಟೀಲ್ 453/500, ಖುಷಿ ಯು ಆರ್, 451/500, ತೋಷಿತ್ ಹೆಚ್.ಎಮ್, 450/500 ಅಂಕ ಗಳಿಸಿದ್ದಾರೆ. ಹಾಗೂ ಶಾಲೆಯ ವಿದ್ಯಾರ್ಥಿ ನಿಲಯದಲ್ಲಿ ಒಟ್ಟು 35 ವಿದ್ಯಾರ್ಥಿಗಳಲ್ಲಿ ಎಲ್ಲಾ 35 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ.100 ಫಲಿತಾಂಶ ಲಭಿಸಿದ್ದು, ಶಾಲಾ ಪ್ರಾಚಾರ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ ಅಭಿನಂದಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















