ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ದ್ವಿತೀಯ ಪಿಯುಸಿ ಫಲಿತಾಂಶ #Second PU Result ಇಂದು ಪ್ರಕಟಗೊಂಡಿದ್ದು ಇಲ್ಲಿನ ಕುಮದ್ವತಿ ಕಾಂಪೋಸಿಟ್ ಪಿಯು ಕಾಲೇಜಿನ ಮೂವರು ವಿದ್ಯಾರ್ಥಿಗಳ ರ‍್ಯಾಂಕ್ ಗಳಿಸುವ ಮೂಲಕ ಸಂಸ್ಥೆ ಹಾಗೂ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಎಂ.ಎಸ್. ಪವನ್-2ನೇ ರ‍್ಯಾಂಕ್
ಕಾಮರ್ಸ್ ವಿಭಾಗದಲ್ಲಿ 600ಕ್ಕೆ 596 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ ಎರಡನೇ ರ‍್ಯಾಂಕ್ ಪಡೆದಿದ್ದಾರೆ ಪವನ್. ಕುಮದ್ವತಿ ಬಿಇಡಿ ಕಾಲೇಜಿನಲ್ಲಿ #KumadvatiCollege ಕರ್ತವ್ಯ ನಿರ್ವಹಿಸುತ್ತಿರುವ ಎಸ್. ಮಂಜುನಾಥ್ ಹಾಗೂ ಗೃಹಿಣಿ ಅನಿತಾ ಅವರ ಪುತ್ರನಾದ ಪವನ್ ಸಾಧನೆ ಜಿಲ್ಲೆಯೇ ಹೆಮ್ಮೆ ಪಡುವಂತಹದ್ದಾಗಿದೆ.
ಆರ್. ಸೃಜನಾ-5ನೇ ರ‍್ಯಾಂಕ್
ಕಾಮರ್ಸ್ ವಿಭಾಗದಲ್ಲಿ 600ಕ್ಕೆ 593 ಅಂಕಗಳನ್ನು ಗಳಿಸುವ ಮೂಲಕ ಆರ್. ಸೃಜನಾ ರಾಜ್ಯಕ್ಕೇ 5ನೇ ರ‍್ಯಾಂಕ್ ಗಳಿಸಿದ್ದಾರೆ.
Also read: ಶಿಕಾರಿಪುರ | ರಾಜ್ಯಕ್ಕೆ ರ‍್ಯಾಂಕ್ ಪಡೆದ ಕುಮದ್ವತಿ ಕಾಲೇಜಿನ ಪವನ್ | ಸ್ವತಃ ವಿದ್ಯಾರ್ಥಿ ಹೇಳಿದ್ದೇನು?
ಎ.ಎನ್. ದೀಕ್ಷಾ-7ನೇ ರ‍್ಯಾಂಕ್
ಇನ್ನು ಕಾಮರ್ಸ್ ವಿಭಾಗದಲ್ಲಿ 600ಕ್ಕೆ 590 ಅಂಕಗಳನ್ನು ಗಳಿಸುವ ಮೂಲಕ ಎ.ಎನ್. ದೀಕ್ಷಾ ಅವರು ರಾಜ್ಯಕ್ಕೇ 7ನೇ ರ‍್ಯಾಂಕ್ ಗಳಿಸಿದ್ದಾರೆ.
ಕುಮದ್ವತಿ ಪಿಯು ಕಾಲೇಜಿಗೆ ಕೀರ್ತಿ ತಂದ ಈ ಮೂವರು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ ಅಭಿನಂದಿಸಿದೆ.
ಕುಮದ್ವತಿ ವಿಜ್ಞಾನ ಹಾಗೂ ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ಪವನ್ ವಾಣಿಜ್ಯ ಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್, ಸೃಜನ ಐದನೇ ರಾಂಕ್ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಒಟ್ಟು 82 ರಲ್ಲಿ 40 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 31 ವಿದ್ಯಾರ್ಥಿಗಳು ಪ್ರಥಮ ಸ್ಥಾನ 10 ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದಿದ್ದಾರೆ. ಒಟ್ಟಾರೆ ಫಲಿತಾಂಶ ಶೇ.98.7 ದಾಖಲಾಗಿದೆ.
ವಿಜ್ಞಾನ ವಿಭಾಗದಲ್ಲಿ 251 ರಲ್ಲಿ 85 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 96 ವಿದ್ಯಾರ್ಥಿಗಳು ಪ್ರಥಮ ಸ್ಥಾನ, 70 ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ದೀಕ್ಷಿತ 8 ನೇ ರ‍್ಯಾಂಕ್ 590 ಅಂಕಗಳನ್ನು ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ವಿಜ್ಞಾನ ವಿಭಾಗ ಶೇಕಡಾ 99.29% ಆಗಿದ್ದು, ಕಾಲೇಜಿನ ಒಟ್ಟು ಶೇ.98:5% ಆಗಿದೆ.
ಸಾಧನೆ ಮಾಡಿದ ಈ ಮೂವರು ವಿದ್ಯಾರ್ಥಿಗಳು, ಆಡಳಿತ ಮಂಡಳಿ ಹಾಗೂ ಉಪನ್ಯಾಸಕ ವರ್ಗವನ್ನು ಕಲ್ಪ ಮೀಡಿಯಾ ಹೌಸ್ ಅಭಿನಂದಿಸುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post