ಶಿಕಾರಿಪುರ: ತಾಲೂಕಿನ ತೊಗರ್ಸಿ ಗ್ರಾಮದಲ್ಲಿ ನೆಲಸಿದ್ದ ನಾಟಕ ಕಲಾವಿದರಿಗೆ ಉಳ್ಳಿಫೌಂಡೇಷನ್ ವತಿಯಿಂದ ದಿನಸಿ ಹಾಗೂ ಅಕ್ಕಿ ವಿತರಿಸಲಾಯಿತು. ಕೊರೋನ ಎರಡನೇ ಅಲೆಯಿಂದ ಸಾಕಷ್ಟು ಜನ ಸಂಕಷ್ಟದಲ್ಲಿದ್ದು ಈ ಲಾಕ್ ಡೌನ್‌ನಿಂದ ಕಲಾವಿದರು ತೀವ್ರ ಸಂಕಷ್ಟವನ್ನು ಅನುಭವಿಸುತ್ತಾ ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಸುಮಾರು ತಿಂಗಳುಗಳಿಂದ ನಾಟಕವನ್ನು ಪ್ರದರ್ಶಿಸುತ್ತಾ ಕೆಬಿಆರ್ ನಾಟಕ ಕಂಪನಿಯ ಕಲಾವಿದರು ತೊಗರ್ಸಿ ಗ್ರಾಮದಲ್ಲಿ ನೆಲೆಸಿದ್ದು, ನಿರೀಕ್ಷೆಯ ಮಟ್ಟದ ದುಡಿಮೆ ಇಲ್ಲದೆ ಸುಮಾರು 30ಕ್ಕೂ ಹೆಚ್ಚು ಕಲಾವಿದರು ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಎದುರಾಗಿದ್ದು ಅವರಿಗೆ ಉಳ್ಳಿ ಫೌಂಡೇಶನ್ ವತಿಯಿಂದ 25 ಕೆಜಿ ಅಕ್ಕಿ ಹಾಗು ದಿನಸಿ ಪದಾರ್ಥಗಳನ್ನು ನೀಡಲಾಯಿತು.
ಈ ಸಂಧರ್ಭದಲ್ಲಿ ಉಳ್ಳಿ ಫೌಂಡೇಶನ್ ಅಧ್ಯಕ್ಷ ಹಾಗೂ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಉಳ್ಳಿ ದರ್ಶನ್, ದಯಾನಂದ್ ಗಾಮ, ರೇಣುಕಯ್ಯ, ದಾರವಾಡ ಸುರೇಶ್, ಶಶಾಂಕ್ ಕಾಗಿನಲ್ಲಿ, ಚೇತನ್, ಪರಶುರಾಮ್ ಇನ್ನಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post