ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಕ್ರೀಡೆ ಎನ್ನುವುದು ಸ್ವಸ್ಥ ಆರೋಗ್ಯವನ್ನು ನಿರ್ಮಾಣ ಮಾಡಲು ಸಹಕಾರಿ ಆದ್ದರಿಂದ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸಿ ಸರ್ವತೋಮುಖ ಹಾದಿಯಲ್ಲಿ ಸಾಗಬೇಕು ಎಂದು ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಖಜಾಂಚಿ ಹಾಗೂ ಶಿಕಾರಿಪುರದ ಶಾಸಕ ಬಿ.ವೈ. ವಿಜಯೇಂದ್ರ ಕ್ರೀಡಾಪಟುಗಳಿಗೆ ಶುಭ ಹಾರೈಸಿ ಕಬಡ್ಡಿ ಪಂದ್ಯಾವಳಿಯನ್ನು ವೀಕ್ಷಿಸಿದರು.
2024ನೇ ಸಾಲಿನ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಕುಮದ್ವತಿ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ಬಾಲಕರ ಮತ್ತು ಬಾಲಕಿಯರ ಸಮಗ್ರ ಪ್ರಶಸ್ತಿ ಜೊತೆಗೆ ಕಾಲೇಜುಗಳ “ಸಮಗ್ರ ಪ್ರಶಸ್ತಿ”ಯನ್ನು ಮುಡಿಗೇರಿಸಿಕೊಂಡಿದೆ.
Also read: ಶಿವಮೊಗ್ಗ: ಉಪನ್ಯಾಸಕನಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಆರೋಪಿ ಬಂಧನ
ಬಾಲಕಿಯರ ವಿಭಾಗದಲ್ಲಿ 100 ಮೀಟರ್ ಓಟ ಪ್ರಥಮ ಮತ್ತು ದ್ವಿತೀಯ, ಉದ್ದ ಜಿಗಿತ ಪ್ರಥಮ ಮತ್ತು ತೃತೀಯ, ಟ್ರಿಪ್ಪಲ್ ಜಂಪ್ ಪ್ರಥಮ, ದ್ವಿತೀಯ ಜಾವಲಿನ್, 800 ಮೀ ಓಟ ದ್ವಿತೀಯ, 4×400 & 4×100 ರೀಲೆ ಪ್ರಥಮ, ಹರ್ಡಲ್ ದ್ವಿತೀಯ, ಬಾಲಕಿಯರ ವಾಲಿ ಬಾಲ್ ಪ್ರಥಮ ಸ್ಥಾನ ಪಡೆದಿರುತ್ತಾರೆ, ಬಾಲಕರು ವಿಭಾಗದಲ್ಲಿ 800 & 3000 ಮೀ ಓಟ ಪ್ರಥಮ & ದ್ವಿತೀಯ,100 ಮೀ ಓಟ ತೃತೀಯ,ಶಾಟ್ ಪುಟ್ ದ್ವಿತೀಯ, ತೃತೀಯ, ಉದ್ದ ಜಿಗಿತ ದ್ವಿತೀಯ, ಹಾಮರ್ ಥ್ರೋ ದ್ವಿತೀಯ, ತೃತೀಯ, 100 × 4 & 400×40 ರೀಲೆ ಪ್ರಥಮ, ಬಾಲಕರ ಕಬ್ಬಡಿ ದ್ವಿತೀಯ ಸ್ಥಾನ ಪಡೆದು ಸಮಗ್ರ ಪ್ರಶಸ್ತಿ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ ಈ ವಿದ್ಯಾರ್ಥಿಗಳಿಗೆ ಕಾಲೇಜು ಆಡಳಿತ ಮಂಡಳಿ, ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ,
ಈ ಕ್ರೀಡಾಕೂಟವನ್ನು ಕಮಲಮ್ಮ ವೃಷಭೇಂದ್ರ ಸ್ವಾಮಿ ಪದವಿ ಪೂರ್ವ ಕಾಲೇಜು ಆತಿಥ್ಯ ವಹಿಸಿಕೊಂಡು ಎರಡು ದಿನ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಏಕಲವ್ಯ ಕ್ರೀಡಾಂಗಣದಲ್ಲಿ ನಡೆಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post