ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಭಾರತದ ಅಭಿವೃದ್ಧಿ, ಆಹಾರ ಭದ್ರತೆ ಮತ್ತು ಗ್ರಾಮೀಣ ಜೀವನೋಪಾಯಕ್ಕಾಗಿ ಕೃಷಿ ಅತ್ಯಂತ ಮೂಲಭೂತ ಮತ್ತು ತಂತ್ರಾತ್ಮಕ ಕ್ಷೇತ್ರವಾಗಿದೆ. ಕೃಷಿ ಭಾರತದ ಆರ್ಥಿಕತೆ, ಸಮಾಜ ಮತ್ತು ಸಂಸ್ಕೃತಿಯ ಅಡಿಪಾಯವಾಗಿದ್ದು, ಅನ್ನದಾತನ ಕೈ ಬಲವಾಗಿದೆಯೆಂಬ ಅರಿವು ಪ್ರತಿಯೊಬ್ಬ ನಾಗರಿಕನು ತಿಳಿದು ಕೊಳ್ಳಬೇಕಾಗಿದೆ ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಸಾಲಯ ಕುಲಪತಿ ಡಾ. ಆರ್.ಸಿ. ಜಗದೀಶ ಹೇಳಿದರು.
ತಾಲ್ಲೂಕಿನ ಈಸೂರು ಗ್ರಾಮ ದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಸಾಲಯ ಇರುವಕ್ಕಿ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳು ತಮ್ಮ ಗ್ರಾಮೀಣ ಕೃಷಿ ಕಾರ್ಯನುಭವ ಕಾರ್ಯಕ್ರಮ ಅಡಿಯಲ್ಲಿ ಕೃಷಿ ಮಾಹಿತಿ ಕೇಂದ್ರ ಹಾಗು ಕೈ ತೋಟ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
“ಸಮೃದ್ಧ ರೈತ – ಸಮೃದ್ಧ ಭಾರತ” ಎಂಬ ಸಂಕಲ್ಪವು ನಿಜವಾಗುವುದು ಕೃಷಿಗೆ ಪ್ರಾಥಮ್ಯ, ಮಾನ ಮತ್ತು ನ್ಯಾಯಸಂಗತ ಬೆಲೆ ದೊರೆತಾಗ ಮಾತ್ರ ಎಂದು ಹೇಳಿದರು.
ವಿದ್ಯಾರ್ಥಿಗಳು ಏರ್ಪಡಿಸಿರುವ ಕೃಷಿ ಮಾಹಿತಿ ಕೇಂದ್ರ ಹಾಗು ಕೈ ತೋಟ ಬಗ್ಗೆ ಮೆಚ್ಚುಗೆ ನೀಡಿದರು.
ಸಸ್ಯ ಜ್ಯೋತಿ ತಂಡದ ವಿದ್ಯಾರ್ಥಿಗಳು ಕೃಷಿ ಜ್ಞಾನವನ್ನು ವಿಸ್ತರಿಸುವ ನಿಟ್ಟಿನಲ್ಲಿ ವಿವಿದ ಮಾದರಿಗಳು ಹಾಗು ಕೃಷಿಗೆ ಸಂಬಂದಿಸಿದ ಮಾಹಿತಿಗಳನ್ನು ಒಳಗೊಂಡ ಚಾರ್ಟ್‌ಗಳು ಹಾಗು ಮಾರುಕಟ್ಟೆಗೆ ಸಂಬಂದಿಸಿದ ಮಾಹಿತಿ ಹಾಗು ಕಿಟ್ಟನಾಶಕಗಳು, ಶಿಲಿಂದ್ರನಾಶಕಗಳ ಮಾದರಿಗಳು ಹಾಗು ಅನೇಕ ಜೀವಂತ ಮಾದರಿಗಳು ಮತ್ತು ಚಾರ್ಟ್‌ಗಳು ಕೃಷಿ ಮಾಹಿತಿ ಕೇಂದ್ರದ ಉದ್ಘಾಟನೆಯನ್ನು ವಿಶ್ವವಿದ್ಸಾಲಯದ ಶಿಕ್ಷಣ ನಿರ್ದೇಶಕರಾದ ಡಾ. ಹೇಮ್ಲಾ ನಾಯಕ್ ರವರು ನೆರವೇರಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಗ್ರಾಮದಲ್ಲಿರುವ ರೈತರ ಜೊತೆಗೆ ಬೆರತು ರೈತರಲ್ಲಿರುವ ಕೃಷಿ ಅನುಭವವನ್ನು ತಿಳಿದುಕೊಳ್ಳ ಬೇಕು ಎಂದು ಹೇಳಿದರು.
ಗ್ರಾಮೀಣ ಪ್ರದೇಶದ ಜನರ ಜೀವನೋಪಾಯ ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಾದ (ಹಾಲು ಉತ್ಪಾದನೆ, ಮೀನುಗಾರಿಕೆ, ಕೋಳಿ ಸಾಕಣೆ, ತೋಟಗಾರಿಕೆ ಇತ್ಯಾದಿ) ಗ್ರಾಮೀಣ ಪ್ರದೇಶದ ಕೋಟ್ಯಾಂತರ ಕುಟುಂಬಗಳಿಗೆ ಪ್ರಮುಖ ಉದ್ಯೋಗ ಮೂಲವಾಗಿದೆ. ಉದ್ಯೋಗದಲ್ಲಿ ಕೃಷಿಯ ಪಾತ್ರ ಅರ್ಧಕ್ಕಿಂತ ಹೆಚ್ಚು ಹಂಚಿಕೆಯನ್ನು ಹೊಂದಿದ್ದು, ಗ್ರಾಮೀಣ ದಾರಿದ್ರ್ಯ ನಿವಾರಣೆಗೆ ಇದು ನೇರ ಸಾಧನವಾಗಿದೆ ಎಂದು ಹೇಳಿದರು.
ಕೈ ತೋಟ ಉದ್ಘಾಟನೆಯನ್ನು ವಿಶ್ವವಿದ್ಸಾಲಯದ ಡೀನ್ (ಸ್ನಾತಕೋತರ) ಡಾ. ನಾರಾಯಣ್ ಎಸ್. ಮಾವರಕ್ಕರ್ ರವರು ನೆರವೇರಿಸಿ ಮಾತನಾಡಿ, ಈ ಊರಿಗೂ ಅವರಿಗಿರುವ ನಂಟನ್ನು ಹಾಗು ರೈತರ ಜೊತೆಗಿನ ಸಂಭದವು ಬಹಳ ವರ್ಷಗಳಿದ ಇದೆ ಎಂದು ಹೇಳಿದರು.
ಪರಿಸರದ ಸ್ಥಿರತೆ ಮತ್ತು ಸಾವಯವ ಹಾಗೂ ನೈಸರ್ಗಿಕ ಕೃಷಿ, ಮಣ್ಣಿನ ಆರೋಗ್ಯ ಸಂರಕ್ಷಣೆ ಮತ್ತು ನೀರಾವರಿ ವಿಕಾಸದ ಮೂಲಕ ಕೃಷಿ ವಲಯವು ಪರಿಸರ ಸಮತೋಲನ ಕಾಪಾಡುವ ಜವಾಬ್ದಾರಿಯನ್ನೂ ಹೊತ್ತಿದೆ. ಮಣ್ಣು, ನೀರು, ಜೈವ ವೈವಿಧ್ಯವನ್ನು ಕಾಪಾಡುವ ಸುಸ್ಥಿರ ಕೃಷಿ ಪದ್ಧತಿಗಳಿಲ್ಲದೆ ದೀರ್ಘಕಾಲದ ಆಹಾರ ಭದ್ರತೆ ಸಾಧ್ಯವಿಲ್ಲ ಎಂಬ ಅರಿವು ಮೂಡಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೇಖಾ ಪ್ರಭಾಕರ್ ಪಾಟೀಲರವರು (ಗ್ರಾಮ ಪಂಚಾಯಿತಿ ಅಧ್ಯಕ್ಷರು ಈಸೂರು) ವಹಿಸಿಕೊಂಡಿದ್ದರು. ಹಾಗು ಮುಖ್ಯ ಅತಿಥಿಗಳಾಗಿ ವಿಶ್ವವಿದ್ಸಾಲಯದ ಕುಲಸಚಿವರಾದ ಡಾ. ಕೆ. ಸಿ. ಶಶಿಧರ್ ರವರು ಆಗಮಿಸಿದ್ದರು.
ಕಾರ್ಯಕ್ರಮದ ಅತಿಥಿಗಳಾಗಿ ಬೇಗೂರು ಶಿವಪ್ಪನವರು (ರೈತ ಮುಖಂಡರು) ಜಗದೀಶ್ ಈಸೂರು (ಪಿ.ಲ್. ಡಿ. ಬ್ಯಾಂಕ ನಿರ್ದೇಶಕರು ಹಾಗು ಅ.ಭಾ.ವೀ.ಮ ಜಿಲ್ಲಾ ಉಪಾಧ್ಯಕ್ಷರು) ಹಕ್ಕೇರಿ ಗಡಲ್ಲಪ್ಪನವರು( ಧರ್ಮದರ್ಶಿಗಳು ಈಸೂರು) ಶ್ರೀ ಕರಿಬಸಪ್ಪ ನವರು ಮುಖ್ಯೋಪಾಧ್ಯಾಯರು (ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಈಸೂರು) ಜಿ. ಪಿ. ಚಂದ್ರಶೇಖರ (ಅಧ್ಯಕ್ಷರು ಎಸ್. ಡಿ. ಎಮ್.ಸಿ ಈಸೂರು) ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಡಾ. ಸಹನಾ ಎಸ್, ಡಾ ಕಿರಣಕುಮಾರ ಪಾಟೀಲ, ಡಾ. ನಿರಂಜನ, ಡಾ. ಶ್ರುತಿ ನಾಯಕ ಡಾ. ಪ್ರದೀಪಕುಮಾರ ರವರು ಈ ಕಾರ್ಯಕ್ರಮಕ್ಕೆ ಸ್ವಾಗತವನ್ನು ಕೋರಿದರು.
ಈ ಕಾರ್ಯಕ್ರಮದಲ್ಲಿ ಈಸುರಿನ ಗ್ರಾಮಸ್ಥರು ಹಾಗು ಸಸ್ಯ ಜ್ಯೋತಿ ತಂಡದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















