ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳು ನೆಲವಾಗಿಲು ಗ್ರಾಮದಲ್ಲಿ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದಡಿಯಲ್ಲಿ ನಡೆಸಿಕೊಟ್ಟ ಮೈಕ್ರೊಗ್ರೀನ್ಸ್ #Micro Greens ಎಂಬ ವಿಷಯದ ಬಗ್ಗೆ ಗುಂಪು ಚರ್ಚೆ ಹಾಗೂ ಪದ್ಧತಿ ಪ್ರಾತ್ಯಕ್ಷಿಕೆ ಯಶಸ್ವಿಯಾಯಿತು.
ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ ವಿದ್ಯಾರ್ಥಿಗಳು ಮೈಕ್ರೋಗ್ರೀನ್ಸ್ ಎಂದರೆ ಏನು, ಹೇಗೆ ಬೆಳೆಯುಹುದು ಹಾಗೂ ಅದರ ಪ್ರಯೋಜನಗಳನ್ನು ತಿಳಿಸಿದರು.
ಮೈಕ್ರೋಗ್ರೀನ್ಸ್ ಎಂದರೆ ಮೈಕ್ರೊಗ್ರೀನ್ ಅಂದರೆ ಹಸಿರು ಸಸ್ಯಗಳ ಎಳೆ ಚಿಗುರು. ಈ ಹಸಿರು ಚಿಗುರುಗಳನ್ನು ತೆಗೆದು ಅದನ್ನು ತಿನಿಸುಗಳಿಗೆ ಮಿಕ್ಸ್ ಮಾಡಿ ಅಥವಾ ಅಲಂಕಾರ ಮಾಡಿ ಸರ್ವ್ ಮಾಡಲಾಗುತ್ತದೆ ಎಂದರು.
ಈ ಮೈಕ್ರೋಗ್ರೀನ್ಸ್ ಬೆಳೆಯಲು ಬೀಟ್ರೂಟ್, ಮೂಲಂಗಿ, ಸಾಸಿವೆ, ರಾಗಿ, ಎಲೆ ಕೋಸು ಹೆಸರು ಕಾಳು, ಸೂರ್ಯ ಕಾಂತಿ, ಬಟಾಣಿ, ಕ್ಯಾರೇಟ್, ಪಾಲಕ್, ಕೊತ್ತಂಬರಿ ಮತ್ತು ಮೆಂತ್ಯೆ ಇನ್ನು ಮುಂತಾದ ತರಕಾರಿ ಬೀಜಗಳನ್ನು ಬೆಳೆಯಬಹುದು. ಇದನ್ನು ಹಾಗೆಯೇ ತಿನ್ನಬಹುದು, ಸಲಾಡ್, ಜ್ಯೂಸ್ ಮತ್ತು ಅಡುಗೆಯಲ್ಲೂ ಬಳಸಬಹುದು ಎಂದರು.
Also read: ಕಟೀಲ್ ಅಶೋಕ್ ಪೈ ಕಾಲೇಜಿಗೆ ಮೂರು ರ‍್ಯಾಂಕ್ | ಇವರೇ ಮೂವರು ಸಾಧಕರು
ಮೈಕ್ರೋಗ್ರೀನ್ಸ್ ಬೆಳೆಸಲು ಹೆಚ್ಚು ಸಮಯ ಬೇಕಿಲ್ಲ. ಎರಡರಿಂದ ಮೂರು ಇಂಚು ಆಳವಿರುವ ಯಾವುದೇ ಟ್ರೇ ಅಥವಾ ಪಾತ್ರೆ, ಪ್ಲಾಸ್ಟಿಕ್ ಕಂಟೈನರ್ ಅಥವಾ ಮಣ್ಣಿನ ಕುಂಡಗಳಲ್ಲಿ ಮಣ್ಣು, ಗೊಬ್ಬರ ತುಂಬಿಸಿ ನೀರು ಹಾಕಿ ಹದಗೊಳಿಸಿ, ನಂತರ ಬೀಜಗಳನ್ನು ಮಣ್ಣಿನಲ್ಲಿ ಸೇರಿಸಬೇಕು. ನಿತ್ಯ ಬೆಳಗ್ಗೆ, ಸಂಜೆ ನೀರು ಸಿಂಪಡಿಸಬೇಕು. ಬಿತ್ತಿದ ವಾರದಲ್ಲೇ ಮೊಳಕೆಯೊಡೆದು 20 ದಿನಗಳಲ್ಲಿ ಎಲೆಗಳು ಬರುತ್ತವೆ. ಅವು 2-3 ಇಂಚು ಬೆಳದಾಗ ಕೊಯ್ಲಿಗೆ ಉತ್ತಮ ಎಂದರು.
ಮೈಕ್ರೋಗ್ರೀನ್ಸ್ ಅಲ್ಲಿ ವಿಟಮಿನ್ ಇ, ಉ ಮತ್ತು ಓ ಸೇರಿದಂತೆ ಅನೇಕ ಖನಿಜಗಳು, ಆ್ಯಂಟಿ ಆಕ್ಸಿಡೆಂಟ್ ಪ್ರಮಾಣ ಹೆಚ್ಚಾಗಿದೆ ಇದರಿಂದ ಹೃದಯ ಆರೋಗ್ಯ, ಊಟ ಪಚನ ಮತ್ತು ದೇಹ ದುರಸ್ತಿಗಾಗಿ ಒಳ್ಳೆಯದು, ಮತ್ತು ಚರ್ಮಕ್ಕೆ ಲಾಭ ಹಾಗೂ ಪ್ರತಿರೋಧ ಶಕ್ತಿ ಹೆಚ್ಚಿಸುತ್ತದೆ ಎಂದರು.
ನೆಲವಾಗಿಲಿನ ಜನರು ಮೈಕ್ರೋಗ್ರೀನ್ಸನ್ನು ಮೆಚ್ಚಿದರು. ಮಹಿಳೆಯರು ಮನೆಯ¯್ಲೆÃ ಮಾಡಿ ತಮ್ಮ ಆರೋಗ್ಯವನ್ನು ವೃದ್ಧಿಸಬಹುದು ಹಾಗೂ ವಾಣಿಜ್ಯೋದ್ಯಮಿಯಾಗಬಹುದು. ಇದು ಲಾಭದಾಯಕವಾಗಿದೆ, ಕಡಿಮೆ ಖರ್ಚು ಹಾಗೂ ಆರೋಗ್ಯಕರವಾಗಿದೆ ಎಂದು ವಿವರಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post