ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ವಿಧಾನಸಭಾ ಚುನಾವಣೆಗೆ ಶಿಕಾರಿಪುರ ಕ್ಷೇತ್ರದಿಂದ ಬಿ.ವೈ. ವಿಜಯೇಂದ್ರ ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದು, ಇದಕ್ಕೂ ಮುನ್ನ ನಡೆದ ಮೆರವಣಿಗೆಯಲ್ಲಿ ಅಪಾರ ಜನಸ್ತೋಮ ನೆರೆದಿದ್ದು, ಜಾತ್ರೆಯಂತೆ ಜನ ಸೇರಿದ್ದು ವಿಶೇಷವಾಗಿತ್ತು.
ಇಂದು ಮುಂಜಾನೆ ತಮ್ಮ ನಿವಾಸದಲ್ಲಿ ತಂದೆ ಬಿ.ಎಸ್. ಯಡಿಯೂರಪ್ಪ ಹಾಗೂ ಸಹೋದರ ರಾಘವೇಂದ್ರ ಅವರಿಗೆ ನಮಸ್ಕರಿಸಿ ಆರ್ಶೀವಾದ ಪಡೆದ ವಿಜಯೇಂದ್ರ ಅವರಿಗೆ ಕುಟಂಬದ ಮಹಿಳೆಯರು ಆರತಿ ಬೆಳಗಿ ಶುಭ ಹಾರೈಸಿದರು.
ಅಲ್ಲಿಂದ ಯಡಿಯೂರಪ್ಪ ಹಾಗೂ ವಿಜಯೇಂದ್ರ ತಮ್ಮ ಹಳೆಯ ಅಂಬಾಸಿಡರ್ ಕಾರಿನಲ್ಲಿ ತೆರಳಿದ್ದು ವಿಶೇಷವಾಗಿತ್ತು.

Also read: ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ: ಯಾರೆಲ್ಲಾ ಪಾಲ್ಗೊಳ್ಳಲಿದ್ದಾರೆ? ಇಲ್ಲಿದೆ ವಿವರ
ಯಡಿಯೂರಪ್ಪ ಅವರು ಸಿಕೆಆರ್ 45 ನಂಬರಿನ ಹಳೆಯ ಅಂಬಾಸಿಡರ್ ಕಾರನ್ನು 1985ರಿಂದಲೂ ಹೊಂದಿದ್ದು, ಈ ಕಾರಿನ ಬಗ್ಗೆ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ ಎನ್ನುತ್ತವೆ ಆಪ್ತ ಮೂಲಗಳು.

ವಿಜಯೇಂದ್ರ ಅವರೂ ಸಹ ಇದೇ ಕಾರಿನಲ್ಲಿ ಇಂದು ಚುನಾವಣಾಧಿಕಾರಿಗಳ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.










Discussion about this post