ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರಾಗಿ ಅಧಿಕಾರಿ ಸ್ವೀಕರಿಸಿದ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರಿಗೆ ಫಿಡಿಲಿಟಸ್ ಕಾರ್ಪ್, ಫಿಡಿಲಿಟಸ್ ಗ್ಯಾಲರಿ ಮತ್ತು ಶಿಲ್ಪಾ ಫೌಂಡೇಶನ್ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.
ಬೆಂಗಳೂರಿನ ಕಚೇರಿಯಲ್ಲಿ ಜ್ಞಾನೇಂದ್ರ ಅವರನ್ನು ಭೇಟಿಯಾದ ಫಿಡಿಲಿಟಸ್ ಕಾರ್ಪ್, ಫಿಡಿಲಿಟಸ್ ಗ್ಯಾಲರಿ ಮತ್ತು ಶಿಲ್ಪಾ ಫೌಂಡೇಶನ್ ಅಧ್ಯಕ್ಷ ಅಚ್ಯುತ್ ಗೌಡ ಅವರು ಹೂಗುಚ್ಚ ನೀಡಿ ಅಭಿನಂದಿಸಿದರು.
ಈ ವೇಳೆ ಮಾತನಾಡಿದ ಅಚ್ಯುತ ಗೌಡ ಅವರು, ತೀರ್ಥಹಳ್ಳಿ ಕ್ಷೇತ್ರದಿಂದ ಹಲವು ಬಾರಿ ಶಾಸಕರಾಗಿ ಆಯ್ಕೆಯಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿ. ಸದ್ಯ ನಾಡಿನ ಜನತೆಗೆ ಸೇವೆ ಸಲ್ಲಿಸಲು ಗೃಹ ಮಂಡಳಿ ನಿಗಮದ ಅಧ್ಯಕ್ಷರಾಗಿ ಬಡ, ಮಧ್ಯಮ ಮತ್ತು ಶೋಷಿತ ವರ್ಗದವರಿಗೆ ಸಾಮಾಜಿಕ ಸೇವೆ ಲಭ್ಯವಾಗಲಿ ಎಂದು ಆಶಿಸುತ್ತೇವೆ ಎಂದರು.
Get In Touch With Us info@kalpa.news Whatsapp: 9481252093
















