No Result
View All Result
ABD Maestro Launches 3 Premium Whiskies in Hyderabad
English Articles

ABD Maestro Launches 3 Premium Whiskies in Hyderabad

by kalpa News
July 21, 2026
0

Kalpa Media House  |  Hyderabad  | Hyderabad emerges as a key destination for luxury spirits as AODH, WOODBURNS, and YELLO...

Read moreDetails
Shivamogga Murder Case Cracked Quickly, Two Arrested

Shivamogga Murder Case Cracked Quickly, Two Arrested

July 21, 2026
RPF Mysuru Division Records Notable Achievements in 2026

RPF Mysuru Division Records Notable Achievements in 2026

July 20, 2026
PM Modi Inaugurates Redeveloped Bantawala Railway Station through Video Conferencing

PM Narendra Modi Inaugurates Redeveloped Bantawala Railway Station through Video Conferencing

July 20, 2026
Indian Railway PM Modi to Inaugurate 4 Modern Railway Stations in Karnataka

Indian Railway | PM Modi To Launch 4 Stations In Karnataka

July 16, 2026
  • Advertise With Us
  • Grievances
  • About Us
  • Contact Us
Wednesday, July 22, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ರುದ್ರಾಂಶ ಸಂಭೂತರಾದ ಶ್ರೀಶ್ರೀ ಸತ್ಯಧರ್ಮತೀರ್ಥರ 190 ನೆಯ ಆರಾಧನೆ

ಆಗಸ್ಟ್‌ 16-18ರವರೆಗೂ ಹೊಳೆಹೊನ್ನೂರಿನಲ್ಲಿ ಆರಾಧನೆಗೆ ಸಿದ್ದತೆ

kalpa News by kalpa News
August 15, 2020
in Special Articles
0
ರುದ್ರಾಂಶ ಸಂಭೂತರಾದ ಶ್ರೀಶ್ರೀ ಸತ್ಯಧರ್ಮತೀರ್ಥರ 190 ನೆಯ ಆರಾಧನೆ
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಮಾಯನಗರಿ ಬೆಂಗಳೂರು ನಗರದಿಂದ ಶಿವಮೊಗ್ಗಕ್ಕೆ ಪ್ರಯಾಣಿಸಿದರೆ ಶಿವಮೊಗ್ಗದಿಂದ (ಸಿಹಿಮೊಗ್ಗೆ) 19 ಕಿಮೀ ಪರಿಕ್ರಮಿಸಿದರೆ ತುಂಗಭದ್ರಾ ನದಿಯ ಸಂಗಮ ಪುರಾಣೋಕ್ತ ಪ್ರಸಿದ್ದ ಶ್ರೀನರಸಿಂಹ ಕ್ಷೇತ್ರ ಕೂಡಲಿ. ಅಲ್ಲಿಂದ ಸ್ವಲ್ಪ ದೂರ ಸಾಗಿದರೆ ರುದ್ರಾಂಶ ಸಂಭೂತರಾದ ಶ್ರೀಶ್ರೀ ಸತ್ಯಧರ್ಮತೀರ್ಥರ ಮೂಲ ಬೃಂದಾವನ ಕ್ಷೇತ್ರವೇ ಹೊಳೆಹೊನ್ನೂರು.

ಶ್ರೀ ಮದುತ್ತರಾದಿ ಮಠದ ಪರಂಪರೆಯಲ್ಲಿ ಶ್ರೀಮದಾಚಾರ್ಯರ ತರುವಾಯ ಇಪ್ಪತ್ತೆಂಟನೆಯ ಯತಿ ಶ್ರೇಷ್ಠರೂ, ರುದ್ರಾಂಶ ಸಂಭೂತರಾದವರೇ ಈ ಹೊಳೆಹೊನ್ನೂರು ಕ್ಷೇತ್ರದಲ್ಲಿ ಬೃಂದಾವಸ್ಥರಾಗಿರುವ ಶ್ರೀಶ್ರೀಸತ್ಯಧರ್ಮತೀರ್ಥರು. 33 ವರ್ಷಗಳು (1797-1830)ಸರ್ವಜ್ಞ ಪೀಠವನ್ನು ಅಲಂಕರಿಸಿದ ವೈಷ್ಣವ ವೇದಾಂತದ ರಸಋಷಿಗಳ ಸಮೂಹದಲ್ಲಿ ಇವರು ಪ್ರಾತಃ ಸ್ಮರಣೀಯರು.

ಇವರನ್ನು ಹತ್ತೊಂಬತ್ತನೆಯ (19 ) ಶತಮಾನದ ಅತ್ಯಂತ ಪ್ರಮುಖ ಗ್ರಂಥಕಾರೆಂದೂ, ತಪಸ್ಸು, ಜ್ಞಾನ, ವೈರಾಗ್ಯಗಳ ತ್ರಿವೇಣಿ ಸಂಗಮವಾಗಿದರೆಂದು, ಶ್ರೀಪಾದಂಗಳವರು ಉತ್ತಮ ಚಿತ್ರಕಾರರೂ ಆಗಿದ್ದರೆಂದು ಹಲವು ವಿದ್ವಾಂಸರು ಹೇಳುತ್ತಾರೆ.

ಶ್ರೀಸತ್ಯಧರ್ಮತೀರ್ಥರ ಪೂರ್ವಾಶ್ರಮದ ಹೆಸರು ಪುರುಷೋತ್ತಮಾಚಾರ್ಯರು. ತಂದೆ ಶ್ರೀ ಮುದ್ಗಲಾಚಾರ್ಯ ಮತ್ತು ತಾಯಿ ವಿದುಷಿ ಜೀವೂಬಾಯಿಯವರಿಗೆ ಕ್ರಿಶ 1749 ರ ಶುಕ್ಲ ಸಂವತ್ಸರದ ಪುಷ್ಯಮಾಸ ಕೃಷ್ಣ ಪಕ್ಷ ಷಷ್ಠಿ ತಿಥಿಯಲ್ಲಿ, ಉತ್ತರಾ ನಕ್ಷತ್ರ ಪ್ರಥಮ ಪಾದದಲ್ಲಿ ಚಂದ್ರನು ಸಿಂಹರಾಶಿಯಲ್ಲಿರುವಾಗ ಜ್ಞಾನಿ ಶ್ರೇಷ್ಠರಾದ ಶ್ರೀ ಪುರುಷೋತ್ತಮಾಚಾರ್ಯರು ಅವತರಿಸಿದರು.

ಇವರು ಜನಿಸಿದ ಮನೆತನ ನವರತ್ನ. ಈ ಮನೆತನದಲ್ಲಿ ಜನಿಸಿದ ಪೂರ್ವಿಕರೆಲ್ಲರೂ ಬಾಲ್ಯದಿಂದಲೇ ಸಕಲ ವೇದಾಂತ ಶಾಸ್ತ್ರಗಳ ಪಾರಂಗತರಾಗಿದ್ದು ಘನವಿದ್ವಾಂಸರಾಗಿದ್ದರೆಂದು, ವಾದಮಲ್ಲರಾಗಿದ್ದರೆಂದು ಎಲ್ಲಾ ಕಡೆಗಳಲ್ಲೂ ದಿಗ್ವಿಜಯವನ್ನು ಸಾಧಿಸುತ್ತಿದ್ದರೆಂದು ಶ್ರೀ ಪಾದಂಗಳವರ ಪೂರ್ವಾಶ್ರಮದ ಅಳಿಯಂದಿರಾದ ಕಲ್ಲಾಪುರ ಶೀ ರಾಮಚಂದ್ರಾಚಾರ್ಯರ ಶ್ರೀ ಸತ್ಯಧರ್ಮ ಗುರುಚಂದ್ರ ಕಲೋದಯ ಮಹಾಕಾವ್ಯಮ್ ಎಂಬ ಮಹಕಾವ್ಯದಲ್ಲಿ ಈ ರೀತಿ ಉಲ್ಲೇಖವಿದೆ.

ಶ್ರೀಪಾದಂಗಳವರ ಪೂರ್ವಾಶ್ರಮದ ವೃತ್ತಾಂತ
ಶ್ರೀಪುರುಷೋತ್ತಮಾಚಾರ್ಯರಿಗೆ ಸತ್ಕುಲ ಪ್ರಸೂತೆಯಾದ ವಿದೂಷಿ ನರಸೂಬಾಯಿ ಎಂಬ ಕನ್ಯಾಮಣಿಯೊಂದಿಗೆ ವಿವಾಹವಾಯಿತು. ಇವರ ಸಾಂಸಾರಿಕ ಜೀವನವು ಮಧುರವಾಗಿತು . ಪಾಠ ಪ್ರವಚನ ಮಾಡಿಕೊಂಡು ಸವಣೂರಿನಲ್ಲಿ ನೆಲೆಸಿದ್ದರು. ಅವರ ಉನ್ನತ ಅಧ್ಯಯನವು ಶ್ರೀ ಸತ್ಯಬೋಧ ತೀರ್ಥರಲ್ಲಿಯೆ ನಡೆಯಿತು. ಶ್ರೀಶ್ರೀ ಸತ್ಯಬೋಧರ ಅನುಗ್ರಹದಿಂದ ಸುಪುತ್ರನು ಜನಿಸಿದನು.

ಅಪರೂಪದ ಮಗನಿಗೆ ಶ್ರೀಸತ್ಯಬೋಧಾಚಾರ್ಯನೆಂದು ಶ್ರೀ ಪಾದಂಗಳವರ ಹೆಸರನ್ನೇ ಇಟ್ಟು ನಾಮಕರಣವನ್ನು ಮಾಡಿದರು. ಹಲವು ವರ್ಷಗಳ ನಂತರ ಇವರಿಗೆ ಗಂಗಾಬಾಯಿ ಎಂಬ ಸುಪುತ್ರಿಯು ಜನಿಸಿದಳು.  ಇವರು ಎಷ್ಟೇ ವಿದ್ಯಾವಂತರೂ, ಬುದ್ದಿವಂತರಾಗಿದ್ದರೂ, ಇವರ ಆರ್ಥಿಕ ಸ್ಥಿತಿಯು ಅಷ್ಟು ಉತ್ತಮವಾಗಿರಲಿಲ್ಲ. ಜೀವನ ನಿರ್ವಹಣೆಯೂ ದುಸ್ತರವಾಗತೊಡಗಿತು.

ಹಿರಿಯ ವಿದ್ವಾಂಸರ ಒಬ್ಬರ ಸಲಹೆಯಂತೆ ಮಂತ್ರಾಲಯ ಕ್ಷೇತ್ರಕ್ಕೆ ತೆರಳಿ ಶ್ರೀರಾಘವೇಂದ್ರ ಸ್ವಾಮಿಗಳ ಸೇವೆಯನ್ನು ವಿಶೇಷ ರೀತಿಯಲ್ಲಿ ಮಾಡಿ ಅವರ ಅನುಗ್ರಹವನ್ನು ಸಂಪಾದಿಸಿದರು. ಅವರಿಗೆ ಮುಂದೆ ಸಕಲ ಕಲ್ಯಾಣ ಪ್ರಾಪ್ತವಾಗುವುದೆಂದು ಸ್ವಪ್ನ ಸೂಚನೆಯಾಯಿತು.

ಅಲ್ಲಿಂದ ಮುಂದೆ ಅವರು ಸೋಂದಾ ಕ್ಷೇತ್ರಕ್ಕೆ ಹೋಗಿ ಶ್ರೀ ವಾದಿರಾಜಸ್ವಾಮಿಗಳ ಸೇವೆಯನ್ನು ಮಾಡಿ ಅವರ ಅನುಗ್ರಹವನ್ನು ಸಹ ಸಂಪಾದಿಸಿಕೊಂಡರು. ಸಶರೀರ ಬೃಂದಾವನ ಪ್ರವೇಶ ಮಾಡಿದ ವಿಶೇಷ ಹಿರಿಮೆಯನ್ನು ಹೊಂದಿದ ಈ ಇಬ್ಬರು ಮಹನೀಯರ ಅನುಗ್ರಹಕ್ಕೆ ಪಾತ್ರರಾದದ್ದು ಇವರ ಹಿರಿಮೆ.

ಅಪರೋಕ್ಷ ಜ್ಞಾನಿಗಳಾದ ಶ್ರೀಶ್ರೀಸತ್ಯವರ ತೀರ್ಥರು ಶ್ರೀ ಪುರುಷೋತ್ತಮಚಾರ್ಯರಿಗೆ ಕ್ರಿಶ 1797 ರ ಪಿಂಗಳನಾಮ ಸಂವತ್ಸರದ ಶ್ರಾವಣ ಶುದ್ದ ಸಪ್ತಮಿಯ ದಿನ ಶುಭ ಮುಹೂರ್ತದಲ್ಲಿ ವಿಧಿಪೂರ್ವಕವಾಗಿ ಮಂತ್ರೋಪದೇಶ ಮಾಡಿ ಸರ್ವಜ್ಞ ಪೀಠದಲ್ಲಿ ಕುಳ್ಳರಿಸಿ ಪಟ್ಟಾಭಿಷೇಕವನ್ನು ಮಾಡಿದರು.

ನೂತನ ಶ್ರೀ ಪಾದಂಗಳವರನ್ನು ಶ್ರೀಸತ್ಯಧರ್ಮತೀರ್ಥರೆಂದು ನಾಮಕರಣ ಮಾಡಿದರು.(ಆಗ ಶ್ರೀಪುರುಷೋತ್ತಮಾಚಾರ್ಯರಿಗೆ 47ನೆಯ ವಯಸ್ಸು) ಇದರಿಂದ ಶ್ರೀ ಸತ್ಯನಿಧಿತೀರ್ಥರ ಭವಿಷ್ಯದ ನುಡಿಯೂ ಶ್ರೀಮಂತ್ರಾಲಯ ರಾಯರು ಆಚಾರ್ಯರಿಗೆ ಕನಸಿನಲ್ಲಿ ಕೊಟ್ಟ ಸೂಚನೆಯೂ ಫಲಪ್ರದವಾಯಿತು.

ಪ್ರಾಣದೇವರ ಪೂಜೆ
ಶ್ರೀಗುರುಭಕ್ತ ವಿಠಲ ಎಂಬ ಭಕ್ತನೊಬ್ಬ ಸಮರ್ಪಿಸಿದ ಪ್ರಾಣದೇವರನ್ನು ಇವರು ಪೂಜಿಸಿದರು. ಶ್ರೀಶ್ರೀ ಸತ್ಯಧರ್ಮತೀರ್ಥರು ನೂರಾರು ಶಿಷ್ಯರಿಗೆ ಪಾಠ ಪ್ರವಚನವನ್ನು ಮಾಡುತ್ತಾ ದಕ್ಷಿಣ ಭಾರತದ ಅನೇಕ ಮುಖ್ಯಸ್ಥಳಗಳನ್ನು ಸಂದರ್ಶಿಸಿದರು. ಹೊಳೆನರಸೀಪುರ ಇವರ ಮುಖ್ಯಕಾರ್ಯ ಕ್ಷೇತ್ರವಾಗಿತ್ತು.
ಶ್ರೀಶ್ರೀಸತ್ಯಧರ್ಮತೀರ್ಥರು ಕ್ರಿಶ 1830ರಲ್ಲಿ ಶ್ರಾವಣ ಬಹುಳ ತ್ರಯೋದಶಿಯಂದು ಹೊಳೆಹೊನ್ನೂರಿನಲ್ಲಿ ವೃಂದಾವನಸ್ಥರಾಗುತ್ತಾರೆ. ಶ್ರೀವೃಂದಾವನ ಸನ್ನಿಧಿಯಲ್ಲಿ ವಿಶೇಷ ಸನ್ನಿಧಾನವಿದ್ದು ಗಂಗಾ ಪ್ರತ್ಯಕ್ಷ ಎಂಬ ಪ್ರತೀತಿ ಇದೆ. ಶ್ರೀಪಾದಂಗಳವರ ವೃಂದಾವನದ ಕೂರ್ಮಪೀಠದ ಮುಂದೆ ಸ್ವಯಂ ವ್ಯಕ್ತವಾದ ಎರಡು ಉದ್ಭವ ಶಿವಲಿಂಗಗಳಿವೆ. ಶ್ರೀ ಮಠದ ಹೊರಗಡೆ ಶ್ರೀಪಾದಂಗಳವರ ಸಾಕ್ಷಾಚ್ಚಿಷ್ಯರಾದ ಶ್ರೀನರಸಿಂಹ ಒಡೆಯರ್ ರವರ ಮೂಲ ಬೃಂದಾವನವಿದೆ.

ಬೃಂದಾವನ ಮಹಿಮೆ
ಶ್ರೀಶ್ರೀ ಸತ್ಯಧರ್ಮತೀರ್ಥರ ಬೃಂದಾವನದ ಸೇವೆಯನ್ನು ಶ್ರದ್ಧಾ ಭಕ್ತಿಯಿಂದ ಮಾಡುವವರಿಗೆ ಉತ್ಕೃಷ್ಟವಾದ ಫಲ ದೊರೆಯುವುದು ಹಾಗೂ ಸಕಲಾಭೀಷ್ಠಗಳೂ ಪ್ರಾಪ್ತವಾಗಿರುತ್ತದೆ. ಶ್ರೀಶ್ರೀ ಸತ್ಯಧರ್ಮತೀರ್ಥರ ಬೃಂದಾವನದಲ್ಲಿ ಅನೇಕ ಮಹಿಮೆಗಳೂ ನಡೆದದ್ದು ಇವರ ಸಂದರ್ಶನಗೊಸ್ಕರ ಬರುತ್ತಿದ್ದ ಯಾತ್ರಿಕರ ಗುಂಪನ್ನು ದರೋಡೆಕೋರರಿಂದ ರಕ್ಷಿಸಿದ ಮಹಿಮೆ ತುಂಬಾ ಪ್ರಸಿದ್ದ.

ಒಮ್ಮೆ ಹೊಳೆಹೊನ್ನೂರು ಗ್ರಾಮವನ್ನು ದೋಚುವ ಉದ್ದೇಶದಿಂದ ದರೋಡೆಕೋರರ ಗುಂಪು ಧಾವಿಸಿ ಬಂದಾಗ ಅವರ ಕಣ್ಣಿಗೆ ಆಯುಧ ಪಾಣಿಗಳಾದ ವಿಪ್ರರ ಗುಂಪು ಎಲ್ಲಾ ಕಡೆ ಕಂಡು, ಭಯಭೀತರಾದ ದರೋಡೆಕೋರರು ಅವರ ಹೊಡೆತವನ್ನು ತಾಳಲಾರದೆ ಆ ಗ್ರಾಮದಿಂದ ಪಲಾಯನಗೊಂಡ ವಿಚಾರವನ್ನು ಕಲ್ಲಾಪುರದ ಶ್ರೀ ರಾಮಚಂದ್ರಾಚಾರ್ಯರು ತಮ್ಮ ಮಹಾಕಾವ್ಯದಲ್ಲಿ ಬಣ್ಣಿಸಿದ್ದಾರೆ.

ಸತ್ಯಧರ್ಮತೀರ್ಥರ ಕೃತಿಗಳು
ಶ್ರೀಸತ್ಯಧರ್ಮತೀರ್ಥರಿಂದ 22 ಕೃತಿಗಳು ರಚಿತವಾಗಿದೆ ಹಾಗೂ 13 ವ್ಯಾಖ್ಯಾನ ಗ್ರಂಥಗಳು 1) ಗಂಗಾಲಹರೀ 2) ಕವಿಕಂಠಮಣೀ 3) ಯದುವರ ಚರಿತಾಮೃತ ಲಹರೀ 4) ಭಾಗವದ್ಭಜನಮ್ 5) ವಿರಹಿಮೋದಸುಧಾ 6) ಹಿತೋಪದೇಶ 7) ಶ್ರೀರಂಗೇಶ್ವರ ಶೃಂಗಾರ ಲಹರಿ 8) ಶ್ರೀಲಕ್ಷೀನೃಸಿಂಹ ಸ್ತೋತ್ರಮ್ 9) ಗೀತಾ ಮಹತ್ಮಸಾರ ಸಂಗ್ರಹ 10) ನಿತ್ಯ ಸಂಸಾರಿ ಲಿಂಗಭಂಗವಿಚಾರ, 11) ನವಗ್ರಹಸ್ತೋತ್ರಮ್ 12)ಶ್ರೀವಾದಿರಾಜ ಸ್ತೋತ್ರಮ್ 13)ಶ್ರೀಸತ್ಯವರ 14) ಶ್ರೀ ಪಾದವಾದುಕ ಸ್ತೋತ್ರಮ್ (ಗುರು) 15) ಅಂತರ್ಲಾಪಿಕಾ 16) ಭವಾನೀ(ನದಿ) ಸ್ತೋತ್ರಮ್ 17) ಹೇಮಾವತಿನದಿ ಸ್ತೋತ್ರಮ್ 18) ಆಶೀವಚನಮ್ 19) ಕೆಲವು ಶುಭಾಷಿತಗಳು 20) ಕೆಲವು ಪ್ರಾಕೃತ ಕೃತಿಗಳು 21) ಶ್ರೀಸತ್ಯವರ ಶ್ರೀವಾದಪಾದುಕಾ ಸ್ತೋತ್ರ (ಲಘು) 22) ಗುರ್ವಷ್ಟಕಮ್

ವ್ಯಾಖ್ಯಾನ ಗ್ರಂಥಗಳು
ವ್ಯಾಖ್ಯಾನ ಗ್ರಂಥಗಳು;1) ತತ್ವ ಸಂಖ್ಯಾವ ಟಿಪ್ಪಣಮ್ 2-3) ಲಲಿತ ಪದ ಮಂಜರೀ (ನಮಕ ಚಮಕ ವ್ಯಾಖ್ಯಾ) 3) ಶ್ರೀಮದ್ಭಾಗವತ ಟಿಪ್ಪಣಿ 4)ವಿರಾಟ ಪರ್ವ ಟಿಪ್ಪಣಿ 5)ಉದ್ಯೋಗ ಪರ್ವ ಟಿಪ್ಪಣಿ 6) ರಾಮಾಯಣ ಟಿಪ್ಪಣಿ 7) ವಿರಹಿಮೋದ ಸುಧಾ ವ್ಯಾಖ್ಯಾನ 8) (ಶ್ರೀಸತ್ಯವರ) ಶ್ರೀಪಾದ ಪಾದುಕಾ ಸ್ತೋತ್ರ ವ್ಯಾಖ್ಯಾನಮ್ 9) ತರಂಗಿಣಿ ಶ್ಲೋಕ ವಾಖ್ಯಾ 10) ವಿಷ್ಣು ತತ್ತ್ವ ವಿನಿರ್ಣಯ ಟೀಕಾ ಟಿಪ್ಪಣಿ 12-13) ಭಾಷ್ಯ ದೀಪಿಕಾ ಯುಕ್ತ ವಾಕ್ಯಾ (ಗುರು, ಲಘು)ಗುರುಗಳು ಕನ್ನಡದಲ್ಲಿ ಹಾಡುಗಳನ್ನು ರಚಿಸಿದ್ದು ಇಂದು ಅದು ಲಭ್ಯವಿಲ್ಲ.(ಕೃಪೆ: ಪಂಡಿತ ರತ್ನ ವ್ಯಾಸನಕೆರೆ ಪ್ರಭಂಜನಾಚಾರ್ಯರು ಬರೆದಿರುವ ಸತ್ಯಧರ್ಮತೀರ್ಥರ ಗ್ರಂಥದ ಆಧಾರ).

ಲೇಖನ ರಚಿಸಲು ಮಾರ್ಗದರ್ಶನ ನೀಡಿದ ಪೂಜ್ಯ ಗುರುಗಳಾದ ಪಂಡಿತ ರತ್ನ ಡಾ. ಪ್ರಭಂಜನಾಚಾರ್ಯರವರಿಗೆ ಅನಂತ ಧನ್ಯವಾದಗಳು.
ಈ ಲೇಖನವು ಶಿವಮೊಗ್ಗದ ಡಾ.ಎಸ್. ಹನುಮಂತ ಜೋಯಿಸ್ ರವರ ಅಪರೋಕ್ಷ ಜ್ಞಾನಿ ಯತಿವರೇಣ್ಯ ಶ್ರೀಶ್ರೀಸತ್ಯಧರ್ಮತೀರ್ಥರು, ಶ್ರೀ ಕ್ಷೇತ್ರ ಹೊಳೆಹೊನ್ನೂರು ಗ್ರಂಥದ ಆಧಾರದ ಮೇಲೆ ಬರೆಯಲಾಗಿದೆ.


Get In Touch With Us info@kalpa.news Whatsapp: 9481252093

Tags: Ananth KallapuraKannada News WebsiteLatest News KannadaLocal NewsMadhwa TraditionMalnad NewsShivamogga NewsSpecial Articlesri satyadharma teertharuಶಿವಮೊಗ್ಗಶ್ರೀ ಸತ್ಯಧರ್ಮತೀರ್ಥರುಹೊಳೆಹೊನ್ನೂರು
Share225Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ರಾಷ್ಟ್ರಪತಿ ಪದಕಕ್ಕೆ ಪಾತ್ರರಾದ ಶಿವಮೊಗ್ಗ ಪೊಲೀಸ್ ಇಲಾಖೆಯ ಎಎಸ್‌‘ಐ ಅತೀಕ್

Next Post

ಕೆಎಚ್’ಬಿ ನೂತನ ಅಧ್ಯಕ್ಷ ಆರಗ ಜ್ಞಾನೇಂದ್ರರಿಗೆ ಶಿಲ್ಪಾ ಫೌಂಡೇಶನ್ ವತಿಯಿಂದ ಅಭಿನಂದನೆ

kalpa News

kalpa News

Next Post

ಕೆಎಚ್’ಬಿ ನೂತನ ಅಧ್ಯಕ್ಷ ಆರಗ ಜ್ಞಾನೇಂದ್ರರಿಗೆ ಶಿಲ್ಪಾ ಫೌಂಡೇಶನ್ ವತಿಯಿಂದ ಅಭಿನಂದನೆ

Leave a Reply Cancel reply

Your email address will not be published. Required fields are marked *

No Result
View All Result
ABD Maestro Launches 3 Premium Whiskies in Hyderabad
English Articles

ABD Maestro Launches 3 Premium Whiskies in Hyderabad

by kalpa News
July 21, 2026
0

Kalpa Media House  |  Hyderabad  | Hyderabad emerges as a key destination for luxury spirits as AODH, WOODBURNS, and YELLO...

Read moreDetails
Shivamogga Murder Case Cracked Quickly, Two Arrested

Shivamogga Murder Case Cracked Quickly, Two Arrested

July 21, 2026
RPF Mysuru Division Records Notable Achievements in 2026

RPF Mysuru Division Records Notable Achievements in 2026

July 20, 2026
PM Modi Inaugurates Redeveloped Bantawala Railway Station through Video Conferencing

PM Narendra Modi Inaugurates Redeveloped Bantawala Railway Station through Video Conferencing

July 20, 2026
Indian Railway PM Modi to Inaugurate 4 Modern Railway Stations in Karnataka

Indian Railway | PM Modi To Launch 4 Stations In Karnataka

July 16, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL