ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಲ್ಲಿನ ಗೋಪಾಳಗೌಡ ಬಡಾವಣೆಯ ಜನವಸತಿ ಪ್ರದೇಶದಲ್ಲಿ ಕರಡಿಯೊಂದು ಸಂಚಾರ ಮಾಡಿ, ಓರ್ವ ವ್ಯಕ್ತಿಯ ಮೇಲೆ ದಾಳಿ ನಡೆಸಿದ್ದು, ಸ್ಥಳೀಯರನ್ನು ಆತಂಕ ಮೂಡಿಸಿದೆ.
ಬಡಾವಣೆಯ ರಾಮಕೃಷ್ಣ ಶಾಲಾ ಆವರಣದಲ್ಲಿ ಕರಡಿ ಸಂಚಾರ ಮಾಡಿದೆ ಎಂದು ವರದಿಯಾಗಿದೆ.
ರಾಮಕೃಷ್ಣ ಶಾಲೆ ಬಳಿಯ ಡಿವಿಜಿ ಉದ್ಯಾನವನ ಪ್ರದೇಶದಲ್ಲಿ ಕರಡಿ ಕಾಣಿಸಿಕೊಂಡಿದೆ. ಮುAಜಾನೆ ವಾಕಿಂಗ್ ಹೋಗಿದ್ದ ತುಕಾರಾಂ ಶೆಟ್ಟಿ ಎನ್ನುವವರ ಮೇಲೆ ಕರಡಿ ದಾಳಿ ನಡೆಸಿ, ಪರಚಿ ಪರಾರಿಯಾಗಿದೆ.
ಉದ್ಯಾನವನದ ಪಕ್ಕದಲ್ಲಿ ಬೆಳೆದಿರುವ ಪೊದೆಯಲ್ಲಿ ಕರಡಿ ಅವಿತುಕೊಂಡಿದ್ದು, ಸ್ಥಳೀಯರನ್ನು ಆತಂಕ ಮೂಡಿಸಿದೆ.
ಅರಣ್ಯ ಇಲಾಖೆ ಸಿಬ್ಬಂದಿ ದೌಡು
ಇನ್ನು, ವಿಷಯ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪಶುವೈದ್ಯರೂ ಸಹ ಸ್ಥಳಕ್ಕೆ ಆಗಮಿಸಿದ್ದು, ಸೆರೆ ಕಾರ್ಯಾಚರಣೆ ಆರಂಭಿಸಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿ ಕರಡಿ ಸೆರೆಗಾಗಿ ಬಲೆ ಬೀಸಿ, ಕಾರ್ಯಾಚರಣೆ ನಡೆಸುತ್ತಿದ್ದಾರೆ.
ದಾಳಿಗೊಳಗಾದ ತುಕಾರಾಂ ಶೆಟ್ಟಿ ಅವರು ಮಾತನಾಡಿ, ವಾಕಿಂಗ್ ಹೋಗುವ ವೇಳೆ ಕರಡಿ ನಾಯಿಯೊಂದನ್ನು ಅಟ್ಟಿಸಿಕೊಂಡು ಬರುತ್ತಿತ್ತು. ಈ ವೇಳೆ ಏಕಾಏಕಿ ನನ್ನ ಮೇಳೆ ದಾಳಿ ನಡೆಸಿ, ಪರಚಿ ಪರಾರಿಯಾಯಿತು ಎಂದಿದ್ದಾರೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post