ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಸವಿತಾ ಸಮಾಜದ ವಿವಿದೋದ್ದೇಶ ಸಹಕಾರ ಸಂಘದ ನಿರ್ದೇಶಕರ ಚುನಾವಣೆಯಲ್ಲಿ ಎನ್.ಎಸ್. ರಮೇಶ್ ಗಅವರ ನೇತೃತ್ವದ ತಂಡ ಜಯಭೇರಿ ಭಾರಿಸಿದೆ.
2020–2025ರ ಅವಧಿಗಾಗಿ ಭಾನುವಾರ ನಿರ್ದೇಶಕರ ಚುನಾವಣೆ ನಡೆಯಿತು. ಅಂತಿಮವಾಗಿ ಸಂಘಕ್ಕೆ ಎನ್.ಎಸ್. ರಮೇಶ್ ಅವರು ಗೌರವ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಈ ಕುರಿತಂತೆ ಕಲ್ಪ ನ್ಯೂಸ್ ಜೊತೆಯಲ್ಲಿ ಮಾತನಾಡಿದ ರಮೇಶ್ ಗೌಡ, ನಿರ್ದೇಶಕರ ಚುನಾವಣೆಯಲ್ಲಿ ಭಾರೀ ಬಹುಮತದಿಂದ ನನ್ನ ತಂಡವು ಜಯಶೀಲರಾಗಲು ಮತ ನೀಡುವ ಮೂಲಕ ಕಾರಣಕರ್ತರಾದ ಸವಿತಾ ಸಮಾಜದ ವಿವಿದೋದ್ದೇಶ ಸಹಕಾರ ಸಂಘದ ಎಲ್ಲ ಸದಸ್ಯರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದರು.
ನೂತನವಾಗಿ ಆಯ್ಕೆಯಾದ ನಿರ್ದೇಶಕರುಗಳು:
ಲತಾ ರಮೇಶ್
ನಾಗವೇಣಿ
ಲೀಲಾವತಿ
ಹೀರೆಲಾಲ್
ರಾಮದಾಸ್
ಜಯರಾಂ
ಪರಮೇಶ್
ನರಸಿಂಹ ಮೂರ್ತಿ
ಭಾಗ್ಯಮ್ಮ
ವೆಂಕಟೇಶ್
ತಿಪ್ಪೇಸ್ವಾಮಿ
ವಿಶ್ವನಾಥ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post