ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ಪಾಲಿಕೆ ದಸರಾದ (Shivamogga Dasara) ಕೊನೆಯ ದಿನವಾದ ಇಂದು ಜಂಬೂ ಸವಾರಿ ವೇಳೆ ಆನೆಗಳು ದಿಕ್ಕೆಟ್ಟು ಓಡಿ ಅವಘಡ ಸೃಷ್ಠಿಯಾಗಿರುವ ಘಟನೆ ಕುರಿತಂತೆ ಶಾಸಕ ಚನ್ನಬಸಪ್ಪ (MLA Chenni) ಹಾಗೂ ಜಿಲ್ಲಾ ರಕ್ಷಣಾಧಿಕಾರಿ ನಿಖಲ್ ಸಾರ್ವಜನಿರು ಆತಂಕ ಪಡದಂತೆ ಮನವಿ ಮಾಡಿದ್ದಾರೆ.
ಘಟನೆ ಕುರಿತಂತೆ ಮಾತನಾಡಿರುವ ಜಿಲ್ಲಾ ರಕ್ಷಣಾಧಿಕಾರಿ ನಿಖಲ್, ಮೆರವಣಿಗೆ ಹೊರಟು ಸುಮಾರು 500 ಮೀಟರ್ ತಲುಪುವ ವೇಳೆ ಅಂಬಾರಿ ಹೊತ್ತ ಸೋಮಣ್ಣ ಎಂಬ ಆನೆ ಏಕಾಏಕಿ ಹಿಂದಕ್ಕೆ ಓಡಿ ಹೋಗಿ ದಾಳಿ ನಡೆಸಿದೆ ಎಂದಿದ್ದಾರೆ.
ಅದೃಷ್ಠವಷಾತ್ ಯಾರಿಗೂ ಯಾವುದೇ ರೀತಿಯಲ್ಲಿ ಹಾನಿಯಾಗಿಲ್ಲ. ಆದರೆ, ಚಾಮುಂಡೇಶ್ವರಿ ವಿಗ್ರಹ ಹಾಗೂ ಅಂಬಾರಿ ಕೆಳಕ್ಕೆ ಬಿದ್ದು ಹಾನಿಯಾಗಿದ್ದು, ತಕ್ಷಣವೇ ಅದನ್ನು ತೆರವುಗೊಳಿಸಲಾಗಿದೆ. ಆದರೆ, ಕೆಲವು ವಾಹನಗಳು ಜಖಂಗೊAಡಿವೆ ಎಂದು ಮಾಹಿತಿ ನೀಡಿದ್ದಾರೆ.
ಘಟನೆ ನಡೆದ ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಅವರು ಸ್ಥಳಕ್ಕೆ ಆಗಮಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನು, ಘಟನೆ ಕುರಿತಂತೆ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ಇಂತಹ ಸಂದರ್ಭದಲ್ಲಿ ಪೊಲೀಸ್ ಇಲಾಖೆಯೊಂದಿಗೆ ಸಹಕಾರ ನೀಡಿ. ಯಾರೂ ಸ್ಥಳಕ್ಕೆ ಆಗಮಿಸಬೇಡಿ. ಎಲ್ಲರೂ ಫ್ರೀಡಂ ಪಾರ್ಕ್’ಗೆ ತೆರಳಿ, ಅಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ ಎಂದು ಮನವಿ ಮಾಡಿದ್ದಾರೆ.
ಆತಂಕ ಬೇಡ : ಶಾಸಕ ಚನ್ನಬಸಪ್ಪ ಮನವಿ
ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಆನೆಗಳ ನಡುವೆ ಗುದ್ದಾಟ ಸಂಭವಿಸಿದ ಹಿನ್ನೆಲೆಯಲ್ಲಿ ಈ ಬಾರಿ ಅಂಬಾರಿ ಉತ್ಸವ ಇರುವುದಿಲ್ಲ ಎಂದು ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ (ಚೆನ್ನಿ) ತಿಳಿಸಿದ್ದಾರೆ.
ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡದೆ, ಆತಂಕಕ್ಕೆ ಒಳಗಾಗದೆ ದಸರಾ ಸಂಪ್ರದಾಯದ ಧಾರ್ಮಿಕ ಉತ್ಸವಗಳಲ್ಲಿ ಶ್ರದ್ಧಾ-ಭಕ್ತಿಯಿಂದ ಪಾಲ್ಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.
ನಗರದ ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾಗಿರುವ ಅಂಬಾರಿ ಉತ್ಸವ ಈ ಬಾರಿ ನಡೆಯುವುದಿಲ್ಲವಾದರೂ, ಸಾಂಪ್ರದಾಯಿಕ ದೇವಾನುದೇವತೆಗಳ ಉತ್ಸವಗಳು ಹಾಗೂ ಅಲ್ಲಮಪ್ರಭು ಮೈದಾನದಲ್ಲಿ ನಡೆಯಲಿರುವ ಬನ್ನಿ ಮುಡಿಯುವ ಧಾರ್ಮಿಕ ಕಾರ್ಯಕ್ರಮಗಳು ಎಂದಿನಂತೆ ನಡೆಯಲಿವೆ ಎಂದು ಶಾಸಕರು ಸ್ಪಷ್ಟಪಡಿಸಿದ್ದಾರೆ.
ವದಂತಿಗಳಿಗೆ ಕಿವಿಗೊಡದಂತೆ ಮನವಿ
ಈ ಕುರಿತು ಸಾರ್ವಜನಿಕರಿಗೆ ಮನವಿ ಮಾಡಿರುವ ಶಾಸಕ ಎಸ್.ಎನ್. ಚನ್ನಬಸಪ್ಪ, ಶಿವಮೊಗ್ಗ ನಗರದ ಸಮಸ್ತ ನಾಗರಿಕರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು. ಯಾವುದೇ ರೀತಿಯ ಆತಂಕ ಅಥವಾ ಗೊಂದಲಕ್ಕೆ ಒಳಗಾಗದೆ ಸಾಂಪ್ರದಾಯಿಕ ದೇವಾನುದೇವತೆಗಳ ಉತ್ಸವಗಳಲ್ಲಿ ಎಂದಿನಂತೆ ಶ್ರದ್ಧಾ-ಭಕ್ತಿಯಿಂದ ಪಾಲ್ಗೊಳ್ಳಬೇಕು ಎಂದು ತಿಳಿಸಿದ್ದಾರೆ.
ದಸರಾ ಉತ್ಸವದ ಸಂದರ್ಭದಲ್ಲಿ ನಡೆದ ಘಟನೆಯಿಂದ ಸಾರ್ವಜನಿಕರಲ್ಲಿ ಉಂಟಾಗಿರುವ ಆತಂಕದ ನಡುವೆ, ಧಾರ್ಮಿಕ ಕಾರ್ಯಕ್ರಮಗಳ ಕುರಿತು ಸ್ಪಷ್ಟನೆ ನೀಡಿರುವ ಶಾಸಕರು, ಜನರು ಶಾಂತವಾಗಿ ಉತ್ಸವಗಳಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದಾರೆ.

Shivamogga Dasara: ಅಂಬಾರಿ ಉತ್ಸವ ಇರುವುದಿಲ್ಲ
ಶಿವಮೊಗ್ಗ ದಸರಾ ಮೆರವಣಿಗೆಯ ವೇಳೆ ಸೋಮಣ್ಣ ಮತ್ತು ಬಹದ್ದೂರ್ ಆನೆಗಳ ನಡುವೆ ಗುದ್ದಾಟ ನಡೆದ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ದೇವಿಯ ವಿಗ್ರಹವಿದ್ದ ಮಂಟಪ ಕೆಳಕ್ಕೆ ಬಿದ್ದ ಘಟನೆ ಆತಂಕಕ್ಕೆ ಕಾರಣವಾಗಿತ್ತು. ಈ ಬೆಳವಣಿಗೆಯ ಬಳಿಕ ಈ ಬಾರಿ ಅಂಬಾರಿ ಉತ್ಸವವನ್ನು ನಡೆಸದಿರಲು ನಿರ್ಧರಿಸಲಾಗಿದೆ ಎಂದು ಶಾಸಕ ಚನ್ನಬಸಪ್ಪ ತಿಳಿಸಿದ್ದಾರೆ.
ಆದರೆ, ಅಂಬಾರಿ ಉತ್ಸವ ಇಲ್ಲದಿದ್ದರೂ ನಗರದ ಸಾಂಪ್ರದಾಯಿಕ ಧಾರ್ಮಿಕ ಆಚರಣೆಗಳು ಮುಂದುವರಿಯಲಿವೆ. ದಸರಾ ಸಂಪ್ರದಾಯದ ಭಾಗವಾಗಿ ನಡೆಯುವ ದೇವಾನುದೇವತೆಗಳ ಉತ್ಸವಗಳು ಹಾಗೂ ಬನ್ನಿ ಮುಡಿಯುವ ಕಾರ್ಯಕ್ರಮಗಳು ನಿಗದಿತ ರೀತಿಯಲ್ಲಿ ನಡೆಯಲಿವೆ ಎಂದು ಅವರು ಹೇಳಿದ್ದಾರೆ.

ಅಲ್ಲಮಪ್ರಭು ಮೈದಾನದಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮ
ಶಿವಮೊಗ್ಗ ನಗರದ ಐತಿಹಾಸಿಕ ಅಲ್ಲಮಪ್ರಭು ಮೈದಾನದಲ್ಲಿ (ಫ್ರೀಡಂ ಪಾರ್ಕ್) ಪವಿತ್ರ ಬನ್ನಿ ಮುಡಿಯುವ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಪೂಜಾ ಕೈಂಕರ್ಯದಲ್ಲಿ ಪಾಲ್ಗೊಳ್ಳಬೇಕು ಎಂದು ಶಾಸಕ ಚನ್ನಬಸಪ್ಪ ವಿನಂತಿಸಿದ್ದಾರೆ.
ದಸರಾ ಹಬ್ಬದ ಪ್ರಮುಖ ಧಾರ್ಮಿಕ ಆಚರಣೆಗಳಲ್ಲಿ ಒಂದಾದ ಬನ್ನಿ ಮುಡಿಯುವ ಕಾರ್ಯಕ್ರಮವು ಭಕ್ತಿಭಾವದಿಂದ ನಡೆಯಲಿದ್ದು, ಸಾರ್ವಜನಿಕರು ಯಾವುದೇ ಗೊಂದಲಕ್ಕೆ ಒಳಗಾಗದೆ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಅವರು ತಿಳಿಸಿದ್ದಾರೆ.
Also Read>> ಶಿವಮೊಗ್ಗ : ದಿಕ್ಕೆಟ್ಟು ಓಡಿದ ದಸರಾ ಆನೆಗಳು | ಚಾಮುಂಡೇಶ್ವರಿ ವಿಗ್ರಹ ಸಹಿತ ಕೆಳಕ್ಕೆ ಬಿದ್ದ ಅಂಬಾರಿ | ಏನಾಯ್ತು?
ಧಾರ್ಮಿಕ ಸಂಪ್ರದಾಯಗಳಿಗೆ ಅಡ್ಡಿಯಿಲ್ಲ
ಅಂಬಾರಿ ಉತ್ಸವ ರದ್ದಾಗಿರುವ ಹಿನ್ನೆಲೆಯಲ್ಲಿ ದಸರಾ ಆಚರಣೆಗಳ ಬಗ್ಗೆ ಸಾರ್ವಜನಿಕರಲ್ಲಿ ಗೊಂದಲ ಉಂಟಾಗದಂತೆ ಶಾಸಕ ಚನ್ನಬಸಪ್ಪ ಸ್ಪಷ್ಟನೆ ನೀಡಿದ್ದಾರೆ. ಅಂಬಾರಿ ಉತ್ಸವ ನಡೆಯದಿದ್ದರೂ ದೇವಾನುದೇವತೆಗಳ ಸಾಂಪ್ರದಾಯಿಕ ಉತ್ಸವಗಳು ಹಾಗೂ ಅಲ್ಲಮಪ್ರಭು ಮೈದಾನದ ಬನ್ನಿ ಮುಡಿಯುವ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಅವರು ತಿಳಿಸಿದ್ದಾರೆ.
ಒಟ್ಟಿನಲ್ಲಿ, ಶಿವಮೊಗ್ಗ ದಸರಾ ಉತ್ಸವದಲ್ಲಿ ಈ ಬಾರಿ ಅಂಬಾರಿ ಮೆರವಣಿಗೆ ಇರುವುದಿಲ್ಲ. ಆದರೆ ಧಾರ್ಮಿಕ ಆಚರಣೆಗಳು ಮುಂದುವರಿಯಲಿದ್ದು, ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡದೆ ಶಾಂತಿ ಮತ್ತು ಭಕ್ತಿಯಿಂದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಶಾಸಕ ಎಸ್.ಎನ್. ಚನ್ನಬಸಪ್ಪ ಮನವಿ ಮಾಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








