ಶಿವಮೊಗ್ಗ: ಮಲವಗೊಪ್ಪದಲ್ಲಿರುವ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿಯೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ.
ಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿ ಕೇಂದ್ರ ಕಾರಾಗೃಹಲ್ಲಿದ್ದ ಭದ್ರಾವತಿ ಮೂಲದ ಇರ್ಫಾನ್(28) ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಎನ್ನಲಾಗಿದ್ದು, ಇಂದು ನಸುಕಿನಲ್ಲಿ ತೀವ್ರ ಅಸ್ವಸ್ತಗೊಂಡಿದ್ದ. ಈತನನ್ನು ತತಕ್ಷಣವೇ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ, 8 ಗಂಟೆ ವೇಳೆಗೆ ಮತ್ತೆ ಅಸ್ವಸ್ತಗೊಂಡ ಆತ ಮೃತಪಟ್ಟಿದ್ದಾನೆ.
ಈತನ ಮೇಲೆ ಸಾಗರ ಪೊಲೀಸ್ ಠಾಣೆಯಲ್ಲಿ ಕ್ರೈಂ ನಂಬರ್ 13/18 ಯು/ಎಸ್ 363, 376(ಐಐ) 4.6 ಪೋಸ್ಕೊ ಕಾಯ್ದೆ ಅಡಿ ದೂರು ದಾಖಲಾಗಿತ್ತು. ಜನವರಿ 28, 2018 ರಲ್ಲಿ ಈತ ಜೈಲು ಸೇರಿದ್ದನು.
Discussion about this post