ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರೋಟರಿ ಶಿವಮೊಗ್ಗ ಮಲ್ನಾಡ್ ಮತ್ತು ಸರ್ಜಿ ಆಸ್ಪತ್ರೆಗಳ ಸಮೂಹದ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಪೋಷಕಾಂಶ ಸಪ್ತಾಹ ದಿನದ ಅಂಗವಾಗಿ ಶುಕ್ರವಾರ ನಗರದ ಗೋಪಾಲಗೌಡ ಬಡಾವಣೆ ಕೆಎಚ್’ಬಿ ಕಾಲೋನಿಯ ರಾಜೇಶ್ವರಿ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಪೋಷಕಾಂಶಯುಕ್ತ ಮಾತ್ರೆಗಳನ್ನು ವಿತರಣೆ ಮಾಡಲಾಯಿತು.
ಈ ಶಾಲೆಯ ವಿದ್ಯಾರ್ಥಿಗಳಿಗಾಗಿ ಪೋಷಕಾಂಶಗಳ ಮಹತ್ವದ ಕುರಿತು ಮತ್ತು ಉಪನ್ಯಾಸ ಮತ್ತು ವಿದ್ಯಾರ್ಥಿಗಳಿಗೆ ಸರ್ಜಿ ಆಸ್ಪತ್ರೆಯ ವೈದ್ಯರ ತಂಡದಿಂದ ಹಿಮೋಗ್ಲೋಬಿನ್ ಪರೀಕ್ಷೆ ನಡೆಸಿ ಪೋಷಕಾಂಶಗಳ ಕೊರತೆ ಇರುವ ಮಕ್ಕಳಿಗೆ ಪೋಷಕಾಂಶಯುಕ್ತ ಮಾತ್ರೆಗಳನ್ನು ವಿತರಿಸಲಾಯಿತು.
ಈ ವೇಳೆ ಪೋಷಕಾಂಶಗಳ ಬಗ್ಗೆ ಸರ್ಜಿ ಆಸ್ಪತ್ರೆಯ ಡಯಟೀಶಿಯನ್ ಶ್ರೇಯಸ್ ಮತ್ತು ಬಾಯಿ ಆರೋಗ್ಯದ ಬಗ್ಗೆ ದಂತಚಿಕಿತ್ಸಾ ತಜ್ಞರಾದ ಡಾ. ದೀಪ ಅರುಣ್ ಅವರು ವಿಶೇಷ ಉಪನ್ಯಾಸ ನೀಡಿ ಪೋಷಕಾಂಶಗಳ ಮಾಹಿತಿಯನ್ನೊಳಗೊಂಡ ಕೈಪಿಡಿಯನ್ನು ಬಿಡುಗಡೆಗೊಳಿಸಲಾಯಿತು.
ಶಾಲಾ ಮುಖ್ಯೋಪಾಧ್ಯಾಯರಾದ ಧನಂಜಯ, ರೋಟರಿ ಶಿವಮೊಗ್ಗ ಮಲ್ನಾಡ್ ಅಧ್ಯಕ್ಷರಾದ ಮುಸ್ತಾಕ್, ಕಾರ್ಯದರ್ಶಿಗಳಾದ ಶ್ರೀಕಾಂತ್ ಹಾಗೂ ಸರ್ಜಿ ಆಸ್ಪತ್ರೆಯ ಸಿಬ್ಬಂದ್ದಿಗಳಾದ ಮಂಜಪ್ಪ, ದಿನೇಶ್ ಸೇರಿದಂತೆ ಶಾಲೆಯ ಆಡಳಿತ ವರ್ಗ, ಶಿಕ್ಷಕ ವರ್ಗ, ವಿದ್ಯಾರ್ಥಿಗಳು ಭಾಗಿಯಾಗಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Also read: ವಾಲಿಬಾಲ್ ಪಂದ್ಯಾವಳಿ: ಕ್ರೈಸ್ಟ್‌ಕಿಂಗ್ ತಂಡ ಸತತ ಎರಡನೇ ಬಾರಿಗೆ ಮೈಸೂರು ವಿಭಾಗಮಟ್ಟಕ್ಕೆ ಆಯ್ಕೆ
Discussion about this post